New FASTag Rules 2024
ದೇಶದಲ್ಲಿ ಇಂದಿನ ಹೊಸ ಫಾಸ್ಟ್‌ಟ್ಯಾಗ್ ನಿಯಮ ಜಾರಿ!
By: Ravi Rapo
01 Aug 2024
ಭಾರತದಲ್ಲಿ 1ನೇ ಆಗಸ್ಟ್ 2024 ರಿಂದ ಹೊಸ FASTag ನಿಯಮಗಳನ್ನು ಅನ್ವಯಿಸಿದ್ದು ಟೋಲ್ ಕಲೆಕ್ಷನ್ ವ್ಯವಸ್ಥೆಯ ದಕ್ಷತೆ ಮತ್ತು ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ನಿಮ್ಮ ವಾಹನಗಳಲ್ಲಿ FASTag ಸರಿಯಾಗಿ ಅಳವಡಿಕೆಯಾಗಿಲ್ಲವಾದರೆ ಇನ್ಮೇಲೆ ದ್ವಿಗುಣ ಶುಲ್ಕ ದಂಡವನ್ನು ನೀಡಬೇಕಾಗುತ್ತದೆ ಎಂದ
NHAI
ಫಾಸ್ಟ್‌ಟ್ಯಾಗ್ (FASTag) ಬಳಕೆದಾರರು ತಮ್ಮ KYC ವಿವರಗಳನ್ನು 31ನೇ ಅಕ್ಟೋಬರ್ 2024 ರವರೆಗೆ ನವೀಕರಿಸುವುದು ಕಡ್ಡಾಯವಾಗಿದೆ.
ನಿಮ್ಮ ಫಾಸ್ಟ್‌ಟ್ಯಾಗ್ (FASTag) ಐದು ವರ್ಷಕ್ಕಿಂತ ಹಳೆಯದಾಗಿದ್ದಾರೆ ಹೊಸ ಫಾಸ್ಟ್‌ಟ್ಯಾಗ್‌ಗಳೊಂದಿಗೆ ಬದಲಾಯಿಸಬೇಕು.
ನಿಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯನ್ನು ನಿಮ್ಮ (FASTag) ಫಾಸ್ಟ್‌ಟ್ಯಾಗ್‌ನೊಂದಿಗೆ ಲಿಂಕ್ ಮಾಡಬೇಕು.
ಹೊಸ ವಾಹನ ಮಾಲೀಕರು ತಮ್ಮ ಫಾಸ್ಟ್‌ಟ್ಯಾಗ್ (FASTag) ಅನ್ನು ವಾಹನದ ನೋಂದಣಿ ಸಂಖ್ಯೆಯೊಂದಿಗೆ ಖರೀದಿಸಿದ 90 ದಿನಗಳಲ್ಲಿ ನವೀಕರಿಸಿಕೊಳ್ಳಬೇಕು.
ಗುರುತಿಸುವಿಕೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಫಾಸ್ಟ್‌ಟ್ಯಾಗ್ (FASTag) ಪೂರೈಕೆದಾರರು ವಾಹನದ ಮುಂಭಾಗ ಮತ್ತು ಬದಿಯ ಸ್ಪಷ್ಟ, ಕ್ಲಿಯರ್ ಫೋಟೋಗಳನ್ನು ಅಪ್‌ಲೋಡ್ ಮಾಡಬೇಕು.
ತಡೆರಹಿತ ಸಂವಹನ ಮತ್ತು ಸಮಯೋಚಿತ ನವೀಕರಣಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿ FASTag ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.