ನಿಮಗೀಗಾಗಲೇ ಗೊತ್ತಿರುವಂತೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸೇವೆ ನೀಡಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಧೂಳೆಬ್ಬಿಸುತ್ತಿರುವ ರಿಲಾಯನ್ಸ್ ಜಿಯೋ ದೇಶದ ಜನರಿಗೆ ಪ್ರತಿ ತಿಂಗಳು 50,000 ಹಣಗಳಿಸುವ ಸುವರ್ಣ ಅವಕಾಶವನ್ನು ನೀಡುತ್ತಿದೆ. ಜಿಯೋ ಜೊತೆಗೂಡಿ ಒಪ್ಪಂದ ಮಾಡಿಕೊಂಡವವರಿಗೆ ಪ್ರತಿ ತಿಂಗಳು 50,000ಕ್ಕಿಂತ ಹೆಚ್ಚು ಹಣವನ್ನು ಗಳಿಸುವ ಅವಕಾಶ ಲಭ್ಯವಾಗಿದೆ.
ದೇಶದಾಧ್ಯಂತ ನೆಟ್‌ವರ್ಕ್ ವಿಸ್ತರಣೆಗೆ ಪ್ರಯತ್ನಿಸುತ್ತಿರುವ ರಿಲಾಯನ್ಸ್ ಜಿಯೋ ದೇಶದಲ್ಲಿ ದೊಡ್ಡ ಸಂಖ್ಯೆಯ ನೆಟ್‌ವರ್ಕ್ ಟವರ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಂಡವಾಳವನ್ನು ಜಿಯೋ ಹೂಡುತ್ತಿದ್ದು ಈ ಹಣದಲ್ಲಿ ಜನಸಾಮಾನ್ಯರನ್ನು ತನ್ನ ಪಾಲುದಾರರನ್ನು ನೇಮಿಸಿಕೊಳ್ಳಲು ಜಿಯೋ ಮುಂದಾಗಿದೆ.
ದೇಶದಾಧ್ಯಂತ ನೆಟ್‌ವರ್ಕ್ ವಿಸ್ತರಣೆಗೆ ಪ್ರಯತ್ನಿಸುತ್ತಿರುವ ರಿಲಾಯನ್ಸ್ ಜಿಯೋ ದೇಶದಲ್ಲಿ ದೊಡ್ಡ ಸಂಖ್ಯೆಯ ನೆಟ್‌ವರ್ಕ್ ಗೋಪುರಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಂಡವಾಳವನ್ನು ಜಿಯೋ ಹೂಡುತ್ತಿದ್ದು, ಈ ಹಣದಲ್ಲಿ ಸಾಮಾನ್ಯರನ್ನು ತನ್ನ ಪಾಲುದಾರರನ್ನು ನೇಮಿಸಿಕೊಳ್ಳಲು ಜಿಯೋ ಮುಂದಾಗಿದೆ.
ಜಿಯೋವಿನ ಈ ಯೋಜನೆಯಿಂದ ಒಂದು ಲಕ್ಷ ಜನರಿಗೆ ಲಾಭವಾಗಲಿದ್ದು ರಿಲಾಯನ್ಸ್ ಜಿಯೋ ಸ್ಥಾಪಿಸುತ್ತಿರುವ ನೆಟ್‌ವರ್ಕ್ ಟವರ್ಗಳ ಯೋಜನೆಯಲ್ಲಿ ಜನ ಸಾಮಾನ್ಯರು ಪಾಲುದಾರರಾಗುವುದು ಹೇಗೆ? ಜಿಯೋ ಹೇಗೆ ಹಣ ಪಾವತಿಸುತ್ತದೆ? ಜಿಯೋವಿನ ಈ ಯೋಜನೆಯನ್ನು ಜನರು ಹೇಗೆ ಬಳಸಿಕೊಳ್ಳಬಹುದು ಇಲ್ಲಿ ತಿಳಿಯಿರಿ.
ಫೋನಿನ ಕರೆ ಸ್ಥಗಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಯೋ ದೆಶದಾಧ್ಯಂತ ಸುಮಾರು ಒಂದು ಲಕ್ಷ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಮುಂದಾಗಿದೆ. ಹಾಗಾಗಿ, 50,000 ಕೋಟಿ ರೂ. ಬಂಡವಾಳವನ್ನು ಹೂಡಲು ಜಿಯೋ ಕಂಪೆನಿ ಮುಂದಾಗಿದ್ದು, ಸಾಮಾನ್ಯ ಜನರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿದೆ.
ಜಿಯೋ ತನ್ನ ನೆಟ್‌ವರ್ಕ್ ಸ್ಥಾಪಿಸಲು ಜಾಗವನ್ನು ಕಲ್ಪಿಸುವ ಜನರಿಗೆ ಜಿಯೋ ಪ್ರತಿ ತಿಂಗಳು 50,000 ರೂ.ವರೆಗೂ ಹಣವನ್ನು ಪಾವತಿಸಲು ಮುಂದಾಗಿದೆ. ಒಂದು ಪ್ರದೇಶದ ಕನಿಷ್ಠ 2,000 ಚದರ ಅಡಿ ಭೂಮಿಯನ್ನು ಹೊಂದಿರುವ ಅಥವಾ ಛಾವಣಿಯಾದರೆ 500 ಚದರ ಅಡಿ ಜಾಗವನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ನಿಮ್ಮ ಆಸ್ತಿಯಲ್ಲಿ ನೆಟ್‌ವರ್ಕ್ ಸ್ಥಾಪಿಸಲು ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಆಸ್ತಿಯ ವಿವರಗಳನ್ನು ಒದಗಿಸಬೇಕು. ಆಸ್ತಿಯ ಛಾಯಾಚಿತ್ರ, ಭೂಮಿ ಸಮೀಕ್ಷೆ ವರದಿ ಐಡಿ ಪುರಾವೆ ಮತ್ತು ಆಸ್ತಿ ವಸತಿ ಅಥವಾ ವಾಣಿಜ್ಯವೇ ಎಂಬುದನ್ನು ನಿರ್ದಿಷ್ಟಪಡಿಸಿದ ನಂತರ ಕಂಪೆನಿಗೆ ಆ ಜಾಗ ಒಪ್ಪಿಗೆಯಾದರೆ ಕಂಪನಿಯು ಆಸ್ತಿಯ ಮಾಲೀಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತದೆ.
ಆಸಕ್ತ ಅಭ್ಯರ್ಥಿಯು ದೊಡ್ಡ ಛಾವಣಿ ಅಥವಾ ಭೂಮಿ ಹೊಂದಿದ್ದರೆ ರಿಲಯನ್ಸ್ ಜಿಯೋ ಟವರ್‌ಗಾಗಿ ಯಾರಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಕಂಪೆನಿಯು ಅಪ್ಲಿಕೇಶನ್ ಅನ್ನು ಸ್ವೀಕರಿಸಿ ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಮುಂದಾದರೆ ಬಾಡಿಗೆಯನ್ನು ನಿರ್ಧರಿಸುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮೇಲೆ ಹಣದ ಮೊತ್ತ ಬದಲಾಗುತ್ತದೆ.