ಫೋನ್ ಕಳೆದೋದ್ರೆ ಅಥವಾ ಕಳ್ಳತನವಾದ್ರೆ ನಿಮ್ಮ SIM Cardದುರುಪಯೋಗವಾಗುವುದನ್ನು ತಡೆಯಲು ಈ ಸಿಂಪಲ್ ಸೆಟ್ಟಿಂಗ್ ON ಮಾಡಿ ಸಿಮ್ ಕಾರ್ಡ್ ಯಾರೂ ಬಳಸಲು ಸಾಧ್ಯವಾಗೋಲ್ಲ!
ಮೊದಲಗೆ ಆಂಡ್ರಾಯ್ಡ್ ಬಳಕೆದಾರರು SIM ಕಾರ್ಡ್ ಅನ್ನು ಲಾಕ್ ಮಾಡಲು ಮೊದಲು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ.
ಈಗ ಇಲ್ಲಿ ಸರ್ಚ್ ಪಟ್ಟಿಯಲ್ಲಿ SIM LOCK ಅನ್ನು ಟೈಪ್ ಮಾಡುವ ಮೂಲಕ ಸರ್ಚ್ ಮಾಡಿ ಈ ಆಯ್ಕೆಯನ್ನು ಕಾಣಬಹುದು.
ಇದರ ಮುಂದಿನ ಪುಟದಲ್ಲಿ ನೀವು ಬಯೋಮೆಟ್ರಿಕ್ ಮತ್ತು ಸೆಕ್ಯೂರಿಟಿ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ.
ನೀವು ಇತರೆ ಸೆಕ್ಯೂರಿಟಿ ಸೆಟ್ಟಿಂಗ್‌ನಲ್ಲಿ ಸಿಮ್ ಕಾರ್ಡ್ (SIM Card) ಅನ್ನು ಲಾಕ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ.
ಈಗ ನೀವು 4 ಅಥವಾ 6 ಅಂಕೆಯ ಡೀಫಾಲ್ಟ್ ಪಿನ್ (PIN) ಅನ್ನು ಇಲ್ಲಿ ನಮೂದಿಸುವ ಮೂಲಕ ಸಿಮ್ ಅನ್ನು ಲಾಕ್ ಮಾಡಬೇಕಾಗುತ್ತದೆ.
ಸಿಮ್ ಕಾರ್ಡ್ ಅನ್ನು ಲಾಕ್ ಮಾಡುವಾಗ ನಿಮ್ಮ ಆಯ್ಕೆಯ ಪಿನ್ ಅನ್ನು ರಚಿಸುವ ಆಯ್ಕೆಯನ್ನು ಸಹ ನೀವು ಪಡೆಯುತ್ತೀರಿ. ನೀವು ಯಾವುದೇ ಪಿನ್ ಅನ್ನು ರಚಿಸಿದರೂ ಅದನ್ನು ಚೆನ್ನಾಗಿ ನೆನಪಿನಲ್ಲಿಡಿ.
ಪಿನ್ (PIN) ಹೊಂದಿಸಿದ ನಂತರ ನಿಮ್ಮ ಫೋನ್ ಮರುಪ್ರಾರಂಭಿಸಿ ಸಿಮ್ ಅನ್ನು ಸಕ್ರಿಯಗೊಳಿಸಲು ನೀವು ನೀಡಿದ ಪಿನ್ ಹಾಕಿ ಅನ್‌ಲಾಕ್ (Unlock) ಮಾಡಬೇಕಾಗುತ್ತದೆ ಅಷ್ಟೇ.