ನೋಕಿಯಾ 7 ಪ್ಲಸ್, ನೋಕಿಯಾ 6 ಮತ್ತು ನೋಕಿಯಾ 8 ಸಿರೊಕೊವನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಕಂಪೆನಿಯು ದೆಹಲಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತು. ಇದರಲ್ಲಿ ನೋಕಿಯಾ 6, ನೋಕಿಯಾ 8 ಸಿರೊಕ್ಕಾ, ನೋಕಿಯಾ 7 ಪ್ಲಸ್ ಎಲ್ಲವೂ ಆಂಡ್ರಾಯ್ಡ್ ಫೋನ್ಸ್ ಆಗಿವೆ ಈ ಫೋನ್ಗಳನ್ನು ಈಗಾಗಲೇ ಸ್ಪೇನಿನ ಬಾರ್ಸಿಲೋನಾದಲ್ಲಿ ನಡೆದ MWC 2018 ರಲ್ಲಿ ಪ್ರಾರಂಭಿಸಲಾಯಿತು. ನೋಕಿಯಾ 1 ಬಜೆಟ್ ಆಂಡ್ರಾಯ್ಡ್ ಗೋ ಒರಿಯೊ ಆವೃತ್ತಿ ಸಾಧನವು ಈಗಾಗಲೇ ಭಾರತದಲ್ಲಿ ರೂ 5499 ರೂಗಳಿಗೆ ಲಭ್ಯವಿದೆ.
Nokia 7 Plus
ಇವುಗಳ ಬೆಲೆ ಮತ್ತು ಲಭ್ಯತೆಗೆ ಬಂದರೆ ನೋಕಿಯಾ 6 ಇದೇ ಏಪ್ರಿಲ್ 6 ರಿಂದ ಭಾರತದಲ್ಲಿ 16,999 ರೂಗಳ ದರದಲ್ಲಿ ಲಭ್ಯವಿರುತ್ತದೆ. ಆಫ್ಲೈನ್ ಮತ್ತು ಆನ್ಲೈನ್ ಚಾನೆಲ್ಗಳಲ್ಲಿ ಈ ಸ್ಮಾರ್ಟ್ಫೋನ್ ಲಭ್ಯವಾಗುತ್ತದೆ. ಮತ್ತು ನೋಕಿಯಾ 7 ಪ್ಲಸ್ ಏಪ್ರಿಲ್ 20 ರಿಂದ ಪೂರ್ವ ಬುಕಿಂಗ್ಗೆ ಲಭ್ಯವಿರುತ್ತದೆ ಆದರೆ ಇದು ಏಪ್ರಿಲ್ 30 ರಿಂದ ಮಾರಾಟವಾಗಲಿದೆ. ಭಾರತದಲ್ಲಿ ನೋಕಿಯಾ 7 ಬೆಲೆ 25,999 ರೂಗಳಿಂದ ಶುರುವಾಗಲಿದೆ.
Nokia 6 (2018)
ಮತ್ತೋಂದು ಫೋನ್ ನೋಕಿಯಾ 8 ಸಿರೋಕೋ ಕೂಡ ಏಪ್ರಿಲ್ 20 ರಿಂದ ಪೂರ್ವ ಬುಕಿಂಗ್ಗೆ ಲಭ್ಯವಿರುತ್ತದೆ ಮತ್ತು ಮಾರಾಟ ಏಪ್ರಿಲ್ 30 ರಿಂದ ಆರಂಭವಾಗುತ್ತದೆ. ಫೋನ್ ಕೂಡ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರುತ್ತದೆ. ನೋಕಿಯಾ 8 ಸಿರೊಕ್ಕಾದ ಬೆಲೆ 49,999 ರೂಗಳಿಂದ ಶುರುವಾಗಲಿದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.