ಜಿಯೋ ಈ ವರ್ಷ ಹೊಸ JioPhone 2 ಬಿಡುಗಡೆಗೊಳಿಸಿದೆ. ಈ ಫೋನ್ ನಿಮಗೆ ಕೇವಲ 2999 ರೂಗಳಲ್ಲಿ ಲಭ್ಯವಿದೆ. ಮೊದಲಿಗೆ ಇದರ ಡಿಸೈನ್ ಬಗ್ಗೆ ಹೇಳಬೇಕೆಂದ್ರೆ ಈ ಫೋನನ್ನು ಹೋರಿಜಾಂಟಲ್ ಡಿಸ್ಪ್ಲೇಯೊಂದಿಗೆ ಈ ಬಾರಿ ಹೊರ ತಂದಿದ್ದಾರೆ. ಈ ಹೊಸ JioPhone 2 ಬ್ಲಾಕ್ಬೆರ್ರಿ ಫೋನ್ಗಳ ಲುಕ್ ನೀಡುತ್ತದೆ. ಇದರ ಡಿಸ್ಪ್ಲೇ ನಿಮಗೆ 2.4 ಇಂಚಿನ QVGA ಆಗಿದ್ದು ಈ ಫೀಚರ್ ಫೋನ್ ಸಹ ಹಳೆಯ JioPhone ನಂತೆಯೇ KAI-OS ನಲ್ಲಿ ಚಲಿಸುತ್ತದೆ.
ಇದರಲ್ಲಿ ನಿಮಗೆ 512MB ಯ RAM ಮತ್ತು 4GB ಯ ಸ್ಟೋರೇಜ್ ಲಭ್ಯವಿದೆ. ಈ ಹೊಸ JioPhone 2 ರ ಸ್ಟೋರೇಜನ್ನು ನೀವು ಮೈಕ್ರೋ SD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬವುದು. ಈ ಫೋನಲ್ಲಿ ನಿಮಗೆ 2000mAh ಬ್ಯಾಟರಿ ಲಭ್ಯವಿದೆ. ಇದರ ಕ್ಯಾಮೆರಾದ ಬಗ್ಗೆ ಹೇಳಬೇಕಾದ್ರೆ ಇದರ ಬ್ಯಾಕಲ್ಲಿದೆ 2MP ಕ್ಯಾಮೆರಾ ನೀಡಿದರೆ ಇದರ ಮುಂಭಾಗದಲ್ಲಿ ನಿಮಗೆ VGA ಫ್ರಂಟ್ ಫೇಸಿಂಗ್ ಕ್ಯಾಮೆರಾ ಲಭ್ಯವಾಗುತ್ತದೆ.
ಇದರ ಕನೆಕ್ಟಿವಿಟಿಯ ಬಗ್ಗೆ ಹೇಳಬೇಕೆಂದ್ರೆ ಈ ಫೋನ್ ಡುಯಲ್ ಸಿಮ್ ಮತ್ತು LTE, FM, Bluetooth, GPS, Wi-Fi, ಮತ್ತು NFC ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ ಕಂಪನಿಯು 15ನೇ ಆಗಸ್ಟ್ ನಂತರ ಈ ಹೊಸ ಫೋನಲ್ಲಿ Facebook & WhatsApp ಸಹ ಬಳಸಬವುದು ಎಂಬ ಭರವಸೆಯನ್ನು ನೀಡಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.