ಈಗ ಮತ್ತೆ ಶುರುವಾಗಲಿದೆ ರಿಲಯನ್ಸ್ ಜಿಯೋ ಫೋನಿನ ಪ್ರೀ-ಬುಕಿಂಗ್.

ಈಗ ಮತ್ತೆ ಶುರುವಾಗಲಿದೆ ರಿಲಯನ್ಸ್ ಜಿಯೋ ಫೋನಿನ ಪ್ರೀ-ಬುಕಿಂಗ್.

ಇದೇ ಆಗಸ್ಟ್ ನಲ್ಲಿ ಬುಕ್ ಮಾಡಲಾದ ಸುಮಾರು ಆರು ಮಿಲಿಯನ್ ಮೊಬೈಲ್ ಫೋನ್ಗಳ ವಿತರಣೆಯನ್ನು ಪೂರ್ಣಗೊಳಿಸಿದ ಬಳಿಕ ರಿಲಯನ್ಸ್ ಈಗ ತನ್ನ ಎರಡನೇ ಹಂತದ ಬುಕಿಂಗನ್ನು ಪ್ರಾರಂಭಿಸಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ರಿಲಯನ್ಸ್  ಜಿಯೋಫೋನ್ ಬುಕಿಂಗ್ ಎರಡನೆಯ ಹಂತವು ಇದೇ ದೀಪಾವಳಿ ನಂತರ ಆರಂಭವಾಗಲಿದೆ ಅಂದರೆ ಅಕ್ಟೋಬರ್-ಅಂತ್ಯ ಅಥವಾ ನವೆಂಬರ್ ಮೊದಲ ವಾರದಿಂದ ಸಾಧ್ಯವಿದೆ ಎಂದು ರಿಲಯನ್ಸ್ ಚಿಲ್ಲರೆ ಚಾನೆಲ್ ಪಾಲುದಾರರು ಈಗಾಗಲೇ ಹೇಳಿದ್ದಾರೆ.

ಅಲ್ಲದೆ ರಿಲಯನ್ಸ್ ಕಂಪನಿಯು ತನ್ನ 4G  ಫೀಚರ್ ಫೋನ್ನ ಬುಕಿಂಗನ್ನು ತೆರೆದಾಗ ಸುಮಾರು ಆರು ಮಿಲಿಯನ್ ಜಿಯಾಫೋನ್ಗಳನ್ನು ಕೇವಲ ಮೂರು ದಿನಗಳಲ್ಲಿ ಜನರು ಬುಕ್ ಮಾಡಿದರು.      

ಅದೇ ರೀತಿಯಲ್ಲಿ ಶುರುವಿನಲ್ಲಿ ಈ 4G  ಫೋನ್ ಬಳಕೆದಾರರಿಗೆ ಅತಿ "ಪರಿಣಾಮಕಾರಿಯಾಗಿ ಉಚಿತ" ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಘೋಷಿಸಿದ್ದರು. ಆದರೆ ಈ ರೀತಿಯ ಯೋಜನೆಯು ದುರುಪಯೋಗವನ್ನು ತಡೆಗಟ್ಟಲು ಜಿಯೋಫೋನ್ ಖರೀದಿದಾರರು ಒಂದು ಬಾರಿ ಸಂಪೂರ್ಣವಾಗಿ ಮರುಪಾವತಿಸಬಹುದಾದ ಠೇವಣಿ 1,500 ರೂಪಾಯಿ ಪಾವತಿಸಬೇಕಾಗುತ್ತದೆ. ಮತ್ತು 36 ತಿಂಗಳ ಕಾಲ ಫೋನ್ ಬಳಸಿದ ನಂತರ ಗ್ರಾಹಕನಿಗೆ ಸಂಪೂರ್ಣ ಹಣವನ್ನು ಮರುಪಾವತಿಸಲಾಗುತ್ತದೆ. ಕಂಪನಿ ಮತ್ತಷ್ಟು ಶಾಂತ ಮರುಪಾವತಿ ಯೋಜನೆಗಳನ್ನು ಸಹ ಹೊಂದಿದೆ.

ಈ ಬಳಕೆದಾರರಿಗೆ ಜಿಯೊ ನಿಗದಿಪಡಿಸಿದ ಹೊಸ ಸ್ಥಿತಿಯಡಿಯಲ್ಲಿ ವರ್ಷದಲ್ಲಿ 1,500 ರೂ. ಮರುಚಾರ್ಜ್ ಮಾಡಿದ್ದಾರೆ. ಹೊಸ ಹ್ಯಾಂಡ್ಸೆಟಿನ ಖರೀದಿದಾರರು ಮೊದಲ ವರ್ಷದಲ್ಲಿ ಸಾಧನವನ್ನು ಹಿಂದಿರುಗಿಸಿದರೆ 500 ರೂಪಾಯಿಗಳ ಮರುಪಾವತಿಯನ್ನು ಪಡೆಯಬಹುದು. ಎಂದು ತಿಳಿಸಲಿಗಿದೆ. 
 
 ಕಂಪೆನಿಯ ಈ ಘೋಷಣೆಯಲ್ಲಿ ವಿವಿಧ ರೇಟ್ ಪ್ಲಾನನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಹಕರಿಗೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ ವರ್ಷಕ್ಕೆ 1,500 ರೂ. ಮೊತ್ತವನ್ನು ತಲುಪಲು ನಮ್ಯತೆಯನ್ನು ನೀಡುತ್ತಾರೆ.ಅದರ ಜೋತೆಗೆ ಎರಡನೇ ವರ್ಷದ ಫೋನ್ ಹಿಂದಿರುಗಿದ ಮೇಲೆ ಗ್ರಾಹಕರು ರೂ 1,000 ಮರುಪಾವತಿ ಮತ್ತು ಪಡೆಯಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo