ಹೊಸ Xiaomi Mi TV 4 ಇದು 4.9mm ಅಲ್ಟ್ರಾ ತೆಳುವಾದ ಫ್ರೇಮ್ ರಹಿತ ಲೋಹದ ದೇಹವನ್ನು ಹೊಂದಿದ್ದು ಇದು ಮೂರು ಪರದೆಯ ಗಾತ್ರಗಳಲ್ಲಿ ಬರುತ್ತದೆ.
49-ಇಂಚುಗಳು.
55-ಇಂಚುಗಳು.
65-ಇಂಚುಗಳು.
ಆದರೆ ಇವುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ Xiaomi ಯಾವ ಟಿವಿ ಗಾತ್ರವನ್ನು ಆಯ್ಕೆ ಮಾಡುತ್ತದೆ ಎಂಬುದು ಅಸ್ಪಷ್ಟವಾಗಿದೆ.
Mi TV 4 ಇದರ ಇಂಚುಗಳು HDR10 ಕ್ಕೆ ಬೆಂಬಲದೊಂದಿಗೆ 4K ಫಲಕವನ್ನು ಹೊಂದಿದೆ. ಇದು ಕ್ವಾಡ್-ಕೋರ್ 64 ಬಿಟ್ ಪ್ರಮುಖ ಟಿವಿ ಪ್ರೊಸೆಸರ್, ಡಾಲ್ಬಿ ಮತ್ತು DTS ಡ್ಯುಯಲ್ ಆಡಿಯೊ ಡಿಕೋಡಿಂಗ್ ಹೊಂದಿದೆ. 65 ಇಂಚಿನ ಡಿಸ್ಪ್ಲೇ ರೂಪಾಂತರವು ಮಿಡ್ ಟಿವಿ ಬಾರನ್ನು ಹೊಂದಿದೆ. ಇದು ಮುಖ್ಯ ಬೋರ್ಡ್ ಮತ್ತು ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿರುತ್ತದೆ. ಇದು ಉತ್ತಮ ಧ್ವನಿ ತಂತ್ರಜ್ಞಾನಕ್ಕಾಗಿ ಡಾಲ್ಬಿ ಅಟ್ಮಾಸನ್ನು ಬೆಂಬಲಿಸುತ್ತದೆ.
ಫ್ಲಿಪ್ಕಾರ್ಟ್ ಪುಟವು ಎಲ್ಲಾ ಹೊಸ OS ಮತ್ತು ಮಿಂಚಿನ ವೇಗ ಪ್ರೊಸೆಸರ್ ಬಗ್ಗೆ ಮಾತಾಡುತ್ತಿದೆ. Mi TV 4 ಅನ್ನು ಆಂಡ್ರಾಯ್ಡ್ ಟಿವಿಯಾಗಿ Xiaomi ಪರಿಚಯಿಸಲಿದೆಯೇ ಎಂದು ನೋಡಬೇಕಿದೆ. ಬದಲಿಗೆ ಚೀನಾದಲ್ಲಿ Mi ಕಂಪೆನಿಯ ಸ್ವಂತ ಪ್ಯಾಚ್ವಾಲ್ UI ಯೊಂದಿಗೆ ಬರುತ್ತದೆ. ಇದು ನಿಮ್ಮ ವೀಕ್ಷಣಾ ಆದ್ಯತೆಗಳ ಆಧಾರದ ಮೇಲೆ ನಿಖರವಾದ ಮತ್ತು ಸ್ಮಾರ್ಟ್ ಶಿಫಾರಸುಗಳನ್ನು ಪೂರೈಸಲು AI (Artificial Intelligence) ಯ ಮೇಲೆ ಅವಲಂಬಿತವಾಗಿದೆ.
ಇದರ ಬೆಲೆಯ ಬಗ್ಗೆ ಮಾತನಾಡಬೇಕೆಂದರೆ ಈ ಮೂರು ಟಿವಿಗಳ ಬೆಲೆ ಒಂದಕ್ಕಿಂತ ಒಂದು ಭಿನ್ನವಾಗಿವೆ ಇದರ ಬೆಲೆ ಈ ಕೆಳಗಿನಂತಿದೆ.
49-ಇಂಚುಗಳು ಇದರ ಬೆಲೆ 3,499 ಯುವಾನ್ (ರೂನಲ್ಲಿ 35,500).
55-ಇಂಚುಗಳು ಇದರ ಬೆಲೆ 3,999 ಯುವಾನ್ (ರೂನಲ್ಲಿ 40,000).
65-ಇಂಚುಗಳು ಇದರ ಬೆಲೆ 9,999 ಯುವಾನ್ (ರೂನಲ್ಲಿ 1,01,599). ರೂಗಳೆಂದು ನಿರೀಕ್ಷಿಸಲಾಗಿದೆ.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.