ಜಿಯೋ ಸುದ್ದಿ: ನಿಮಗೆ KaiOS ನಲ್ಲಿ ಜಿಯೋ ಫೋನ್ಗಾಗಿ WhatsApp ಸಾರ್ವಜನಿಕವಾಗಿ ಡೌನ್ಲೋಡ್ಗಾಗಿ ಇದೀಗ ಲಭ್ಯವಿದೆ.

ಜಿಯೋ ಸುದ್ದಿ: ನಿಮಗೆ KaiOS ನಲ್ಲಿ ಜಿಯೋ ಫೋನ್ಗಾಗಿ WhatsApp ಸಾರ್ವಜನಿಕವಾಗಿ ಡೌನ್ಲೋಡ್ಗಾಗಿ ಇದೀಗ ಲಭ್ಯವಿದೆ.
HIGHLIGHTS

ನಿಮ್ಮ ಫೀಚರ್ ಫೋನಲ್ಲಿ WhatsApp ಇಲ್ವಾ...ಈಗ ನಿಮಗೂ ಇಲ್ಲಿದೆ ಸಿಹಿಸುದ್ದಿ.

ರಿಲಯನ್ಸ್ ಜಿಯೋ KaiOS ನಲ್ಲಿ ಜಿಯೋಫೋನ್ಗಾಗಿ WhatsApp ಅನ್ನು ಘೋಷಿಸಿದೆ. ಅಲ್ಲದೆ ಇದು ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ ಈಗ ಸಾರ್ವಜನಿಕವಾಗಿ (For Public)  ಡೌನ್ಲೋಡ್ಗಾಗಿ ಲಭ್ಯವಿದೆ. JioPhone ಮತ್ತು JioPhone 2 ಬಳಕೆದಾರರು ಈ KaiOS ಆಪ್ ಸ್ಟೋರ್ಗೆ ಭೇಟಿ ನೀಡುವ ಮೂಲಕ ಡೌನ್ಲೋಡ್  ಮಾಡಿಕೊಳ್ಳಬಹುದು.  ಮತ್ತು ಡೌನ್ಲೋಡ್ ಬಟನ್ ಮೂಲಕ ಕ್ಲಿಕ್ ಮಾಡಬಹುದು. ಜಿಯೋ ಬಳಕೆದಾರರಿಗೆ 10ನೇ ಸೆಪ್ಟೆಂಬರ್ 2018 ರಿಂದ ಡೌನ್ಲೋಡ್ಗೆ ಅಪ್ಲಿಕೇಶನ್ ಲಭ್ಯವಿರುತ್ತದೆ. ಆದರೆ ಬೇರೆ ಫೀಚರ್ ಫೋನ್ ಬಳಕೆದಾರರಿಗೆ 20ನೇ ಸೆಪ್ಟೆಂಬರ್ 2018 ರ ಹೊತ್ತಿಗೆ ಸಂಪೂರ್ಣ ರೋಲ್ಔಟ್ ಆಗುವ ನಿರೀಕ್ಷೆಯಿದೆ.

https://telecomtalk.info/wp-content/uploads/2018/09/whatsapp-jiophone-kaios.png 

ಆದ್ದರಿಂದ ಬಳಕೆದಾರರು ಆಪ್ ಸ್ಟೋರ್ಗೆ ಹೋಗುವುದರ ಮೂಲಕ ಅದನ್ನು ನೇರವಾಗಿ ಡೌನ್ಲೋಡ್ ಮಾಡಬಹುದು. 'ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂವಹನ ಮಾಡಲು ಜನರಿಗೆ ಸರಳ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಮಾರ್ಗವನ್ನು ನೀಡುವ ಸಲುವಾಗಿ ಜಿಯೋಫೋನ್ಗಾಗಿ ಪ್ರಿವೈಟ್ ಮೆಸೇಜ್ ಕಳುಹಿಸುವ ಅಪ್ಲಿಕೇಶನ್ನ ಹೊಸ ಆವೃತ್ತಿಯನ್ನು WhatsApp ನಿರ್ಮಿಸಿದ್ದು ಇದು KiOS ಆಪರೇಟಿಂಗ್ ಸಿಸ್ಟಮಲ್ಲಿ ನಡೆಯುತ್ತದೆ. WhatsApp ಹೊಸ ಅಪ್ಲಿಕೇಶನ್ ಕಳುಹಿಸುವಂತಹ ಮೂಲ ಕಾರ್ಯನಿರ್ವಹಣೆಯನ್ನು ಅನುಮತಿಸುತ್ತದೆ. ಇದರಲ್ಲಿ ಫೋಟೋಗಳು ಮತ್ತು ವೀಡಿಯೊಗಳು. ಮತ್ತು  ಮೆಸೇಜ್ಗಳನ್ನು ಅಂತ್ಯದಿಂದ ಕೊನೆಯವರೆಗೆ ಕಳುಯಿಸಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo