ರಿಲಯನ್ಸ್ ಕಮ್ಯುನಿಕೇಷನ್ಸ್ ಡಿಸೆಂಬರ್ 1 ರಿಂದ ತನ್ನ ಧ್ವನಿ ಕರೆಗಳನ್ನು ಬಂದ್ ಮಾಡಲಿದ್ದು ಬಳಕೆದಾರರು ಬೇರೆ ನೆಟ್ವರ್ಕ್ಗೆ ಹೋಗಲು ಡಿಸೆಂಬರ್ 31 ಕೊನೆಯ ದಿನಾಂಕ.

ರಿಲಯನ್ಸ್ ಕಮ್ಯುನಿಕೇಷನ್ಸ್ ಡಿಸೆಂಬರ್ 1 ರಿಂದ ತನ್ನ ಧ್ವನಿ ಕರೆಗಳನ್ನು ಬಂದ್ ಮಾಡಲಿದ್ದು ಬಳಕೆದಾರರು ಬೇರೆ ನೆಟ್ವರ್ಕ್ಗೆ ಹೋಗಲು ಡಿಸೆಂಬರ್ 31 ಕೊನೆಯ ದಿನಾಂಕ.

ಭಾರತೀಯ ರಿಲಯನ್ಸ್ ಕಮ್ಯುನಿಕೇಷನ್ಸ್ ಈಗ ಇದೇ ಡಿಸೆಂಬರ್ 1 ರಿಂದ ತನ್ನ ಧ್ವನಿ ಕರೆ ಸೇವೆಯನ್ನು ಸ್ಥಗಿತಗೊಳಿಸುತ್ತದೆ. ಮತ್ತು ಟೆಲಿಕಾಂ ನಿಯಂತ್ರಕ ಟ್ರಾಯ್ ನೀಡಿದ ನಿರ್ದೇಶನದಂತೆ ಅದರ ಗ್ರಾಹಕರು ವರ್ಷದ ಕೊನೆಯಲ್ಲಿ ಇತರೇ ನೆಟ್ವರ್ಕ್ಗೆ ಪೋರ್ಟ್ ಮಾಡಿಕೊಳ್ಳಬವುದು. ಎಲ್ಲಾ ದೂರಸಂಪರ್ಕ ನಿರ್ವಾಹಕರ ನಿರ್ದೇಶನದಲ್ಲಿ ಟೆಲಿಕಾಂ ರೆಗ್ಯುಲೇಟರಿ ಆಫ್ ಇಂಡಿಯಾ (TRAI) 31ನೇ ಅಕ್ಟೋಬರ್ 2017 ರಂದು RCom (ರಿಲಯನ್ಸ್ ಕಮ್ಯುನಿಕೇಷನ್ಸ್) ತನ್ನ ಗ್ರಾಹಕರಿಗೆ 4G ಡೇಟಾ ಸೇವೆಗಳನ್ನು ಮಾತ್ರ ಒದಗಿಸಲಿದೆ ಮತ್ತು ಅದರ ಫಲಿತಾಂಶವನ್ನು ಒದಗಿಸುವುದನ್ನು ಸ್ಥಗಿತಗೊಳಿಸುತ್ತದೆ ಎಂದು ತಿಳಿಸಿದೆ. 

ತನ್ನ ಚಂದಾದಾರರಿಗೆ ಈ ಸೇವೆಗಳು 1ನೇ ಡಿಸೆಂಬರ್ 2017 ರಿಂದ ಜಾರಿಗೆ ತರಲಿದೆ. ಭಾರತೀಯ ರಾಜ್ಯಗಳಾದ ಆಂಧ್ರಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಉತ್ತರ ಪೂರ್ವ ಮತ್ತು ಪಶ್ಚಿಮ, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಎಂಟು ಟೆಲಿಕಾಂ ವಲಯಗಳಲ್ಲಿ 2G ಮತ್ತು 4G ಸೇವೆಗಳನ್ನು ಒದಗಿಸುತ್ತಿದೆ ಎಂದು RCom (ರಿಲಯನ್ಸ್ ಕಮ್ಯುನಿಕೇಷನ್ಸ್)  ತಿಳಿಸಿದೆ. ಇದರ ಬಗ್ಗೆ ಈಗಾಗಲೇ ಅನಿಲ್ ಅಂಬಾನಿಯಾ ನೇತೃತ್ವದ ಕಂಪೆನಿಯು ಟ್ರಾಯ್ಗೆ ಮಾಹಿತಿ ನೀಡಿದೆ. CDMA ನೆಟ್ವರ್ಕ್ ಸಿಸ್ಟಮಾ ಶ್ಯಾಮ್ ಟೆಲಿಸರ್ವಿಸಸನ್ನು ನವೀಕರಿಸಿದೆ. ಇದು ದೆಹಲಿ, ರಾಜಸ್ಥಾನ, ಯುಪಿ ವೆಸ್ಟ್, ತಮಿಳುನಾಡು, ಕೇರಳ, ಕರ್ನಾಟಕ, ಗುಜರಾತ್, ಕೋಲ್ಕತಾ, ಪಶ್ಚಿಮ ಬಂಗಾಳದಲ್ಲಿ 4G ಸೇವೆಯನ್ನು ಒದಗಿಸಲಿದೆ. ಮತ್ತು ಸೇವಾ ಪ್ರದೇಶಗಳು.

ರಿಲಯನ್ಸ್ ಕಮ್ಯುನಿಕೇಷನ್ಸ್ ಬಳಕೆದಾರರು 4G ಡಾಟಾ ಸೇವೆಗಳೊಂದಿಗೆ ಮುಂದುವರಿಯಲು ಬಯಸದಿದ್ದರೆ ಚಂದಾದಾರರು ಯಾವುದೇ ನಿರ್ವಾಹಕರನ್ನು ಸಂಪರ್ಕಿಸಲು ಆಯ್ಕೆ ಮಾಡುವ ಮೂಲಕ ಧ್ವನಿ ಕರೆಗಳ ಮುಚ್ಚುವಿಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿಯನ್ನು ಕಳುಹಿಸಿದ್ದಾರೆಂದು RCom ತಿಳಿಸಿದೆ. ನಿಯಂತ್ರಕ RCom ತನ್ನ ಚಂದಾದಾರರ ಯಾವುದೇ ಕೋರಿಕೆಯನ್ನು ವಿನಂತಿಸಬಾರದೆಂದು ನಿರ್ದೇಶಿಸಿದ್ದು 31ನೇ ಡಿಸೆಂಬರ್ 2017 ರವರೆಗೂ RCom ಚಂದಾದಾರರ ಮನವಿಯನ್ನು ಸ್ವೀಕರಿಸಲು ಎಲ್ಲಾ ಟೆಲಿಕಾಂ ಆಪರೇಟರ್ಗಳನ್ನು ಈಗಾಗಲೇ ಕೇಳಿ ಕೊಂಡಿದೆ.

ತಿಂಗಳ ಆರಂಭದಲ್ಲಿ ಏರ್ಸೆಲ್ನೊಂದಿಗೆ ನಿಸ್ತಂತು ವ್ಯವಹಾರ ವಿಲೀನ ಒಪ್ಪಂದವನ್ನು ಮುಚ್ಚಲು ವಿಫಲವಾದ ಬಳಿಕ RCom (ರಿಲಯನ್ಸ್ ಕಮ್ಯುನಿಕೇಷನ್ಸ್) ಸುಮಾರು 46 ಸಾವಿರ ಕೋಟಿ ರೂ.ಗಳ ಸಾಲದಲ್ಲಿ ತನ್ನ ಧ್ವನಿ ಕರೆ ಸೇವೆಗಳನ್ನು ಮುಚ್ಚಿಕೊಳ್ಳಲು ನಿರ್ಧರಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ RCom (ರಿಲಯನ್ಸ್ ಕಮ್ಯುನಿಕೇಷನ್ಸ್)  ಮತ್ತು ಏರ್ಸೆಲ್ ತಮ್ಮ ಮೊಬೈಲ್ ವ್ಯವಹಾರಗಳನ್ನು ವಿಲೀನಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ ಈ ಒಪ್ಪಂದವು ಕಾನೂನು ಮತ್ತು ನಿಯಂತ್ರಕ ಅನಿಶ್ಚಿತತೆಯಾ ಆಸಕ್ತ ಪಕ್ಷಗಳ ಆಕ್ಷೇಪಣೆ ಮತ್ತು ಸೂಕ್ತ ಅನುಮೋದನೆ ಪಡೆಯುವಲ್ಲಿ ವಿಳಂಬದ ಕಾರಣದಿಂದಾಗಿ ಒಪ್ಪಂದವನ್ನು ಕಳೆದುಕೊಂಡವು.

 

ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo