ಇವತ್ತು ನಾವು Samsung Galaxy S9 ಸಂಪೂರ್ಣವಾದ ರಿವ್ಯೂ ನೋಡೋಣ. ಸ್ನೇಹಿತರೇ ಇದು ನಿಮಗೆ 57,990 ರೂಪಾಯಿಗಳಲ್ಲಿ ಲಭ್ಯವಿದೆ. ಈ ಸ್ಯಾಮ್ಸಂಗ್ನ Galaxy S9 ಮತ್ತು S9+ ನಲ್ಲಿ ಕೇವಲ ಡಿಸ್ಪ್ಲೇ ಮತ್ತು ಬ್ಯಾಟರಿಯಲ್ಲಿ ಮಾತ್ರ ವ್ಯತ್ಯಾಸವಾಗದೆ ಈ ಬಾರಿ S9+ ಡ್ಯೂಯಲ್ ಕ್ಯಾಮೆರಾದಲ್ಲೂ ಬದಲಾವಣೆ ತಂದಿದೆ. ಹಾಗಾದ್ರೆ ಸ್ನೇಹಿತರೇ ಯಾವುದೇ ಟೈಮ್ ವೆಸ್ಟ್ ಮಾಡ್ದೆ ಬನ್ನಿ ಇದರ ವಿಮರ್ಶೆ ನೋಡೋಣ.
Samsung Galaxy ನಿಜಕ್ಕೂ ಯಾವುದೇ ಕೊರತೆಯಿಲ್ಲದೆ ಅಚ್ಚುಕಟ್ಟಾದ ವಿನ್ಯಾಸದೊಂದಿಗೆ ಯಾವುದೇ ಕಟ್ಗಳಿಲ್ಲದೆ ಫುಲ್ ಸ್ಕ್ರಿನ್ ಡಿವೈಸಾಗಿ ಮೂಡಿದೆ. ಸ್ಯಾಮ್ಸಂಗ್ ರೂಡಿಯಲ್ಲಿರುವಂತೆ ಸಣ್ಣ ಮೈಕಟ್ಟನ್ನು ಅದ್ರಲ್ಲಿ ನೀಡಿದೆ. ಆದರೂ ಇದರ ಮುಂಭಾಗವನ್ನು ಇನ್ನು ಹೆಚ್ಚು ಆಕರ್ಷಣೀಯ ರಚಿಸಿದೆ. ಅದರ ಕೋನಗಳು ಸಾಕಾಗುವಷ್ಟು ಕರ್ವ್ಗಳಿಂದ ಕೂಡಿದ್ದು ಇದರ ಬೆಝೆಲ್ಗಳು ತುಂಬ ಸಣ್ಣದಾಗಿದೆ ಅಂದ್ರೆ ಕೇವಲ 2ಮಿಲಿ ಮೀಟರಿಂದ ತಯಾರಾಗಿದೆ. ಅಲ್ಲದೆ ಇದರಲ್ಲಿ ನಿಮಗೆ ಸಿಗುತ್ತೆ 5.8 ಇಂಚಿನ ಡಿಸ್ಪ್ಲೇ ಸೈಜ್.
ನೀವು ಇದರ ಹಿಂಭಾಗವನ್ನು ನೋಡಿದಾಗ ಇದರ ಬದಲಾವಣೆಗಳು ಎದ್ದು ಕಾಣುತ್ತವೆ. ಇದರಲ್ಲಿನ ಫಿಂಗರ್ಪ್ರಿಂಟ್ ಸೆನ್ಸರ್ ಏರಿಯ ನಿಜಕ್ಕೂ ಹೊಸದಾಗಿ ಆವರಿಸಿದೆ. ಈ ಬಾರಿ ಸ್ಯಾಮ್ಸಂಗ್ ಫಿಂಗರ್ಪ್ರಿಂಟ್ ಸೆನ್ಸರನ್ನು ಕ್ಯಾಮೆರಾ ಲೆನ್ಸ್ಗಳ ಕೆಳಭಾಗದಲ್ಲಿ ನೀಡಿದೆ. ಇದು ಕಳೆದ ವರ್ಷದಿಂದ ಹೆಚ್ಚು ಕುತೂಹಲದೊಂದಿಗೆ ನಿರ್ಮಿಸಿದೆ.
ಈಗ ಇದರಲ್ಲಿನ 5.8 ಇಂಚಿನ Super AMOLED Infinity display ಈ Samsung Galaxy S9 ಮುಖ್ಯ ಆಕರ್ಷಣೆಯಾಗಿದೆ. ಇದು 1440x2960p ರೆಸೊಲ್ಯೂಷನ್ ನಿಮಗೆ deep black level ಜೋತೆಯಲ್ಲಿ high contrast ratio ನೀಡುತ್ತದೆ. ಸ್ಯಾಮ್ಸಂಗ್ ಇದರಲ್ಲಿನ ಬಣ್ಣವನ್ನು ನಿಖರ ಪ್ಯಾನಲ್ಗಳನ್ನಾಗಿ ಮಾಡಲು ಹೆಚ್ಚು ಕೆಲಸ ಮಾಡಿದೆ. ಇದರಲ್ಲಿನ ಡೀಫಾಲ್ಟ್ ಡಿಸ್ಪ್ಲೇ ಓವರ್ ಸ್ಯಾಚುರೇಟೆಡ್ ಆಗಿಲ್ಲ. ಅಲ್ಲದೆ ಇದರಲ್ಲಿ ನಿಮಗೆ ಇದರ ಡೀಫಾಲ್ಟ್ ಕಲರ್ ಟೆಂಪ್ರೇಚರ್ ನೀವು ಬೇರೆ ಚೇಂಜ್ ಮಾಡ್ಕೊಳ್ಳಬವುದು.
ಸ್ಯಾಮ್ಸಂಗ್ ಗ್ಯಾಲಕ್ಸಿ S9 Exynos 9810 ಪ್ರೊಸೆಸರಿಂದ ನಡೆಯುತ್ತದೆ. ಇದರಲ್ಲಿ ಹೊಸದಾಗಿ 10nm chipset ಒಳಗೊಂಡಿದ್ದರು ಸಹ ಹೆಚ್ಚು ಆಡಿದ ಮೇಲೆ ಹೀಟ್ ಆಗುತ್ತೆ. ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಿಮಗೆ ಆಂಡ್ರಾಯ್ಡ್ 8.0 ಒರೆಯೋ ಒಳಗೊಂಡಿದೆ. ಪ್ರತಿದಿನದ ಬಳಕೆಯಲ್ಲಿ ಸರಳ ಮತ್ತು ಸುಲಭವಾಗಿ ಕಾರ್ಯನಿರ್ವಯಿಸುತ್ತದೆ. ಅದರೊಂದಿಗೆ ಇದರಲ್ಲಿದೆ 4GB ಯ RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಇದರಲ್ಲಿನ ಟಚ್ ಸಹ ತುಂಬ ವೇಗವಾಗಿ ಕೆಸಲ ಮಾಡುತ್ತೇ ಇದರಲ್ಲಿ ಯಾವುದೇ ದೂರುಗಳಿಲ್ಲ. ಈ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಲ್ಲಿ ನಿಮಗೆ ಇದರಲ್ಲಿನ UI ಫೀಚರ್ಗಳ ಬಗ್ಗೆ ಹೇಳಿಬೇಕೆಂದ್ರೆ ಇದರ AR ಇಮ್ಮೊಜಿ ನಿಜಕ್ಕೂ ಹೆಚ್ಚು ಕುತೂಹಲಕಾರಿಯಾಗಿದೆ. ಇದರ ಕ್ಯಾಮೆರಾದ ಬಗ್ಗೆ ಹೇಳಬೇಕಾದ್ರೆ 12MP 26ಮಿಲಿ ಮೀಟರ್ ಕ್ಯಾಮೆರಾ ಡ್ಯೂಯಲ್ ಪಿಕ್ಸೆಲ್ ಆಟೋಫೋಕಸ್ ಆಪ್ಟಿಕಲ್ ಇಮೇಜ್ ಸ್ಟಬಿಲೈಸಷನ್ ಮತ್ತು ಸಿಂಗಲ್ LED ಫ್ಲಾಶ್ ಹೊಂದಿದೆ.
ಇದರ ವಿಶೇಷತೆಯೆಂದರೆ ನೀವು ಇದರಲ್ಲಿ f/1.5 ಮತ್ತು f/2.4 ಅಪೇಚರನ್ನು ಬೆಳಕಿಗೆ ತಕ್ಕಂತೆ ಬದಲಾಯಿಸಬವುದು. ಹಗಲಿನ ಸಮಯದಲ್ಲಿ ಈ ಎರಡು ಅಪೆರ್ಚರ್ರ್ಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರೋಲ್ಲ. ಇದರಲ್ಲಿನ ಶಟರ್ ಸ್ಪೀಡ್ ಮತ್ತು exposure ಬ್ಯಾಲೆನ್ಸ್ ಹೆಚ್ಚು ಮಾಡುತ್ತದೆ. ಇದರಲ್ಲಿನ f/1.5 ಅಪೆರ್ಚುರ್ ಒಂದು ಸರಿಸಮನಾದ ಸ್ಪರ್ಧೆಗೆ ದಾರಿಮಾಡಿಕೊಡುತ್ತದೆ. ಇದರ ವೈಡ್ ಅಪೆರ್ಚರ್ ತೆಗೆದ ಫೋಟೋಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತೋರುತ್ತದೆ.
ಇದನ್ನ ನೀವು ಗ್ಯಾಲಕ್ಸಿ 8 ಕ್ಕೆ ಹೋಲಿಸಿದರೆ ಕೇವಲ ಲೈಟ್ ಬೆಳಕಲ್ಲಿ ವ್ಯತ್ಯಾಸ ಕಂಡುಬರುತ್ತದೆ ಅಷ್ಟೇ. ಅಲ್ಲದೆ ಇದರಲ್ಲಿಯೂ ಸಹ noise reduction algorithm ಸಹ ನೀಡಿದೆ. ಈ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಲ್ಲಿ 960fps super slow-mo ವೀಡಿಯೋಗಳನ್ನು 720p ರೆಸೊಲ್ಯೂಷನಲ್ಲಿ ಪಡೆಯಬವುದು. ಆದರೆ ರಾತ್ರಿಯಾಗುತ್ತಿದ್ದಂತೆ ನ್ಯಾಚುರಲ್ ಲುಕ್ ನೀಡದೆ ಹೆಚ್ಚು ಲೈಟಿನ ಅವಶ್ಯಕತೆಯಾಗುತ್ತದೆ. ಇದರ ಫ್ರಂಟಲ್ಲಿದೆ 8MP ಸೆಲ್ಫಿ ಕ್ಯಾಮೆರಾ f/1.7 ಅಪೇಚರೊಂದಿಗೆ ಉತ್ತಮವಾದ ಬ್ಯಾಕ್ಗ್ರೌಂಡ್ ಮಾಹಿತಿಯ ಜೋತೆಯಲ್ಲಿ ಪೂರ್ಣ ಫೋಟೋಗಳನ್ನು ನೀಡುತ್ತದೆ. ಇದರಲ್ಲಿ ನಿಮಗೆ ಫಿಲ್ಟ್ರ್ಗರ್ಗಳನ್ನು ಸಹ ಒಳಗೊಂಡಿದೆ.
VO8: ಈ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಲ್ಲಿದೆ 3000mAh Exynos 9810 ಪ್ರೊಸೆಸರ್ ಚಿಪ್ ಇರುವುದರಿಂದ ಬ್ಯಾಟರಿ ಇರುವಂತೆ ಫಲಿತಾಂಶ ನೀಡೋಲ್ಲ. Galaxy S9’s PCMark Work ನಲ್ಲಿ 2.0 battery life ಪರ್ಫಾರ್ಮೆನ್ಸ್ ನೀಡಿದೆ. ಹೊಸ PubG mobile game ಸುಮಾರು 1 ಘಂಟೆ ಆಡಿದ ಮೇಲೆ 80 ರಿಂದ 40% ಬ್ಯಾಟರಿ ಡೌನ್ ಆಗುತ್ತೆ ಇದು ಒಳ್ಳೆ ವಿಷಯವಲ್ಲ. ಆದರೂ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನಿಮಗೆ ಫಾಸ್ಟ್ ಚಾರ್ಜಿಂಗ್ನಲ್ಲಿ 1 ಘಂಟೆಯೊಳಗೆ ಅರ್ಧಕ್ಕಿಂತ ಹೆಚ್ಚು ಚಾರ್ಜ್ ನೀಡುತ್ತದೆ.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.