ನೀವೊಂದು ಹೊಸ BSNL New SIM Card ಖರೀದಿಸಲು ಯೋಚಿಸುತ್ತಿದ್ದರೆ ಕರೆ ಮತ್ತು ಡೇಟಾ ಪಡೆಯಲು ಆಕ್ಟಿವೇಟ್ ಮಾಡುವುದು ಹೇಗೆ?

BSNL ಇನ್ನೂ ದೇಶದಲ್ಲಿ ಪೂರ್ತಿಯಾಗಿ 4G ಸೇವೆಗಳನ್ನು ಹೊರತಂದಿಲ್ಲವಾದರೂ ಭಾರತದಾದ್ಯಂತ ಉತ್ತಮವಾದ 3G ನೆಟ್ವರ್ಕ್ ಒದಗಿಸುತ್ತಿದೆ

ನಿಮ್ಮ BSNL New SIM Card ಬಗ್ಗೆ ಹೆಚ್ಚು ಚಿಂತಿಸದೆ ಅದನ್ನು ಸರಳವಾಗಿ ಹೇಗೆ ಸಕ್ರಿಯಗೊಳಿಸುವುದು ಎನ್ನುವುದನ್ನು ತಿಳಿಸಲಿದ್ದೇವೆ.

ನಿಮ್ಮ BSNL New SIM Card ಬಗ್ಗೆ ಹೆಚ್ಚು ಚಿಂತಿಸದೆ ಅದನ್ನು ಸರಳವಾಗಿ ಹೇಗೆ ಸಕ್ರಿಯಗೊಳಿಸುವುದು ಎನ್ನುವುದನ್ನು ತಿಳಿಸಲಿದ್ದೇವೆ.

ಮೊದಲಿಗೆ BSNL New SIM Card ನಿಮ್ಮ ಮೊಬೈಲ್ ಫೋನ್‌ ಒಳಗೆ ಹಾಕಿ ಒಮ್ಮೆ ರೀಸ್ಟಾರ್ಟ್ ಮಾಡಿಕೊಂಡು ನೆಟ್‌ವರ್ಕ್‌ ಸಿಂಗಲ್ ಬರುವವರೆಗೆ ಕಾಯಬೇಕು. 

ಫೋನಿನ ಡಿಸ್‌ಪ್ಲೇಯ ಮೇಲ್ಭಾಗದಲ್ಲಿರುವ ಆಗಾಗ ನೋಡುತ್ತಿರಿ ಯಾಕೆಂದರೆ BSNL ಸಿಮ್ ಕಾರ್ಡ್ Mobile Network ಕಾಣಿಸಿಕೊಂಡ ನಂತರವಷ್ಟೇ ಮುಂದೆ ಸಾಗಬಹುದು.

ಒಂದು ವೇಳೆ ನೀವು ಸಿಮ್ ಕಾರ್ಡ್ ಖರೀದಿಸಿ 2-3 ದಿನಗಳಾಗಿ ಇನ್ನೂ ನೆಟ್ವರ್ಕ್ ಬಂದಿಲ್ಲವಾದರೆ ನೀವು ಎಲ್ಲಿಂದ ಸಿಮ್ ಕಾರ್ಡ್ ಖರೀದಿಸಿದಿರೋ ಅಲ್ಲಿಗೆ ಒಮ್ಮೆ ಭೇಟಿ ನೀಡಿ ಸಮಸ್ಯೆ ಪರಿಶೀಲಸಿಕೊಳ್ಳಬೇಕಾಗುತ್ತದೆ.

BSNL ಸಿಮ್ ಕಾರ್ಡ್ ನೆಟ್‌ವರ್ಕ್ ಸಿಗ್ನಲ್ ಕಾಣಿಸಿಕೊಂಡ ನಂತರ ನಿಮ್ಮನ್ನು ಮತ್ತು ನಿಮ್ಮ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು (Verification Process) ಪರಿಶೀಲನಾ ಪ್ರಕ್ರಿಯೆ ಮೂಲಕ ಹಾದುಹೋಗಬೇಕಾಗುತ್ತದೆ. 

ಇದಕ್ಕಾಗಿ ನಿಮ್ಮ ಹೊಸ BSNL ಸಿಮ್ ಕಾರ್ಡ್ನಿಂದ 1507 ಸಂಖ್ಯೆಗೆ ಕರೆ ಮಾಡಿ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕಾಗುತ್ತದೆ. 

ನಿಮ್ಮ BSNL ಸಿಮ್ ಪರಿಶೀಲನಾ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದ ನಂತರ New BSNL SIM Card ಸಕ್ರಿಯಗೊಳಿಸಲಾಗುತ್ತದೆ.