Xiaomi ಯ ಈ ಬ್ಲ್ಯಾಕ್ ಶಾರ್ಕ್ ಗೇಮಿಂಗ್ ಫೋನ್ ಸ್ನಾಪ್ಡ್ರಾಗನ್ 845 ಚಿಪ್ಸೆಟಿನೊಂದಿಗೆ 8GB ಯ RAM ಹೊಂದಿದೆ.
ಇಂದಿನ ದಿನಗಳಲ್ಲಿ ನಮ್ಮ ಸ್ಮಾರ್ಟ್ಫೋನ್ಗಳಲ್ಲಿನ ಗೇಮ್ಗಳು ಎಷ್ಟು ಮುಂದುವರಿದಿದೆ ಎಂದು ಯೋಚಿಸುವುದು ಅದ್ಭುತವಾಗಿದೆ ಅಲ್ಲವೇ. ನಿಮ್ಮ ಫೋನಿನಲ್ಲಿಯೇ ಪೂರ್ಣ ಪ್ರಮಾಣದ 'ಗೇಮಿಂಗ್ PCಗಳು ಮತ್ತು ಕನ್ಸೋಲ್ಗಳಲ್ಲಿ ಜನರು ಆಡುವ ಕೆಲವು ಭಾರಿ ಆಟಗಳನ್ನು ಇದೀಗ ನೀವು ನಿಮ್ಮ ಫೋನಲ್ಲಿ ಪ್ಲೇ ಮಾಡಬಹುದು. ಇದರೊಂದಿಗೆ 'Gaming Phones' ಎಂಬ ಕಲ್ಪನೆಯು ಏರಿದೆ. ಮತ್ತು ಈ ವಾರ ಭಾರತದ ಜನಪ್ರಿಯ ಸ್ಮಾರ್ಟ್ಫೋನ್ Xiaomi ಕಂಪನಿಯು ಇಲ್ಲಿ ಹೆಜ್ಜೆ ಇಟ್ಟಿದೆ.
ಈ ಹೊಸ ಫೋನ್ 5.99 ಇಂಚಿನ ಡಿಸ್ಪ್ಲೇಯೊಂದಿಗೆ 18: 9 ಫುಲ್ ಎಚ್ಡಿ + ರೆಸಲ್ಯೂಶನ್ ಮತ್ತು 97% DCI-P3 ಕವರೇಜ್ನ IPS LCD ಡಿಸ್ಪ್ಲೇಯನ್ನು ಮುಂಭಾಗದಲ್ಲಿ ತೆಗೆದುಕೊಳ್ಳುತ್ತದೆ. ಇದು ಸ್ನಾಪ್ಡ್ರಾಗನ್ 845 ಚಿಪ್ ಸಾಮಾನ್ಯವಾಗಿ ಕ್ರೊಯೋ 385 ಕೋರ್ಗಳು ಮತ್ತು ಅಡ್ರಿನೊ 630 ಜಿಪಿಯು ಜೋತೆಯಲ್ಲಿ ಬರುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆಗಾಗಿ Xiaomi ಇದರ CPU ಉಷ್ಣತೆಯನ್ನು 8° C ಕೆಳಗೆ ತರುತ್ತದೆ ಎಂದು ಬಹು ಹಂತದ ವ್ಯವಸ್ಥೆಯನ್ನು ಈ ಫೋನ್ ಹೊಂದಿದ.
ಈ ಫೋನ್ಗೆ ಮೈಕ್ರೊ ಸ್ಲಾಟ್ ಇಲ್ಲ ಆದರೆ ಎರಡು ಆವೃತ್ತಿಗಳಲ್ಲಿ ಬರುತ್ತದೆ ಮತ್ತು ಮೇಲ್ಭಾಗದಲ್ಲಿ ಇಮೇಜ್ ಪ್ರೊಸೆಸಿಂಗ್ ಚಿಪ್ MEMC ನಿಂದ ಹೊಸದಾಗಿದೆ. ಇದು ತೀಕ್ಷ್ಣ ಬಣ್ಣಗಳನ್ನು ಮತ್ತು ಅಗತ್ಯವಿದ್ದಾಗ ಒಟ್ಟಾರೆ ನಯವಾದ ಕಾರ್ಯನಿರ್ವಹಣೆಯನ್ನು ತರುತ್ತದೆ. ಮತ್ತು ಇದು 4000mAh ಬ್ಯಾಟರಿ ಹೊಂದಿದೆ.
ಬ್ಲ್ಯಾಕ್ ಶಾರ್ಕ್ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. 12MP ಎಫ್ / 1.75 + 20 ಎಂಪಿ ಎಫ್ / 1.75 6 ಪಿ ಲೆನ್ಸ್ ಮತ್ತು ಡ್ಯೂಯಲ್ ಎಲ್ಇಡಿ ಫ್ಲಾಷ್. ಮೊದಲ ಪಿಕ್ಸೆಲ್ ಗಾತ್ರ 1.25 μm ಆಗಿದ್ದು ಇತರ ಸಂವೇದಕವು 1 μm ಪಿಕ್ಸೆಲ್ಗಳನ್ನು ಹೊಂದಿರುತ್ತದೆ. ಸೆಲ್ಫ್ ಕ್ಯಾಮೆರಾ ಒಂದೇ ರೀತಿಯ 20MP ಸಂವೇದಕ ಮತ್ತು f / 2.2 ಲೆನ್ಸ್ ಹೊಂದಿದೆ.
ಇದು ಏಪ್ರಿಲ್ 20 ರವರೆಗೆ JD.com ನಲ್ಲಿ ಪ್ರೀ-ಆರ್ಡರಿಗಾಗಿ ಈ ಫೋನ್ ಲಭ್ಯವಿರುತ್ತದೆ. ಮತ್ತು ನಂತರ ಅದು ಪೋಲಾರ್ ನೈಟ್ ಬ್ಲ್ಯಾಕ್ ಅಥವಾ ಸ್ಕೈ ಗ್ರೇನಲ್ಲಿ ಖರೀದಿಸಲು ಲಭ್ಯವಿರುತ್ತದೆ.
6GB ಯ RAM ಮತ್ತು 64GB ಯ ಸ್ಟೋರೇಜ್ CNY 2,999 (ಸುಮಾರು 31,070 ರೂಗಳು).
8GB ಯ RAM ಮತ್ತು 128GB ಯ ಸ್ಟೋರೇಜ್ CNY 3,499 (ಸುಮಾರು 36,250 ರೂಗಳು).
ಇದರಿಂದ ಇದುವರೆಗಿನ ಕಡಿಮೆ ಬೆಲೆಯ ಸ್ನಾಪ್ಡ್ರಾಗನ್ 845 ಫೋನ್ ಇದಾಗಿದೆ.ಇದರ ಮತ್ತೋಂದು ಬ್ಲ್ಯಾಕ್ ಶಾರ್ಕ್ ಗೇಮ್ಪ್ಯಾಡ್ CNY 179 (ಸುಮಾರು 1,854 ರೂಗಳು) ಗೆ ಪ್ರತ್ಯೇಕವಾಗಿ ಮಾರಲಾಗುತ್ತದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile