ಭಾರತದಲ್ಲಿ ಲೇಟೆಸ್ಟ್ ಪ್ರಾಡಕ್ಟ್‌ಗಳಲ್ಲಿ  Pixel Buds Pro 2 ಮತ್ತು Pixel Watch 3 ಬೆಲೆ ಮತ್ತು ಲಭ್ಯತೆಯೊಂದಿಗೆ ಇವುಗಳ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯಿರಿ.

Google Pixel Buds Pro 2 ಅನ್ನು ಸುಮಾರು 22,900 ರೂಗಳಿಗೆ ಮತ್ತು Pixel Watch 3 ಅನ್ನು ಸುಮಾರು 39,990 ರೂಗಳಿಗೆ ಬಿಡುಗಡೆಗೊಳಿಸಿದೆ.

Pixel Buds Pro 2 ಇಯರ್‌ಬಡ್‌ಗಳು Gemini AI ಬೆಂಬಲದೊಂದಿಗೆ ಬರುವ ಮೊತ್ತ ಮೊದಲ ಸ್ಮಾರ್ಟ್ ಬಂದ ಮೊದಲ TWS ಇಯರ್‌ಬಡ್‌ಗಳಾಗಿವೆ.

ಈ ಇಯರ್‌ಬಡ್‌ಗಳು ANC ಮೋಡ್‌ನೊಂದಿಗೆ 8 ಗಂಟೆಗಳ ಬ್ಯಾಟರಿ ಅವಧಿ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 30 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ.

Pixel Buds Pro 2 ಇಯರ್‌ಬಡ್‌ಗಳು 11mm ದೊಡ್ಡ ಡ್ರೈವರ್‌ಗಳನ್ನು ಹೊಸ ಹೈ-ಫ್ರೀಕ್ವೆನ್ಸಿ ಚೇಂಬರ್ ಅನ್ನು ಹೊಂದಿದೆ.

ಬಡ್ಸ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಪತ್ತೆ ಹಚ್ಚಲು ಇದರಲ್ಲಿ Find My Device ಫೀಚರ್ ನೆಟ್‌ವರ್ಕ್ ಅನ್ನು ಸಹ ಬೆಂಬಲಿಸುತ್ತದೆ.

Pixel Watch 3 ಅನ್ನು ನೋಡುವುದಾದರೆ ಈ ವಾಚ್ ನಿಮಗೆ ಒಟ್ಟಾರೆಯಾಗಿ ಎರಡು 41mm (1.2 Inch) ಮತ್ತೊಂದು 45mm (1.4 Inch) ಎಂಬ ಸೈಜ್ ಆಧಾರದಲ್ಲಿ ಬಿಡುಗಡೆಯಾಗಿದೆ.

Google Pixel Watch 3 (41mm Bluetooth version) ಇದರ ಬೆಲೆಯನ್ನು EUR 399 ಅಂದ್ರೆ ಭಾರತದಲ್ಲಿ ಸುಮಾರು ₹36,810 ರೂಗಳಾಗಿವೆ.

Google Pixel Watch 3 (45mm Bluetooth version) ಇದರ ಬೆಲೆಯನ್ನು EUR 449 ಅಂದ್ರೆ ಭಾರತದಲ್ಲಿ ಸುಮಾರು ₹41,423 ರೂಗಳಾಗಿವೆ.