ಭಾರತದಲ್ಲಿ 4GB ಯಾ RAM ಮತ್ತು ಡ್ಯೂಯಲ್ ಬ್ಯಾಕ್ ಕ್ಯಾಮರಾದೊಂದಿಗೆ ಮೋಟೋ X4 ಇಂದು ಲಭ್ಯ.

ಭಾರತದಲ್ಲಿ 4GB ಯಾ RAM ಮತ್ತು ಡ್ಯೂಯಲ್ ಬ್ಯಾಕ್ ಕ್ಯಾಮರಾದೊಂದಿಗೆ ಮೋಟೋ X4 ಇಂದು ಲಭ್ಯ.

ಈ ಹೊಸ ಮೋಟೋ X4 ನೆನ್ನೆ ಅಂದರೆ ನವೆಂಬರ್ 13 ರಂದು ಭಾರತದಲ್ಲಿ ಪ್ರಾರಂಭವಾಗಿದ್ದು ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿದೆ. ಮತ್ತು ಇ-ಕಾಮರ್ಸ್ ವೆಬ್ಸೈಟ್ ಈಗಾಗಲೇ ಮೋಟೋ X4 ಗಾಗಿ ಮೀಸಲಾದ ಟೀಸರ್ ಪುಟವನ್ನು ನೀಡಿ ಇದರ ಪ್ರಾರಂಭ ದೃಢೀಕರಿಸಿದೆ. ಮೊಟೊರೊಲಾ ಭಾರತದಲ್ಲಿ ಹಲವಾರು ಟೀಸರ್ಗಳನ್ನು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಿದೆ. ಮುಂಬರುವ ತನ್ನ ಹೊಸ ಫೋನ್ನ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತದೆ. ಇದು ನಿಮಗೆ ಎರಡು ರೂಪದಲ್ಲಿ ಲಭ್ಯವಿದೆ. 

3GB ಯಾ RAM ಮತ್ತು 32GB ಯಾ ಸ್ಟೋರೇಜ್ ಇದರ ಬೆಲೆ 20,999 ರೂಗಳು.
4GB ಯಾ RAM ಮತ್ತು 64GB ಯಾ ಸ್ಟೋರೇಜ್ ಇದರ ಬೆಲೆ 22,999 ರೂಗಳು.

ಸ್ಮಾರ್ಟ್ಫೋನಿನ ಪರಿಪೂರ್ಣವಾದ ಅನುಭವವನ್ನು ಅನುಭವಿಸಲು ಮೋಟೋ X4 ಪ್ರಬಲವಾಗಿದೆ. ಇದು ನವೆಂಬರ್ 13 ರಂದು ಫ್ಲಿಪ್ಕಾರ್ಟ್ನಲ್ಲಿ ಬರಲಿದೆ ಎಂದು ಕಂಪನಿಯ ಟ್ವೀಟನ್ನು ಮಾಡಿದೆ.
ಇದು ಮೊದಲ ಬಾರಿಗೆ ಮೋಟೋ X4 ಅನ್ನು IFA  2017 ರಲ್ಲಿ ಬರ್ಲಿನ್ನಲ್ಲಿ ಅನಾವರಣಗೊಳಿಸಲಾಯಿತು. ಸ್ಮಾರ್ಟ್ಫೋನ್ ಡ್ಯೂಯಲ್ ಬ್ಯಾಕ್ ಕ್ಯಾಮೆರಾದ ಜೋತೆ ಕೆಲ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಅಂತರ್ನಿರ್ಮಿತಗೊಳಿಸಲಾಗಿದೆ. 

ಈ ಹೊಸ ಸ್ಮಾರ್ಟ್ಫೋನ್ 1080 × 1920 ಪಿಕ್ಸೆಲ್ಗಳ ಉತ್ತಮವಾದ ರೆಸಲ್ಯೂಶನನ್ನು ನೀಡಿ 5.2 ಯಾ FHD LTPS IPS ಡಿಸ್ಪ್ಲೇಯನ್ನು ಹೊಂದಿದೆ.  ಮೋಟೋ X4 ಒಂದು ಅನ್ಯೋಡಿಸ್ಡ್ ಅಲ್ಯುಮಿನಿಯಮ್ ಫ್ರೇಮ್ ಮತ್ತು 3D ಹಿಂಭಾಗದ ಸುತ್ತುವ ವಿನ್ಯಾಸವನ್ನು ಹೊಂದಿದೆ. ಮತ್ತು  ಇದು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ನಿಮ್ಮ ಕಣ್ಮನ ಸೆಳೆಯುತ್ತದೆ. ಮೊಟೊರೊಲಾ ಈ ಹೊಸ ಮೋಟೋ X4 ಒಂದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 630 ಪ್ರೊಸೆಸರ್ನಿಂದ ಚಾಲಿತವಾಗಿದ್ದು 2.2 GHz ನಲ್ಲಿ ದೊರೆಯುತ್ತದೆ. ಈ ಫೋನ್ನಲ್ಲಿ GPU ಅಡ್ರಿನೋ 508 GPU  ಮತ್ತು 3GB RAM ಮತ್ತು 32GB ಸ್ಟೋರೇಜನ್ನು ಹೊಂದಿದೆ. 

ಆದರೆ ಈ ಫೋನ್ನಲ್ಲಿ 2TB ಮೈಕ್ರೊ SD ಬೆಂಬಲಿಸುತ್ತದೆ. ಇದರಲ್ಲಿ 3000mAh ಬ್ಯಾಟರಿಯಿಂದ ಬೆಂಬಲಿತವಾಗಿದ್ದು ಕಂಪೆನಿಯು 6 ಗಂಟೆಗಳ ಬಳಕೆಯನ್ನು ನೀಡುತ್ತದೆ.  
ಈ ಹೊಸ ಸ್ಮಾರ್ಟ್ಫೋನ್ ಮೋಟೋ X4 ನ ಪ್ರಮುಖವಾದ ಲಕ್ಷಣವೆಂದರೆ 12MP ಮತ್ತು 8MP ಸೆನ್ಸಾರ್ನೊಂದಿಗೆ ಡ್ಯುಯಲ್ ಬ್ಯಾಕ್ ಕ್ಯಾಮರಾ ಕಡಿಮೆ ಬೆಳಕಿನ ಸ್ಥಿತಿಗಳಲ್ಲು ವೇಗವಾಗಿ ಗಮನಹರಿಸಲು ಡ್ಯುಯಲ್ ಆಟೋಫೋಕಸ್ ಪಿಕ್ಸೆಲ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಕ್ಯಾಮರಾದ ನಿರ್ದಿಷ್ಟತೆಯು 12MP ಡ್ಯುಯಲ್ ಆಟೋಫೋಕಸ್ ಪಿಕ್ಸೆಲ್ ಸಂವೇದಕವಾಗಿದ್ದು f/ 2.0 ಮತ್ತು 1.4 ಸಂವೇದಕ ಗಾತ್ರದೊಂದಿಗೆ 8MP ಕ್ಯಾಮರಾವು 120-ಡಿಗ್ರಿ ಕ್ಷೇತ್ರದ ವೀಕ್ಷಕ ಸಂವೇದಕ ಮತ್ತು f/2.2 ಅಪರ್ಚರ್ ಮತ್ತು 1.126 ಪಿಕ್ಸೆಲ್ ಗಾತ್ರದೊಂದಿಗೆ ಅಲ್ಟ್ರಾ-ವೈಡ್ ಕೋನವನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo