ಇದು ನೋಕಿಯಾದ ಹೊಚ್ಚ ಹೊಸ ನೋಕಿಯಾ 7 ಪ್ಲಸ್, ಇಲ್ಲಿದೆ ಇದರ ಸಂಪೂರ್ಣವಾದ ಮಾಹಿತಿ.

Updated on 11-Apr-2018

ನೋಕಿಯಾ 7 ಪ್ಲಸಿನ ಮೊದಲ ನೋಟ ಮತ್ತು ಸಂಕ್ಷಿಪ್ತವಾದ ಮಾಹಿತಿ ಪಡೆಯೋಣ. ಭಾರತದಲ್ಲಿ ಇದರ ಬೆಲೆ 25,999 ರೂಪಾಯಿಗಳು. ಇದರ ಡಿಸೈನ್ ಬಗ್ಗೆ ಮಾತನಾಡಬೇಕಾದರೆ ಇತ್ತೀಚೆಗೆ ಹೊರ ಬಂದ ಮೋಟೋ X4 ನಂತೆ ಇಲ್ಲವಾದರೂ ಸಾಲಿಡ್ ಲುಕ್ ಹೊಂದಿದೆ. ಇದನ್ನು ನೀವು ಒಮ್ಮೆ ಕೈಯಲ್ಲಿ ಹಿಡ್ಕೊಂಡ್ರೆ ಇದರ ಫೀಲ್ ಸಾಲಿಡಾಗಿರುತ್ತದೆ. ಇದರ ಸುತ್ತಲೂ ಹೊಂದಿರುವ ಕೊಪರ್ ಬ್ಯಾಂಡ್ ಈ ಫೋನನ್ನು ಇನ್ನು ಹೆಚ್ಚು ಅದ್ಭುತಗೊಳಿಸಿ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿರುವ ಬೇರೆ ಫೋನ್ಗಳಿಗೆ ಬೆಸ್ಟ್ Computation ನೀಡುತ್ತದೆ.

ಈ ಹೊಸ ಫೋನ್ 6 ಇಂಚಿನ IPS ಡಿಸ್ಪ್ಲೇಯೊಂದಿಗೆ 18:9 aspect ratio ಅನ್ನು ಹೊಂದಿದೆ. ಇದರ ಪ್ರತಿ ತುದಿಯವರೆಗೆ ಹರಡಿಕೊಂಡಿರುವ ಸ್ಕ್ರೀನ್ ಮೇಲೆ ಮತ್ತು ಕೇಳ ಭಾಗದಲ್ಲಿ ಬೇಕಾಗುವಷ್ಟು ಸ್ಪೆಸನ್ನು ಸಹ ನೀಡಿದೆ. ನನ್ನ ಪ್ರಕಾರ ಹೇಳಬೇಕೆಂದರೆ ಇದು ನಿಜಕ್ಕೂ ಉತ್ತಮವಾದ ಡಿಸ್ಪ್ಲೇ ಡಿಸೈನನ್ನು ಹೊಂದಿದೆ. ನಾನೀಗಾಗಲೇ ಇದನ್ನು ಕೆಲ ಕಾಲ ಬಳಸಿದ್ದೆನೆ ನನ್ನ ಅನುಭವದಲ್ಲಿ ಇದು ಬ್ರೈಟ್ ಮತ್ತು ವೈಬ್ರಿನ್ಟ್ ಆಗಿದ್ದು ಇದರಲ್ಲಿ ಯಾವುದೇ ದೂರುಗಳಿಲ್ಲ. ಇದರಲ್ಲಿ ನೀವು ಬಯಸುವ ವೀವಿಂಗ್ ಆಂಗಲ್ ಉತ್ತಮವಾಗಿದ್ದು ಇದು ಭಾರತದಲ್ಲಿ ಮೊಟ್ಟ ಮೊದಲ Qualcomm Snapdragon 660 ಅನ್ನು ನಡೆಸುವ ಫೋನ್ ಇದಾಗಿದೆ.

ಅಲ್ಲದೆ ಇದರಲ್ಲಿದೆ 4GB ಯ ರಾಮ್ ಮತ್ತು 64GB ಯ ಸ್ಟೋರೇಜ್ ಇದನ್ನು ನೀವು ಮೈಕ್ರೋ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬವುದು. ನಾನು ಇದನ್ನು ಬಳಸುವಾಗ ಯಾವುದೇ ರೀತಿಯ ಅಡಚಣೆ ನೋಡಲಿಲ್ಲ. ಇದರಲ್ಲಿ ಈಗಾಗಲೇ ಲಭ್ಯವಿರುವ ಪ್ರೀ Pre-Install ಅಪ್ಪ್ಲಿಕೇಷನ್ಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಯಿಸುತ್ತವೆ. ಇದರ ಒಂದು ಮಾತೆಂದರೆ ನೋಕಿಯಾ 2018 ರಲ್ಲಿ ಅತ್ಯುತ್ತಮವಾದ Hardware Implementation ಮಾಡಿದೆ. ಮತ್ತು ಇದರಲ್ಲಿದೆ 3800mAh ಬ್ಯಾಟರಿ ಇದು ಎರಡು ದಿನಗಳ ಸಾಮಾನ್ಯ ಬಳಕೆಗೆ ಬರುತ್ತದೆ.

ಈ ಫೋನ್ ಆಂಡ್ರಾಯ್ಡ್ ಒಂದರಿಂದ ಕೂಡಿದೆ. ಅಂದ್ರೆ ಇದು ಪ್ಯೂರ್ ವೆನಿಲಾ ಆಂಡ್ರಾಯ್ಡ್ 8.1 ಅನ್ನು ಹೊಂದಿರುತ್ತದೆ . HMD ಇದರ ಸೆಕ್ಯೂರಿಟಿ ಅಪ್ಡೇಟ್ monthly ಬೆಸಸಲ್ಲಿ ನೀಡುವ ಭರವಸೆ ನೀಡಿದೆ. ಇದರಲ್ಲಿ ಕ್ಯಾಮೆರಾ ಮಾತನಾಡಬೆಂದರೆ ಬ್ಯಾಕಲ್ಲಿದೆ 12+13MP  ಡ್ಯೂಯಲ್ ಸೆಟಪ್ ಮತ್ತು ಫ್ರಂಟಲ್ಲಿ 16MP ಶೋಟನ್ನು ಹೊಂದಿದೆ. ಈ ಭಾರಿ ನೋಕಿಯಾ Zeiss lensesಗಳ ಜೋತೆ ಕೈ ಜೋಡಿಸಿದೆ. ಇದರಲ್ಲಿನ 12+13MP ಟೆಲಿಫೋಟೋ ಲೆನ್ಸ್ 2X ಆಪ್ಟಿಕಲ್ ಜೂಮ್ ಮತ್ತು ಬೊಕೆ ಎಫೆಕ್ಟ್ ನೀಡುತ್ತದೆ.

ಇದರಲ್ಲಿ ನಾವೀಗಾಗಲೇ ತೆಗೆದ ಕೆಲ ಚಿತ್ರಗಳು ತುಂಬ ಸುಂದರ ಮತ್ತು ನ್ಯಾಚುರಲ್ ಲುಕ್ ನೀಡುತ್ತದೆ.  ಈ ಫೋನ್ ಪೂರ್ತಿಯಾಗಿ Moto X4 ಮತ್ತು Oppo F7 ಅನ್ನು ಮೀರಿಸುತ್ತದೆ. ಇದರ ಬಿಲ್ಡ್ ಡಿಸೈನ್ಗಳ ಜೋತೆ ನೀವು ಇದರ ಕೆಲ ಮುಖ್ಯ ಫೀಚರ್ಗಳಿಗಾಗಿ    ಇದರ ಬೆಲೆಗೆ ಸರಿ ಅನ್ಲೆಬೇಕಾಗುತ್ತದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :