ಹೊಸ Asus Zenfone Max Pro M1 ಮತ್ತು vs Xiaomi Redmi Note 5 Pro ಇವುಗಳಲ್ಲಿ ಯಾವುದರ ಡಿಸ್ಪ್ಲೇ ಬೆಸ್ಟ್ ಇಲ್ಲಿದೆ ಸಂಪೂರ್ಣವಾದ ಹೋಲಿಕೆ

Updated on 16-May-2018

ಒಂದು ಅತ್ಯುತ್ತಮವಾದ ಫೋನಲ್ಲಿ ಹಾರ್ಡ್ವೇರ್ ಬಿಟ್ರೆ ನೆಕ್ಸ್ಟ್ ಇರೋದೇ ಅದರ ಡಿಸ್ಪ್ಲೇ ಡಿಸೈನ್. ಅಲ್ಲದೆ ಇಂದಿನ ದಿನಗಳಲ್ಲಿ ಇದು ಹೆಚ್ಚು ಪ್ರಮುಖವಾದ ಅಂಶವಾಗಿದೆ. ಡಿಸ್ಪ್ಲೇಯ ಉತ್ತಮವಾದ ಗುಣಮಟ್ಟ ಅತ್ಯಗತ್ಯವಾಗಿದೆ. ಸದ್ಯಕ್ಕೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಅಟ್ಟಹಾಸವನ್ನು ಮೆರೆಯುತ್ತಿರುವ ಈ ಎರಡು ಹೊಸ ಸ್ಮಾರ್ಟ್ಫೋನ್ ಅಂದ್ರೆ Xiaomi Redmi Note 5 Pro ಮತ್ತು Asus Zenfone Max Pro M1 ಗಳ ಸಂಪೂರ್ಣವಾದ ಡಿಸ್ಪ್ಲೇ ಹೋಲಿಕೆ ಮೂಲಕ ಯಾವುದು ಬೆಸ್ಟ್ ಡಿಸ್ಪ್ಲೇ ಹೊಂದಿದೆ ನೋಡೋಣ.

ಇವುಗಳ ನಿರ್ಮಾಣದ ಬಗ್ಗೆ ಮಾತನಾಡಬೇಕಾದರೆ Redmi Note 5 Pro ಗಿಂತ ಸ್ವಲ್ಪ ಕಡಿಮೆ ವೆಚ್ಚದಲ್ಲಿ ಲಭ್ಯವಾದರೂ Zenfone Max Pro M1 ಸಹ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡ್ಕೊಂಡಿಲ್ಲ. ಇದರ ಬ್ಯಾಕ್ ಮೆಟಲ್ ಮತ್ತು ಪ್ಲಾಸ್ಟಿಕ್ ನೆಟ್ವರ್ಕ್ ಪಾಲಿಕಾರ್ಬೊನೇಟ್ನಿಂದ ಮಾಡಲ್ಪಟ್ಟ ಮೇಲ್ಭಾಗ ಮತ್ತು ಕೆಳಭಾಗದ ವಿಭಾಗಗಳೊಂದಿಗೆ ಸ್ಪೋರ್ಟ್ ಮೆಟಲ್ ಬಾಡಿಯನ್ನು ಇವೇರಡು ಹೊಂದಿವೆ. ಅಲ್ದೆ ಇವೇರಡು ಫೋನ್ಗಳು 18: 9 ಇನ್ವಿಸಿಯಂ ಡಿಸ್ಪ್ಲೇಯನ್ನು ಮತ್ತು ಹಿಂಭಾಗದಲ್ಲಿ ಎರಡು ಫೋನ್ಗಳ ಕ್ಯಾಮೆರಾಗಳನ್ನು ಸಹ ಆಯತಕಾರದಲ್ಲಿ ಜೋಡಿಸಿದೆ.

ಇವುಗಳನ್ನು ನೀವು ಹೊರಗೆ ಸೂರ್ಯನ ಬೆಳಕಿನಲ್ಲಿ ಬಳಸಿದರೆ Zenfone Max Pro M1 ನಿಮಗೆ ಹೆಚ್ಚು ಆಕರ್ಷಿಣೀಯವಾಗಿ ಕಾಣುತ್ತದೆ. ಇಲ್ಲಿಯು Redmi Note 5 Pro ಒಂದು ರೀತಿಯಲ್ಲಿ ಸರಿ ಅನ್ನಬವುದಷ್ಟೇ. ಇದು ಹೆಚ್ಚು ಬ್ರೈಟರ್ ಮತ್ತು ಉತ್ತಮ ಕಲರನ್ನು ನೀಡುತ್ತದೆ. ಇವುಗಳಲ್ಲಿನ ಟಚ್ ಅನುಭವ ನಿಜಕ್ಕೂ ಉತ್ತಮವಾಗಿದೆ ಅದರಲ್ಲೂ Redmi Note 5 Pro ಹೆಚ್ಚು ಮುಂದೆ ಇದೆ. 

ಇವೇರಡರ ಡಿಸ್ಪ್ಲೇ ಸರಿಸಮನಗಿದೆ. ನೀವೋಬ್ಬ ನಾರ್ಮಲ್ ಬಳಕೆದಾರರಾಗಿದ್ದರೆ ಇದು ನಿಜಕ್ಕೂ ಕುತೂಹಲ ಕೆರಳಿಸುತ್ತದೆ. ನಿಮಗೆ ಟಚ್ ಹೆಚ್ಚು ಮುಖ್ಯವಾದರೆ ನೀವು  Redmi Note 5 Pro ಪಡ್ಕೊಳ್ಳಿ ಒಂದು ವೇಳೆ ನಿಮಗೆ ಬ್ರೈಟರ್ ಡಿಸ್ಪ್ಲೇ ಬೇಕಾದ್ರೆ Zenfone Max Pro M1 ಈಗ ಒಟ್ಟಾರೆಯ ಆಯ್ಕೆ ನಿಮ್ಮ ಮುಂದೆ ಇದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :