ಇಂದಿನಿಂದ ಜಿಯೋ ಫೋನ್ ವಿತರಣೆ ಆರಂಭವಾಗಲಿದ್ದು ಕೇವಲ 15 ದಿನಗಳಲ್ಲಿ ಭಾರತದಲ್ಲಿ 60 ಲಕ್ಷ ಫೋನ್ ಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ.
ಇಷ್ಟು ಕಡಿಮೆ ಬೆಲೆಯಲ್ಲಿ ಬರುವ 4G ಬೆಸ್ಟ್ ಫೋನಾಗಿದ್ದು ಇದು ಮೊದಲು ಬುಕ್ಕಿಂಗ್ ಮಾಡಿದ 60 ಲಕ್ಷ ಜನರಿಗೆ ಈ ಫೋನ್ ದೊರೆಯಲಿದೆ.
ಅಲ್ಲದೆ ಇದರ ವಿತರಣೆಯ ಸಮಯದಲ್ಲಿ ಭದ್ರತೆಯಾ ದೃಷ್ಠಿಯಿಂದ ಮುಂಗಡ ಬುಕ್ಕಿಂಗ್ ಹಣವನ್ನು ಪಡೆಯಲಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ವಾಪಸ್ ಮಾಡಲಾಗುವುದು. ಎಂದು ತಿಳಿಸಲಾಗಿದೆ.
ಅಲ್ಲದೆ ಮುಂದಿನ ಆರು ತಿಂಗಳುಗಳಲ್ಲಿ (ವಾರಕ್ಕೆ 5 ಮಿಲಿಯನ್) 100-150 ಮಿಲಿಯನ್ ಫೋನ್ಗಳನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ ಎಂದು ಜಿಯೋ ಹೇಳಿದೆ. ಸೆಪ್ಟೆಂಬರ್ 21 ರಂದು ಪ್ರಾರಂಭವಾದ ನವರಾತ್ರಿ ಉತ್ಸವದ ಸಮಯದಲ್ಲಿ ಮೊದಲ ಬಹಳಷ್ಟನ್ನು ಬಿಡುಗಡೆ ಮಾಡಲಾಗುವುದು ಎಂದು ET ಪತ್ರಿಕೆಯು ಹಿಂದಿನ ವರದಿಯಲ್ಲಿ ತಿಳಿಸಿತ್ತು.
ಈ ಮೂಲಕ ನೋಡುವುದಾದರೆ ಈ ಜಿಯೋ ಫೋನ್ ಗ್ರಾಹಕರಿಗೆ ಉಚಿತವಾಗಿಯೇ ಸಿಗಲಿದೆ. ಮತ್ತು ಇದು ಕೇವಲ 15 ದಿನದಲ್ಲಿ 60 ಲಕ್ಷ ಫೋನ್ ವಿತರಣೆಯಾಗಲಿದ್ದು ಮೊಬೈಲ್ ಸೇವಾ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಠಿಸಲಿದೆ. ಇದರ 500 ರೂಗಳನ್ನು ನೀಡಿ ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರು ಬಾಕಿ 1000 ರೂ.ಗಳನ್ನು ವಿತರಣೆ ಸಂದರ್ಭದಲ್ಲಿ ಕೊಡಬೇಕಿದೆ. ಈ ಹಣವನ್ನು 3 ವರ್ಷಗಳಲ್ಲಿ ವಾಪಸ್ ಮಾಡಲಾಗುವುದು.
2 ನೇ ಹಂತದಲ್ಲಿ ಬುಕ್ಕಿಂಗ್ ಮಾಡಿದ್ದ ಎಲ್ಲಾ 61.8 ಲಕ್ಷ ಗ್ರಾಹಕರಿಗೆ ಜಿಯೋ ಫೋನ್ ವಿತರಿಸಲಾಗುವುದು. ಇದರಲ್ಲಿ ವಿಶೇಷವಾಗಿ ವಾಯ್ಸ್ ಕಾಲ್ ಉಚಿತವಾಗಿದ್ದು ಪ್ರತಿ ತಿಂಗಳಿಗೆ ಕೇವಲ 153 ರೂ. ಪಾವತಿಸಿದಲ್ಲಿ ನಿಮಗೆ ಅನ್ಲಿಮಿಟೆಡ್ ಡೇಟಾ ಸಹ ಫ್ರೀಯಾಗಿ ಸಿಗಲಿದೆ. ಇದರೊಂದಿಗೆ ಇನ್ನೂ ಹಲವು ಸೌಲಭ್ಯಗಳು ಜಿಯೋ ಉಚಿತವಾಗಿ ನೀಡಲಿದೆ.