ನಿಮಗೀದು ಗೋತ್ತಾ ಕೇವಲ 49/- ರೂಪಾಯಿಯಲ್ಲಿ ರಿಲಯನ್ಸ್ ಜಿಯೋ 1GB ಡೇಟಾ ಪೂರ್ತಿ 28 ದಿನಗಳಿಗೆ ಕೊಟ್ರೆ ಏರ್ಟೆಲ್ 3GB ಡೇಟಾ 1 ದಿನಕ್ಕೆ ಕೊಡ್ತಾ ಇದೆ. ನಿಮ್ಮ ಪ್ರಕಾರ ಯಾವ ಪ್ಲಾನ್ ಬೆಸ್ಟ್.

Updated on 23-Apr-2018

ಏರ್ಟೆಲ್ ತಮ್ಮ ಗ್ರಾಹಕರಿಗೆ ಹೆಚ್ಚಿನ ಮಾಹಿತಿ ಒದಗಿಸುವಲ್ಲಿ ರಿಲಯನ್ಸ್ ಜಿಯೊವನ್ನು ಜಯಿಸಲು ಪ್ರಯತ್ನಿಸುತ್ತಿದ್ದಾರೆ. ಅಂದ್ರೆ ಭಾರ್ತಿ  ಏರ್ಟೆಲ್ ತಮ್ಮ ಹೊಸ ಬಳಕೆದಾರರಿಗೆ 3GB ಯ 4G ಡೇಟಾವನ್ನು ಒದಗಿಸುತ್ತಿದೆ. ಇದು ಆಯ್ದ ಕೆಲವು ಬಳಕೆದಾರರಿಗೆ ಮಾತ್ರ ಸದ್ಯಕ್ಕೆ 49 ರೂಗಳೊಂದಿಗೆ ಪುನರ್ಭರ್ತಿ ನೀಡುತ್ತದೆ.

ಏರ್ಟೆಲ್ ಈಗ ರಿಲಯನ್ಸ್ ಜಿಯೊವಿನಂತೆ 49 ರೂಗಳ ಪ್ಯಾಕನ್ನು ಕೇವಲ 1 ದಿನಕ್ಕೆ ಕೊಡ್ತಾ ಇದೆ. ಈ ಪ್ಲಾನ್ ಏರ್ಟೆಲ್ ಪ್ರಿಪೇಯ್ಡ್ ಬಳಕೆದಾರರು ಮೈ ಏರ್ಟೆಲ್ ಅಪ್ಲಿಕೇಶನನ್ನು ತೆರೆದು ಅಥವಾ ಏರ್ಟೆಲ್ ಕಂಪೆನಿಯ ವೆಬ್ಸೈಟ್ಗೆ ಹೋಗಿ ತಮ್ಮ ಏರ್ಟೆಲ್ ನಂಬರ್ ಹಾಕಿ ಪಡೆಯಬವುದು. ಈ ಹೊಸ ಪ್ಯಾಕ್ ಅಲ್ಲಿ ಡೇಟಾ ವಿಭಾಗದ ಅಡಿಯಲ್ಲಿ ಲಭ್ಯವಿರುತ್ತದೆ.

ಕೇವಲ 20,000 ರೂಪಾಯಿಗಳೊಗೆ ಲಭ್ಯವಿರುವಂತಹ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಪೆಟಿಎಂ ಮಾಲ್ ನೀಡುತ್ತಿದೆ ಭರ್ಜರಿ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್. 

ಈ ಪ್ಲಾನಲ್ಲಿ ಭಾರ್ತಿ ಏರ್ಟೆಲ್ ನಿಮಗೆ 3GB ಯ 4G ಡೇಟಾವನ್ನು 24 ಘಂಟೆಗಳ ಸಮಯಕ್ಕೆ ಅಂದ್ರೆ 1  ದಿನದ ವ್ಯಾಲಿಡಿಟಿಯೊಂದಿಗೆ ಮೈ ಏರ್ಟೆಲ್ ಅಪ್ಲಿಕೇಶನ್ ಅಥವಾ ಏರ್ಟೆಲ್ ವೆಬ್ಸೈಟಿಂದ ಲಭ್ಯವಾಗುತ್ತದೆ. ಇಲ್ಲಿ ಪ್ರಿಪೇಡ್ ಚಂದಾದಾರರು ಈ ಪ್ರಸ್ತಾಪಕ್ಕೆ ಅರ್ಹರಾಗಿದ್ದರೆಯೇ ಎಂಬುದನ್ನು  ಪರಿಶೀಲಿಸಬಹುದು. ಈ ಪ್ಲಾನ್ ನಿಮಗೆ ವ್ಯಾಲಿಡ್ ಇದ್ದಲ್ಲಿ ರಿಚಾರ್ಜ್ ಮಾಡಿ ಪಡೆಯಬವುದು. ಅದರಲ್ಲಿ ನೀವು 1GB ಯ 4G ಡೇಟಾವನ್ನು ಮಾತ್ರ ತೋರಿಸುತ್ತದೆ. 

ಅಲ್ಲದೆ ಏರ್ಟೆಲ್ನ ಈ 49 ರೂಪಾಯಿಯ ಪ್ಲಾನ್ ಜಿಯೋವಿನಲ್ಲಿಯು ನೀವು ಇದೇ ಮೌಲ್ಯದ ರೀಚಾರ್ಜ್ ಪ್ಯಾಕ್ ನೋಡಬವುದು. ರಿಲಯನ್ಸ್ ಜಿಯೋವಿನ ಈ  49 ರೂಪಾಯಿಯ ಪ್ಲಾನ್ ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಅಂದ್ರೆ ನೀವು ಜಿಯೋ ಸಿಮ್ ಬಳಕೆದರಾಗಿದ್ದರು ಸಹ ಈ ಪ್ಲಾನ್ ನೀವು ಪಡೆಯಲಾಗುವುದಿಲ್ಲ. ಏಕೆಂದರೆ ರಿಲಯನ್ಸ್ ಜಿಯೋಫೋನ್ ಬಳಸುತ್ತಿರುವ ಬಳಕೆದಾರರಿಗೆಂದೆ ಈ ಪ್ಲಾನ್ಗಳನ್ನು ಇಟ್ಟಿದೆ. 

ಇದರಲ್ಲಿ ಅವರು 1GB ಯ 4G ಡೇಟಾ ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಪೂರ್ತಿ 28 ದಿನಗಳ ಅವಧಿಯ ಮಾನ್ಯತೆಗಾಗಿ ನೀಡುತ್ತಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :