ನಿಮಗೂ Spam Calls ಸಮಯ ಪ್ರಜ್ಞೆ ಇಲ್ಲದೆ ಬರುವ ಅನಗತ್ಯ ಕರೆಗಳಿಂದ ತಲೆನೋವಾಗಿದ್ಯಾ? ಹಾಗಾದ್ರೆ ಈ ರೀತಿ ಶಾಶ್ವತವಾಗಿ ತಡೆಗಟ್ಟಿ!
DND (Do Not Disturb) ಸೇವೆ ಸಕ್ರಿಯಗೊಳಿಸಿದರೆ ಸುಮಾರು 90% ವರೆಗೆ ತಡೆಗಟ್ಟುತ್ತದೆ.
ಟೆಲಿಮಾರ್ಕೆಟಿಂಗ್ ಕರೆ ಮತ್ತು ಮೆಸೇಜ್ (Block Spam Calls) ಸಮಸ್ಯೆಗೆ ಈಗ ನೀವೇ ಇದಕ್ಕೆ ಪರಿಹಾರ ಮಾಡಿಕೊಳ್ಳಬಹುದು.
DND ಸೇವೆಯಲ್ಲಿ ಎರಡು ವಿಧಾನಗಳಿವೆ
1.ಫುಲ್ ಡು ನಾಟ್ ಡಿಸ್ಟಿರ್ಬ್ (Full DND) 2.ಪರ್ಷಲ್ ಡು ನಾಟ್ ಡಿಸ್ಟಿರ್ಬ್ (Partial DND)
ಫುಲ್ ಡು ನಾಟ್ ಡಿಸ್ಟಿರ್ಬ್ (Full DND) ಅಂದ್ರೆ ಎಲ್ಲ 7 ವರ್ಗದ ಕರೆ ಮತ್ತು ಮೆಸೇಜ್ ತಡೆಗಟ್ಟುತ್ತದೆ.
ಪರ್ಷಲ್ ಡು ನಾಟ್ ಡಿಸ್ಟಿರ್ಬ್ (Partial DND) ಅಂದ್ರೆ 7 ವರ್ಗದಲ್ಲಿ ನಿಮಗೆ ಬೇಡದ ವರ್ಗದಿಂದ ಮಾತ್ರ ಕರೆ ಮತ್ತು ಮೆಸೇಜ್ ತಡೆಗಟ್ಟುತ್ತದೆ.
ನೇರವಾಗಿ ನಿಮ್ಮ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದ ಮೊಬೈಲ್ ನಂಬರ್ನಿಂದ 1909 ನಂಬರ್ಗೆ ಕರೆ ಮಾಡಿ ಸಕ್ರಿಯಗೋಳಿಸಬಹುದು.