Xiaomi ಯ 5.99 ಇಂಚಿನ ಫುಲ್ ಸ್ಕ್ರೀನ್ FHD+ ಡಿಸ್ಪ್ಲೇ ಮತ್ತು ಬ್ಯಾಕಲ್ಲಿ 20MP + 12MP ಡುಯಲ್ ಕ್ಯಾಮೆರಾ ಮತ್ತು ಫ್ರಂಟಲ್ಲಿ 20MP ಕ್ಯಾಮೆರಾ ಹೊಂದಿರುವ ಈ ಫೋನ್ ಯಾವುದು ಮತ್ತು ಇದರ ಬೆಲೆ ಎಷ್ಟು ಗೋತ್ತಾ?

Updated on 29-Apr-2018
HIGHLIGHTS

ಇದು ಆಡ್ರಿನೊ 512 ಜಿಪಿಯುನೊಂದಿಗೆ 2.2GHz ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಪ್ರೊಸೆಸರ್ ಹೊಂದಿದೆ.

Xiaomi ಚೀನಾದಲ್ಲಿ ಈ ಹೊಸ Mi 6X ಬಿಡುಗಡೆಯಾಗಿದೆ. ಇದು ಇತರೆ Xiaomi ಫೋನ್ಗಳಂತೆ ರಾಕ್ ಬಾಟಮ್ ಬೆಲೆಯಲ್ಲಿ ಉನ್ನತ ಹಾರ್ಡ್ವೇರ್ ಹೊಂದಿರುವ ಈ Mi 6X ಅಚ್ಚುಕಟ್ಟಾದ ವಿನ್ಯಾಸವನ್ನು ಪ್ಯಾಕ್ ಮಾಡುತ್ತದೆ. ಇದು ಸುಂದರವಾದ ಆಲ್ ಮೆಟಲ್ ಯುನಿಬಾಡಿ ವಿನ್ಯಾಸದೊಂದಿಗೆ ಬರುತ್ತದೆ. ಇದು ಮುಂಭಾಗದಿಂದ ಅಂಚಿನಿಂದ ಕೂಡಿದೆ. ಇದು ಹಿಂಭಾಗದಲ್ಲಿ ಮತ್ತು ಸಾಕಷ್ಟು AI ಸ್ಮಾರ್ಟ್ಸ್ನಲ್ಲಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಬರುತ್ತದೆ.

ಇದರಲ್ಲಿನ ಪ್ರೊಸೆಸರ್ ಆಡ್ರಿನೊ 512 ಜಿಪಿಯುನೊಂದಿಗೆ Mi 6X ಅನ್ನು 2.2GHz ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಪ್ರೊಸೆಸರ್ ಹೊಂದಿದೆ. ಮತ್ತು ಇದು ಎರಡು RAM ಆವೃತ್ತಿಗಳಲ್ಲಿ ಲಭ್ಯವಿರುತ್ತದೆ 4GB ಮತ್ತು 6GB. ಮತ್ತು ಇದರ ಸ್ಟೋರೇಜ್ 4GB ಯ RAM ಆವೃತ್ತಿ 64GB ಸ್ಟೋರೇಜ್ ಮತ್ತು 6GB ಯ RAM ಆವೃತ್ತಿ 64GB ಯ ಸ್ಟೋರೇಜ್ ಮತ್ತು ಇದರರೊಂದಿಗೆ 128GB ಸ್ಟೋರೇಜ್ ವರೆಗೆ ಈ ಎಲ್ಲ ಆವೃತ್ತಿಗಳು ವಿಸ್ತರಿಸಬಹುದಾದ ಸ್ಟೋರೇಜನ್ನು ಬೆಂಬಲಿಸುತ್ತವೆ.

Xiaomi ಯ ಈ Mi 6X ನಲ್ಲಿ 5.99 ಇಂಚಿನ 'ಫುಲ್ ಸ್ಕ್ರೀನ್' FHD + ಡಿಸ್ಪ್ಲೇಯನ್ನು 2160x1080p ರೆಸೊಲ್ಯೂಶನ್ ಮತ್ತು 403p ಪಿಕ್ಸೆಲ್  ಹೊಂದಿದೆ. ಇದರ ಬ್ಯಾಕಲ್ಲಿ ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ಬರುತ್ತದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ 12 ಮೆಗಾಪಿಕ್ಸೆಲ್ ಸೆನ್ಸರ್ (ಸೋನಿ IMX 486) ಮತ್ತು 20 ಮೆಗಾಪಿಕ್ಸೆಲ್ ಸೆನ್ಸಾರ್ (ಸೋನಿ IMX 376) ಬರುತ್ತದೆ. ಇವೇರಡು ಸೆನ್ಸೋರ್ಗಳು f / 1.75 ಅಪೆರ್ಚರನ್ನು ಹೊಂದಿರುತ್ತವೆ. ಅಲ್ಲದೆ ಡ್ಯೂಯಲ್ LED ಫ್ಲಾಶ್ ಮೂಲಕ ಡ್ಯುಯಲ್ ಕ್ಯಾಮೆರಾ ಸೆಟಪನ್ನು ಮತ್ತಷ್ಟು ಸಹಕರಿಸಲಾಗುತ್ತದೆ. ಮತ್ತು ಇದು ಸಾಕಷ್ಟು ಮತ್ತು AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯನ್ನು ಸಾಕಷ್ಟು ಮಟ್ಟಕ್ಕೆ ಕೂಡಿ ಬರುತ್ತದೆ.

ಇದರ ಫ್ರಂಟ್ ಕ್ಯಾಮೆರಾ 20 ಮೆಗಾಪಿಕ್ಸೆಲ್ ಕ್ಯಾಮರಾವನ್ನು ಸಾಫ್ಟ್ LED ಫ್ಲ್ಯಾಶ್ನೊಂದಿಗೆ ಬರುತ್ತದೆ. ಮತ್ತು ಅದು ಫೇಸ್ ಅನ್ಲಾಕನ್ನು ಒಳಗೊಂಡಿರುತ್ತದೆ. ಇದರಲ್ಲಿನ ಹಾರ್ಡ್ವೇರ್ ಆಂಡ್ರಾಯ್ಡ್ ಓರಿಯೊ ಆಧಾರಿತ MIUI 9 ಅನ್ನು ನಡೆಸುತ್ತದೆ. ಮತ್ತು ಇದರಲ್ಲಿನ ಬ್ಯಾಟರಿ ಬಗ್ಗೆ ಮಾತನಾಡಬೇಕಾದ್ರೆ ಇದರಲ್ಲಿದೆ 3010mAh ಧೀರ್ಘಕಾಲದ ಬ್ಯಾಟರಿಯನ್ನು ಇದು ಬೆಂಬಲಿಸುತ್ತದೆ. ಮತ್ತು USB ಟೈಪ್ ಸಿ ಮೇಲೆ ಚಾರ್ಜ್ ಮಾಡುವ ಫಾಸ್ಟ್ ಚಾರ್ಜಿಂಗ್ (ಕ್ವಿಕ್ ಚಾರ್ಜ್ 3.0) ಗೆ ಬೆಂಬಲವನ್ನು ನೀಡುತ್ತದೆ.

ಇದರ ಬೆಲೆಯ ಬಗ್ಗೆ ಹೇಳಬೇಕೆಂದರೆ ಇದು ಒಟ್ಟು ಮೂರು ರೂಪಾಂತರದಲ್ಲಿ ಲಭ್ಯವಿದೆ ಅವೆಂದರೆ

4GB RAM ಮತ್ತು  64GB ಸ್ಟೋರೇಜ್ ಆವೃತ್ತಿಗೆ 1,599 RMB (ಸರಿಸುಮಾರು ರೂ 16,904)

6GB RAM ಮತ್ತು  64GB ಸ್ಟೋರೇಜ್ ಆವೃತ್ತಿಗೆ 1,799 RMB  (ಸರಿಸುಮಾರು ರೂ 19,023) 

6GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ 1,999 RMB (ಸರಿಸುಮಾರು ರೂ 21,138). 

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :