ವೊಡಾಫೋನ್ ಈಗ ಅದೇ 499/- ನಲ್ಲಿ ಅನಿಯಮಿತ ಕರೆಗಳ ಜೋತೆ 30GB ಯಾ ಡೇಟಾವನ್ನು ನೀಡುತ್ತಿದೆ.

ವೊಡಾಫೋನ್ ಈಗ ಅದೇ 499/- ನಲ್ಲಿ ಅನಿಯಮಿತ ಕರೆಗಳ ಜೋತೆ 30GB ಯಾ ಡೇಟಾವನ್ನು ನೀಡುತ್ತಿದೆ.
HIGHLIGHTS

ಈ ಹೊಸ ಹೆಚ್ಚಿನ ಡೇಟಾ ಪ್ಲಾನ್ ಕೇವಲ Vodafone RED ಹೊಂದುವ ಗ್ರಾಹಕರಿಗೆ ಮಾತ್ರ ಲಭ್ಯ.

ವೊಡಾಫೋನ್ ವೊಡಾಫೋನ್ ಈಗ ಅದೇ 499/- ರೂನಲ್ಲಿ ಕಂಪನಿಯು ಮತ್ತೊಂಮ್ಮೆ ತಮ್ಮ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಹೊಸ Vodafone RED ಪ್ಲಾನನ್ನು ಪರಿಚಯಿಸಿದೆ. ಈ ಹೊಸ ಪ್ಯಾಕ್ ಒಂದು ತಿಂಗಳ ವ್ಯಾಲಿಡಿಟಿಯೊಂದಿಗೆ ಧ್ವನಿ, ಡೇಟಾ, SMSಗಳು, ಉಚಿತ ರೋಮಿಂಗ್ ಮತ್ತು ಹೆಚ್ಚಿನವುಗಳನ್ನು ನೀಡುತ್ತದೆ.

ಈ ಹೊಸ Vodafone RED ರೂ 499/- ಯೋಜನೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಎಲ್ಲಾ ನೆಟ್ವರ್ಕ್ಗಳಿಗೆ ಉಚಿತ ರಾಷ್ಟ್ರೀಯ ರೋಮಿಂಗ್, 100 SMS ಮತ್ತು 30GB ಯಾ 2G ಅಥವಾ 3G ಡೇಟಾ ಪೂರ್ತಿ 28 ​​ದಿನಗಳವರೆಗೆ ಬರುತ್ತದೆ. ಈ ಪ್ಯಾಕ್ 200GB ವರೆಗೆ ಡಾಟಾ ರೋಲ್ಓವರ್ ಮಾಡುವ ಆಯ್ಕೆಯನ್ನು ಹೊಂದಿದೆ.

ವೊಡಾಫೋನ್ ಹೊಸ ಪೋಸ್ಟ್ಪೇಯ್ಡ್ ಪ್ಯಾಕ್ ಒಂದು ವರ್ಷದ ವೊಡಾಫೋನ್ ಪ್ಲೇ ಸೇವೆಯ ಮೂಲಕ ರೂ 4000 ಮೌಲ್ಯದ ಸಿನೆಮಾಗಳಿಗೆ ಉಚಿತ ಪ್ರವೇಶ ಮತ್ತು ನಾಲ್ಕು ತಿಂಗಳವರೆಗೆ 3500 ಕ್ಕಿಂತಲೂ ಹೆಚ್ಚು ಅಕಾಲಿಕೆಗಳ ಪ್ರವೇಶದೊಂದಿಗೆ ಮ್ಯಾಗ್ಜರ್ ಚಂದಾದಾರಿಕೆಯೊಂದಿಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಈ ಯೋಜನೆಯು ವೊಡಾಫೋನ್ ರೆಡ್ ಶೀಲ್ಡ್ ಅನ್ನು ಒಳಗೊಂಡಿದ್ದು ಇದು ನಿಮ್ಮ ಫೋನನ್ನು ಹಾನಿ ಮತ್ತು ಕಳ್ಳತನದಿಂದ ರಕ್ಷಿಸುವ ಫೋನ್ ವಿಮಾ ಕೊಡುಗೆಯಾಗಿದೆ.

ದುರದೃಷ್ಟವಶಾತ್ ಪ್ರತಿ ವೊಡಾಫೋನ್ ಗ್ರಾಹಕರಿಗೆ ಈ ಹೊಸ ಪ್ಯಾಕ್ ಲಭ್ಯವಿಲ್ಲ. ಪ್ರಿಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾಗುತ್ತಿರುವ ಗ್ರಾಹಕರು ಮತ್ತು ಇತರೆ ಟೆಲಿಕಾಂ ಆಪರೇಟರ್ಗಳಿಂದ ಬದಲಿಸುತ್ತಿರುವ ಬಳಕೆದಾರರಿಗೆ ಮಾತ್ರ ಅದನ್ನು ಪಡೆಯಬಹುದು. ಹೊಸ ಯೋಜನೆಯನ್ನು ಬದಲಾಯಿಸಲು ಬಳಕೆದಾರರು ತಮ್ಮ ಫೋನ್ನಿಂದ 199 ಅನ್ನು ಡಯಲ್ ಮಾಡಬಹುದು. ಅಲ್ಲದೆ ಸದ್ಯಕ್ಕೆ ಈ ಪ್ಯಾಕ್ ಆಯ್ದ ಪ್ರದೇಶಗಳಲ್ಲಿ ಮಾತ್ರ ಲಭ್ಯವಿದೆ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo