ಹೊಸದಾಗಿ ಬಂದಿರುವ ಈ ಪಾನ್ 2.0 ಎಂದರೇನು ಮತ್ತು ನಿಮ್ಮ ಪ್ಯಾನ್ ಕಾರ್ಡ್ (PAN Card) ಒಳಗೆ ಈ QR Code ಅಳವಡಿಸುವುದರಿಂದಾಗುವ ಪಯೋಜನ ಮತ್ತು ಉಪಯೋಗಗಳೇನು ತಿಳಿಯಿರಿ
PAN 2.0 ಅಂದ್ರೆ ಹೊಸ ಟೆಕ್ನಾಲಜಿಯ ಮೂಲಕ ತೆರಿಗೆದಾರರ ನೋಂದಣಿ ಪ್ರಕ್ರಿಯೆಯನ್ನು ಆಧುನೀಕರಿಸಲು ವಿನ್ಯಾಸಗೊಳಿಸಲಾಗಿರುವ ಹೊಸ ಯೋಜನೆ.
ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಈ ಹೊಸ PAN 2.0 ಅನ್ನು ಪರಿಚಯಿಸಿದೆ.
SIM Card ಖರೀದಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ಮತ್ತು ತೆರಿಗೆ ಸಲ್ಲಿಸುವುದರವರೆಗೆ ಈ ಪ್ರಮುಖ ದಾಖಲೆಯನ್ನು ಕಡ್ಡಾಯವಾಗಿದೆ.
UIDAI ಪರಿಚಯಿಸಲಾಗಿರುವ ಶಾಶ್ವತ ಖಾತೆ ಸಂಖ್ಯೆ (PAN Card) ಈಗ ದೇಶದಲ್ಲಿ ಅತಿ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ.
ಹೊಸ ಅಪ್ಡೇಟ್ ಅಡಿಯಲ್ಲಿ PAN 2.0 ಎಂಬ ಯೋಜನೆಯನ್ನು ಪರಿಚಯಿಸಿದ್ದು ಇದರೊಳಗೆ QR ಕೋಡ್ ತರಲು ಸಜ್ಜಾಗಿದೆ.
ಈ ಮೂಲಕ ನಿಮ ಪ್ರತಿಯೊಂದು ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರಗಳ ಮೇಲೆ ಸರ್ಕಾರ ಡಿಜಿಟಲ್ ವ್ಯವಸ್ಥೆಗಳಿಗೆ ಮಾರ್ಪಡಿಸುವ ಗುರಿ ಹೊಂದಿದೆ.
ಭಾರತದಲ್ಲಿ ತೆರಿಗೆದಾರರ ಸೇವೆಗಳನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ PAN 2.0 ಪ್ರಾಜೆಕ್ಟ್ ತರಲು ಮುಂದಾಗಿದೆ.