ಇಂದಿನಿಂದ ಶುರುವಾಗಲಿದೆ Xiaomi Mi Fan Festival ಸಿಗಲಿದೆ ಭರ್ಜರಿ ಡಿಸ್ಕೌಂಟ್, ಇದರಿಂದ ನಿಮಗೇನು ಲಾಭ?

ಇಂದಿನಿಂದ ಶುರುವಾಗಲಿದೆ Xiaomi Mi Fan Festival ಸಿಗಲಿದೆ ಭರ್ಜರಿ ಡಿಸ್ಕೌಂಟ್, ಇದರಿಂದ ನಿಮಗೇನು ಲಾಭ?
HIGHLIGHTS

ಕ್ಸಿವೋಮಿ ಮಿ ಫ್ಯಾನ್ ಫೆಸ್ಟಿವಲ್ನಲ್ಲಿ ಸ್ಮಾರ್ಟ್ಫೋನ್, ಟಿವಿ, ಹೆಡ್ಫೋನ್ಗಳ ಮೇಲಿದೆ ಭಾರಿ ರಿಯಾಯಿತಿ.

ಭಾರತದಲ್ಲಿ ಈ ವರ್ಷವು ಮತ್ತೊಂಮ್ಮೆ Xiaomi ತನ್ನ Xiaomi Mi Fan Festival ಅನ್ನು ಇಂದು ಅಂದ್ರೆ ಏಪ್ರಿಲ್ 5 ರಿಂದ ಏಪ್ರಿಲ್ 6 ವರೆಗೆ ಭಾರತದಲ್ಲಿ ಮಿ ಫ್ಯಾನ್ ಫೆಸ್ಟಿವಲ್ ತನ್ನ ಇತ್ತೀಚಿನ ಆವೃತ್ತಿ ನಡೆಸಲಿದೆ. ಈ ಮಿ ಫಾನ್ ಫೆಸ್ಟಿವಲ್ನಲ್ಲಿ ನಿಮಗೆ ಸಿಗಲಿದೆ ಕ್ಯಾಶ್ ಕೂಪನ್ಗಳು, ರಿಯಾಯಿತಿಗಳು, ಕೊಳ್ಳುವ ಕೊಡುಗೆಗಳು ಮತ್ತು ಸ್ಮಾರ್ಟ್ಫೋನ್ಗಳು, ಟಿವಿಗಳು ಮತ್ತು ಧರಿಸಬಹುದಾದಂತಹ Xiaomi ಉತ್ಪನ್ನಗಳ ಮೇಲೆ ಭಾರಿ ಮಾತ್ರದ ಕೊಡುಗೆಗಳನ್ನು ನೀಡುತ್ತಿದೆ.

ಈ ಚೀನೀ ಸ್ಮಾರ್ಟ್ಫೋನ್ ತಯಾರಕರು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಏಪ್ರಿಲ್ 2 ರಂದು ಬೆಳಗ್ಗೆ 10 ರಿಂದ ರಾತ್ರಿ 11 ರವರೆಗೆ ಪ್ರಚಾರವನ್ನು ನಡೆಸಲಿದ್ದಾರೆ. ಸಾಧನದಲ್ಲಿನ ರಿಯಾಯಿತಿಗಳನ್ನು ಅನ್ಲಾಕ್ ಮಾಡಲು ಬಳಕೆದಾರರಿಗೆ ಒಂದು ನಿರ್ದಿಷ್ಟ ಸಂಖ್ಯೆಯ ಸಮಯವನ್ನು ಇಷ್ಟಪಡುವ ಸಲುವಾಗಿ ಅಭಿಯಾನದ ಉದ್ದೇಶವು ಆಗಿದೆ. ಉತ್ಪನ್ನದ ಮೇಲೆ ಇಷ್ಟವಾದ ಸಂಖ್ಯೆಯನ್ನು ಹೆಚ್ಚಿಸಲು ಬಳಕೆದಾರರು ಇತರ ಸ್ನೇಹಿತರನ್ನು ಆಹ್ವಾನಿಸಬಹುದು.

ಈ ಇನ್ನಷ್ಟು ಹೆಚ್ಚುವರಿ ರಿಯಾಯಿತಿಯ ಕೊಡುಗೆಗಳಲ್ಲಿ ಸೇರಿರುವ ಉತ್ಪನ್ನಗಳೆಂದರೆ Redmi Y1, Mi Mix 2, Mi Earphones basic, Mi Power Bank 2i and Mi Router 3C ಈ ಪಟ್ಟಿಯಲ್ಲಿ ಸೇರಿವೆ. ರಿಯಾಯಿತಿಗಳನ್ನು ಕೂಪನ್ಗಳ ಮೂಲಕ ನೀಡಲಾಗುವುದು ಮತ್ತು ನೀವು ಈ ಕೂಪನ್ಗಳನ್ನು ಉಚಿತವಾಗಿ ಪಡೆಯಬವುದು ಇದರೊಂದಿಗೆ ಕ್ಸಿವೋಮಿಯ ನಿಯಮ ಮತ್ತು ಷರತ್ತುಗಳು ಇಲ್ಲಿ ಅನ್ವಯಿಸುತ್ತದೆ.

ಇದನ್ನು ತಂಡಗಳನ್ನು ರಚಿಸುವ ಮೂಲಕ ಮತ್ತು ನಿಮ್ಮ ಸ್ನೇಹಿತರನ್ನು ತಂಡಕ್ಕೆ ಸೇರಿಸುವ ಮೂಲಕ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ. ನಿಮ್ಮ ತಂಡದಲ್ಲಿ ಕನಿಷ್ಟ ಇಬ್ಬರು  ಸ್ನೇಹಿತರನ್ನು ಹೊಂದಿರಬೇಕಾಗುತ್ತದೆ ಈ 300 ರೂಗಳ ಕೂಪನ್ ಪಡೆಯಲು. ಇದರ ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. Xiaomi Mi Fan Festival 2018. 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo