ವೋಡಾಫೋನ್ ಪ್ಲಾನ್: ಇಂದು ಅತಿ ಹೆಚ್ಚು ಬಳಕೆಯಲ್ಲಿರುವ ವೊಡಾಫೋನ್ 255 ಪ್ಲಾನಲ್ಲಿ ದಿನಕ್ಕೆ 2GB ಯ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು 28 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ.

ವೋಡಾಫೋನ್ ಪ್ಲಾನ್: ಇಂದು ಅತಿ ಹೆಚ್ಚು ಬಳಕೆಯಲ್ಲಿರುವ ವೊಡಾಫೋನ್ 255 ಪ್ಲಾನಲ್ಲಿ ದಿನಕ್ಕೆ 2GB ಯ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು 28 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯ.
HIGHLIGHTS

ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಅಂದ್ರೆ ಒಟ್ಟಾರೆಯಾಗಿ 56GB ಡೇಟಾ ನಿಮಗೆ ಲಭ್ಯ.

ವೊಡಾಫೋನ್ ಇಂಡಿಯ ತನ್ನ ಪ್ರಿಪೇಡ್ ಗ್ರಾಹಕರು ಹೊಸ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ದಿನಕ್ಕೆ 2GB ಯ ಡೇಟಾವನ್ನು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯು 255 ರೂ. ಬೆಲೆಯಲ್ಲಿ ಇದೆ ಮತ್ತು ಈಗ ಅದರ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಕೆಲವು ಪ್ರದೇಶಗಳಲ್ಲಿ ಲಭ್ಯವಿದೆ. ಐಡಿಯಾ ರೂ 249 ಯೋಜನೆ ರಿಲಯನ್ಸ್ ಜಿಯೊ ರೂ 198 ಯೋಜನೆ ಮತ್ತು ಏರ್ಟೆಲ್ ರೂ 249 ಯೋಜನೆಯಂತೆ ವೊಡಾಫೋನ್ ರೂ 255 ಪ್ರಿಪೇಡ್ ಪ್ಲಾನ್ ಸ್ಪರ್ಧಿಸುತ್ತದೆ. ವೋಡಫೋನಿನ ಈ 255 ರೂಗಳ ಪ್ಯಾಕ್ನ ರೀಚಾರ್ಜ್ನಲ್ಲಿ ಗ್ರಾಹಕರು ದಿನಕ್ಕೆ 4G / 3G ಡೇಟಾವನ್ನು 2GB ಪಡೆಯುತ್ತಾರೆ. ಮತ್ತು ಪ್ಯಾಕ್ 28 ದಿನಗಳವರೆಗೆ ಮಾನ್ಯವಾಗಲಿದೆ. ಅಂದರೆ ನೀವು 56GB ಯ ಡೇಟಾವನ್ನು ಪಡೆಯುತ್ತೀರಿ ಎಂದರ್ಥ.

http://oi67.tinypic.com/30sd1co.jpg 

ಇದಲ್ಲದೆ ಪ್ಯಾಕ್ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಧ್ವನಿ ಕರೆಗಳ ಪ್ರಯೋಜನಗಳನ್ನು ನೀಡುತ್ತದೆ. ರೋಮಿಂಗ್ನಲ್ಲಿ ಉಚಿತ ಕರೆಗಳು ಮತ್ತು ದಿನಕ್ಕೆ 100 SMS ಮತ್ತು ಅನ್ಲಿಮಿಟೆಡ್ ಕರೆಗಳು ಲಭ್ಯವಿವೆ ಆದರೆ ಇದು ಕೆಲವು ನಿಬಂಧನೆಗಳನ್ನು ಹೊಂದಿದ್ದು ಒಂದೇ ದಿನಕ್ಕೆ 250 ನಿಮಿಷಗಳು ಮತ್ತು ವಾರಕ್ಕೆ 1000 ನಿಮಿಷಗಳು ಈ ಪ್ಲಾನಲ್ಲಿ ಲಭ್ಯವಿದೆ. ಈ ಪ್ಯಾಕ್ ಪ್ರಸ್ತುತ ದೆಹಲಿ- NCR, ಮುಂಬೈ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ, ಉತ್ತರ ಪ್ರದೇಶ ಪಶ್ಚಿಮ ಮತ್ತು ಉತ್ತರ ಪ್ರದೇಶದ ಈಸ್ಟ್ ವಲಯಗಳಲ್ಲಿ ಲಭ್ಯವಿದೆ. ಉಳಿದ ವಲಯಗಳಲ್ಲಿ ಸದ್ಯಕ್ಕೆ ವೊಡಾಫೋನ್ ಗ್ರಾಹಕರಿಗೆ ಈ ರೀಚಾರ್ಜ್ ಪ್ಯಾಕ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo