ಸರ್ಕಾರ ಪಡಿತರ ಚೀಟಿಯಲ್ಲಿ (Ration Card) ಹೊಸ ಅಪ್ಡೇಟ್ ಮಾಡಿದ್ದು 2025 ವರ್ಷದಿಂದ ರೇಷನ್ ಖರೀದಿಸಲು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ!
ಪಡಿತರ ಚೀಟಿಯು (Ration Card) ಸರ್ಕಾರದಿಂದ ವಿತರಿಸಲಾಗಿರುವ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ.
ರೇಷನ್ ಖರೀದಿಸಲು ಸಾಲುಗಳಲ್ಲಿ ನಿಲ್ಲುವ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯನ್ನು ಪರಿಚಯಿಸಿದ್ದು ಇದು 1ನೇ ಜನವರಿ 2025 ರಿಂದ ಅನ್ವಯವಾಗಲಿದೆ
ರೇಷನ್ ಕಾರ್ಡ್ (Mera Ration 2.0) ಯೋಜನೆಯಡಿಯಲ್ಲಿ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ರೇಷನ್ ಖರೀದಿಸಬಹುದು
ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (National Food Security Act, 2013 (NFSA) ಅಡಿಯಲ್ಲಿ ನಡೆಸಲಾಗುತ್ತಿದೆ.
ಇನ್ಮುಂದೆ ಪಡಿತರ ವಿತರಕರಿಂದ ವಿವಿಧ ವಸ್ತುಗಳನ್ನು ಸಂಗ್ರಹಿಸಲು ಪಡಿತರ ಚೀಟಿಯನ್ನು (Ration Card) ತೋರಿಸುವ ಅಗತ್ಯವಿಲ್ಲ.
ಬದಲಿಗೆ ಸ್ಮಾರ್ಟ್ ಫೋನ್‌ಗಳಲ್ಲಿ ಈ Mera Ration 2.0 ಅಪ್ಲಿಕೇಶನ್ ತೋರಿಸಿ ಪಡಿತರ ವಿತರಕರಿಂದ ವಿವಿಧ ವಸ್ತುಗಳನ್ನು ಪಡೆಯಬಹುದು.
ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಆಧಾರ್ (Aadhaar) ಜೊತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಈ ಅಪ್ಲಿಕೇಶನ್ ಬಳಸಿ ಪಡಿತರ ಲಭ್ಯತೆ ಮತ್ತು ವಿತರಣೆಯನ್ನು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದು.
ಯಾವುದೇ ಕುಂದುಕೊರತೆ ಬಗ್ಗೆ ಈ ಅಪ್ಲಿಕೇಶನ್ ಮೂಲಕ ದೂರು ಸಲ್ಲಿಸಲು ಮತ್ತು ಅದರ ಸ್ಥಿತಿಯನ್ನು ತಿಳಿದುಕೊಳ್ಳಬಹುದು.