ಪೆಟಿಎಂ ಬಳಕೆದಾರರು ತಮ್ಮ KYC ಅನ್ನು ಪೂರ್ಣಗೊಳಿಸದಿದ್ದರೆ ತಮ್ಮ ಹಣವನ್ನು ಕಳೆದುಕೊಳ್ಳುವುದಿಲ್ಲ ಆದಾಗ್ಯೂ ಅವರು ಎಲ್ಲಾ ಕಾರ್ಯನಿರ್ವಹಣೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ವಾಲೆಟ್ಗಳು ಆಧಾರ್ ಕಾರ್ಡ್ ಅನ್ನು ಪರಿಶೀಲನೆಗಾಗಿ ಒಂದು ದಾಖಲೆಯಾಗಿ ಪ್ರಮುಖವಾಗಿ ಪ್ರಾಮುಖ್ಯತೆಯನ್ನು ನೀಡುತ್ತಿವೆ.
ಅದ್ದಕ್ಕಾಗಿ ಬಳಕೆದಾರರು ತಮ್ಮ ಬಳಿಯಲ್ಲಿರುವ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿರುವ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದ ಹೆಚ್ಚುವರಿ ದಾಖಲೆಗಳನ್ನು ನೀಡಬಹುದು. ಇದರಲ್ಲಿ ನಿಜಕ್ಕೂ ಹಲವಾರು ರೀತಿಯ KYC ಯನ್ನು ಮಾಡಬವುದು ಅಂದ್ರೆ.
1. ಸಂಪೂರ್ಣವಾದ KYC (ವೈಯಕ್ತಿಕವಾಗಿ ಬೇಟಿ ನೀಡಿ ಪರಿಶೀಲನೆ): ಏನಪ್ಪಾ ಈ ವೈಯಕ್ತಿಕವಾಗಿ ಬೇಟಿ ನೀಡಿ ಪರಿಶೀಲನೆ ಅಂದ್ರೆ ಒಬ್ಬ ಬಳಕೆದಾರ ತನ್ನ ಸಂಪೂರ್ಣ ಪರಿಶೀಲನೆ ಪ್ರಕ್ರಿಯೆಯನ್ನು ಅನುಸರಿಸಿದರೆ ಅಂದರೆ ಅವನು/ಅವಳು ಹತ್ತಿರದ ಯಾವುದೇ KYC ಔಟ್ಲೆಟ್ಗೆ ಹೋಗಿ ಅದನ್ನು ಪರಿಶೀಲಿಸಲು ಡಿಜಿಟಲ್ ವಾಲೆಟ್ ಅಪ್ಲಿಕೇಶನ್ನ ಬಳಕೆಯಲ್ಲಿ ಯಾವುದೇ ತೊಂದರೆಯಿಲ್ಲದೆ ಮಾಡಬವುದು.
ಒಮ್ಮೆ ಈ KYC ಮಾಡಿದ ಬಳಿಕ ಬಳಕೆದಾರರು ಅನೇಕ ವರ್ಷಗಳ ಈ ವಾಲೆಟ್ನ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಮತ್ತು ಗರಿಷ್ಠ 1,00,000 ರೂಗಳಷ್ಟು ವಾಲೆಟ್ ಬ್ಯಾಲೆನ್ಸ್ ಹೊಂದಬಹುದು. ಅಲ್ಲದೆ ಇತರ Paytm ಬಳಕೆದಾರರು ಅಥವಾ ಬ್ಯಾಂಕ್ ಖಾತೆಗಳಿಗೆ ಹಣವನ್ನು ಸುಲಭ & ಸರಳವಾಗಿ ಕಳುಹಿಸಬಹುದು ಜೊತೆಗೆ ರೀಚಾರ್ಜ್ಗಳು, ಶಾಪಿಂಗ್ ಮತ್ತು ಇತರ ಪಾವತಿಗಳಿಗೆ ಪಾವತಿಸಬಹುದು.
2. ಸಂಪೂರ್ಣವಾದ KYC (ಆಧಾರ್ OTPಯೊಂದಿಗೆ): ಈಗ ಈ ಸಂಪೂರ್ಣವಾದ KYC ಆಧಾರ್ OTPಯೊಂದಿಗೆ ಅಂದ್ರೆ ಒಂದು ವೇಳೆ ಬಳಕೆದಾರರು ತಾವೇ ವೈಯಕ್ತಿಕವಾಗಿ ಪರಿಶೀಲನೆಗೆ ಹೋಗಬಾರದೆಂದು ನಿರ್ಧರಿಸಿ ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮ ಪೇಟಮ್ ವಾಲೆಟ್ನೊಂದಿಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ OTP ಯೊಂದಿಗೆ ಸಂಪರ್ಕಿಸಿದರೆ ಅವರು ಮೇಲಿನ ಎಲ್ಲಾ ವೈಶಿಷ್ಟ್ಯಗಳನ್ನು ಬಳಸಲು ಅರ್ಹರಾಗುತ್ತಾರೆ. ಆದರೆ ಇದರ ವ್ಯಾಲಿಡಿಟಿ ಮಾತ್ರ ಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಇದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ.
3. ಕನಿಷ್ಠ ಮಟ್ಟದ KYC: ಒಂದು ವೇಳೆ ನೀವು ಯಾವುದೇ ಸರ್ಕಾರದ ಅನುಮೋದಿತ ಐಡಿಗಳಾದ ಆಧಾರ್, ಪಾನ್ ಕಾರ್ಡ್, NREGA ಕಾರ್ಡ್, ಪಾಸ್ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಬಳಸಿಕೊಂಡು ಬಳಕೆದಾರರು ತಮ್ಮ ಪೇಟ್ಮೆಲೆಟ್ನ್ನು ಲಿಂಕ್ ಮಾಡಬವುದು. ಆದರೆ ಹೀಗೆ ಮಾಡಿದರೆ ಬಳಕೆದಾರರು ಕೇವಲ 10,000 ರಷ್ಟು ಗರಿಷ್ಠ ವಾಲೆಟ್ ಬ್ಯಾಲೆನ್ಸ್ ಅನ್ನು ಉಳಿಸಿಕೊಳ್ಳಬಹುದು.
ಮತ್ತು ವಾಲೆಟ್ಗೆ ಹಣವನ್ನು ಕೂಡ ಸೇರಿಸಬಹುದಾದರೂ ಕ್ಯಾಶ್ಬ್ಯಾಕ್ಗಳನ್ನು ಸ್ವೀಕರಿಸಬವುದು. ಅಲ್ಲದೆ ಆನ್ಲೈನ್ ರೀಚಾರ್ಜ್ಗಳಿಗೆ ಮತ್ತು ಇತರ ಖರ್ಚುಗಳಿಗೆ ಪಾವತಿಸಬವುದು. ಆದರೆ ಇತರ Paytm ಬಳಕೆದಾರರಿಗೆ ಅಥವಾ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ.
4. ಒಂದು ವೇಳೆ KYC ಮಾಡದಿದ್ದರೆ: ಒಂದು ವೇಳೆ ನೀವು KYC ಮಾಡದಿದ್ದರೆ ಬಳಕೆದಾರರಿಗೆ ಯಾವುದೇ ಐಡಿ ಪುರಾವೆಗಳನ್ನು ಅವರ ಪೇಟಮ್ ವ್ಯಾಲೆಟ್ಗಳೊಂದಿಗೆ ಲಿಂಕ್ ಮಾಡುವುದಿಲ್ಲ. ವಾಲೆಟ್ ಬಳಕೆದಾರರು ತಮ್ಮ ವಾಲೆಟ್ಗೆ ಹಣ ಸೇರಿಸಲು ಅಥವಾ ಕ್ಯಾಶ್ಬ್ಯಾಕ್ಗಳನ್ನು ಸ್ವೀಕರಿಸಲಾಗುವುದಿಲ್ಲ.
ಇನ್ನು ಮುಂದೆ ಅವರು ಇತರ ಪೇಟ್ಮ್ ಬಳಕೆದಾರರಿಗೆ ಯಾವುದೇ ರೀತಿಯ ವರ್ಗಾವಣೆ ಮಾಡುವಂತಿಲ್ಲ. ಅವರು ಅಸ್ತಿತ್ವದಲ್ಲಿರುವ ಎಲ್ಲಾ ಹಣವನ್ನು ಕೇವಲ ರಿಚಾರ್ಜ್ ಉದ್ದೇಶಕ್ಕಾಗಿ ಬಳಸಿಕೊಂಡು ಪಾವತಿಗಳನ್ನು ಮಾಡಬವುದಷ್ಟೇ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile