ಭಾರತದಲ್ಲಿ ರಿಲಯನ್ಸ್ ತನ್ನ ಹೊಸ JioPhone 2 ಅನ್ನು ಇದೇ 15ನೇ ಆಗಸ್ಟ್ 2018 ರಂದು ಲಭ್ಯವಾಗಲಿದೆ

ಭಾರತದಲ್ಲಿ ರಿಲಯನ್ಸ್ ತನ್ನ ಹೊಸ JioPhone 2 ಅನ್ನು ಇದೇ 15ನೇ ಆಗಸ್ಟ್ 2018 ರಂದು ಲಭ್ಯವಾಗಲಿದೆ

ಜಿಯೋ ಈ ವರ್ಷ ಹೊಸ JioPhone 2 ಬಿಡುಗಡೆಗೊಳಿಸಿದೆ. ಈ ಫೋನ್ ನಿಮಗೆ ಕೇವಲ 2999 ರೂಗಳಲ್ಲಿ ಲಭ್ಯವಿದೆ. ಮೊದಲಿಗೆ ಇದರ ಡಿಸೈನ್ ಬಗ್ಗೆ ಹೇಳಬೇಕೆಂದ್ರೆ ಈ ಫೋನನ್ನು ಹೋರಿಜಾಂಟಲ್ ಡಿಸ್ಪ್ಲೇಯೊಂದಿಗೆ ಈ ಬಾರಿ ಹೊರ ತಂದಿದ್ದಾರೆ. ಈ ಹೊಸ JioPhone 2 ಬ್ಲಾಕ್ಬೆರ್ರಿ ಫೋನ್ಗಳ ಲುಕ್ ನೀಡುತ್ತದೆ. ಇದರ ಡಿಸ್ಪ್ಲೇ ನಿಮಗೆ 2.4 ಇಂಚಿನ QVGA ಆಗಿದ್ದು ಈ ಫೀಚರ್ ಫೋನ್ ಸಹ ಹಳೆಯ JioPhone ನಂತೆಯೇ KAI-OS ನಲ್ಲಿ ಚಲಿಸುತ್ತದೆ. 

ಇದರಲ್ಲಿ ನಿಮಗೆ 512MBRAM ಮತ್ತು 4GB ಯ ಸ್ಟೋರೇಜ್ ಲಭ್ಯವಿದೆ. ಈ ಹೊಸ JioPhone 2 ರ ಸ್ಟೋರೇಜನ್ನು ನೀವು ಮೈಕ್ರೋ SD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬವುದು. ಈ ಫೋನಲ್ಲಿ ನಿಮಗೆ 2000mAh ಬ್ಯಾಟರಿ ಲಭ್ಯವಿದೆ. ಇದರ ಕ್ಯಾಮೆರಾದ ಬಗ್ಗೆ ಹೇಳಬೇಕಾದ್ರೆ ಇದರ ಬ್ಯಾಕಲ್ಲಿದೆ 2MP ಕ್ಯಾಮೆರಾ ನೀಡಿದರೆ ಇದರ ಮುಂಭಾಗದಲ್ಲಿ ನಿಮಗೆ VGA ಫ್ರಂಟ್ ಫೇಸಿಂಗ್ ಕ್ಯಾಮೆರಾ ಲಭ್ಯವಾಗುತ್ತದೆ. 

https://static.digit.in/default/c67b444823a3d090e0dcc6619b61acc443d209ac.jpeg

ಇದರ ಕನೆಕ್ಟಿವಿಟಿಯ ಬಗ್ಗೆ ಹೇಳಬೇಕೆಂದ್ರೆ ಈ ಫೋನ್ ಡುಯಲ್ ಸಿಮ್ ಮತ್ತು LTE, FM, Bluetooth, GPS, Wi-Fi, ಮತ್ತು NFC ಅನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೆ ಕಂಪನಿಯು 15ನೇ ಆಗಸ್ಟ್ ನಂತರ ಈ ಹೊಸ ಫೋನಲ್ಲಿ Facebook & WhatsApp ಸಹ ಬಳಸಬವುದು ಎಂಬ ಭರವಸೆಯನ್ನು ನೀಡಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo