ಹೊಚ್ಚ ಹೊಸ Asus Zenfone Max Pro M1 ಮತ್ತು vs Xiaomi Redmi Note 5 Pro ಇವುಗಳಲ್ಲಿ ಯಾವುದರ ಕ್ಯಾಮೆರಾ ಬೆಸ್ಟ್ ಇಲ್ಲಿದೆ ಸಂಪೂರ್ಣವಾದ ಹೋಲಿಕೆ.

ಹೊಚ್ಚ ಹೊಸ Asus Zenfone Max Pro M1 ಮತ್ತು vs Xiaomi Redmi Note 5 Pro ಇವುಗಳಲ್ಲಿ ಯಾವುದರ ಕ್ಯಾಮೆರಾ ಬೆಸ್ಟ್ ಇಲ್ಲಿದೆ ಸಂಪೂರ್ಣವಾದ ಹೋಲಿಕೆ.

ಇವತ್ತು ಇಲ್ಲಿ ಅದ್ದೂರಿಯಾಗಿ ಮಾರಾಟವಾಗುತ್ತಿರುವ ಎರಡು ಬಜೆಟ್ ಫೋನ್ಗಗಳಾದ Asus Zenfone Max Pro M1 ಮತ್ತು Xiaomi Redmi Note 5 Pro ನಡುವಿನ ಸಂಪೂರ್ಣವಾದ ಕ್ಯಾಮೆರಾ ಹೋಲಿಕೆ ನೀಡುತ್ತೇವೆ. ಈ ಫೋನ್ಗಳಲ್ಲಿ ಕ್ಯಾಮೆರಾ ನಿಮ್ಮ ಪ್ರಾಮುಖ್ಯತೆಯಾಗಿದ್ದಾರೆ ಗಮನವಿಟ್ಟು ಸಂಪೂರ್ಣವಾದ ಮಾಹಿತಿ ಪಡೆದುಕೊಳ್ಳಿ.

Asus Zenfone Max Pro M1 ನಲ್ಲಿ ಬ್ಯಾಕಲ್ಲಿದೆ ಡ್ಯೂಯಲ್ ಕ್ಯಾಮೆರಾ ಸೆಟಪ್ ಅಂದ್ರೆ 13+5MP ಆದರೆ Xiaomi Redmi Note 5 Pro ಬ್ಯಾಕಲ್ಲಿದೆ 12+5MP ಡ್ಯೂಯಲ್ ಕ್ಯಾಮೆರಾ ಸೆಟಪ್.  ಇವುಗಳ ಫ್ರಂಟ್ ಕ್ಯಾಮೆರಾ ನೋಡಬೇಕಾದರೆ Asus Zenfone Max Pro M1 ನಲ್ಲಿ ಫ್ರಂಟಲ್ಲಿದೆ 8MP ಮತ್ತು ಅದೇ Xiaomi Redmi Note 5 Pro ನಲ್ಲಿದೆ 20MP ಫ್ರಂಟ್ ಕ್ಯಾಮೆರಾ. ಒಟ್ಟಾರೆಯಾಗಿ ಇಂದಿನ ದಿನಗಳಲ್ಲಿ ಒಂದು ಸ್ಮಾರ್ಟ್ಫೋನಲ್ಲಿ ಪ್ರಾರಂಭ ಮತ್ತು ಅಂತ್ಯ ಕ್ಯಾಮೆರವಾಗಿದೆ. ಇದರಿಂದ ಅವು ತಮ್ಮನ್ನು ತಾವೇ ಆಧರಿಸಿಕೊಳ್ಳುತ್ತವೆ.

ಇದರಲ್ಲಿನ ಕ್ಯಾಮರಾ ಆಪ್ ಬಗ್ಗೆ ಮಾತನಾಡಬೇಕಾದರೆ Asus Zenfone Max Pro M1 ಕ್ವಾಲ್ಕಾಮ್ ಕ್ಯಾಮೆರಾ ಆಪ್ ಇದರಲ್ಲಿ ಅಸೂಸ್ ಹೆಚ್ಚಾಗೇನು ಬದಲಾವಣೆ ತಂದಿಲ್ಲ. ಸ್ವಲ್ಪ ಆಪ್ಟಿಮೇಷನ್ ಕೊಂಚ ಸರಿ ಅನ್ನಬವುದಷ್ಟೇ. ಅದೇ Xiaomi Redmi Note 5 Pro ಬಗ್ಗೆ ಹೇಳಬೇಕಾದ್ರೆ ಇದು ತನ್ನದೇಯಾದ ಕ್ಯಾಮೆರಾ ಆಪನ್ನು ಹೊಂದಿದೆ ಇದು Xiaomi ಯ ಬಳಕೆದಾರರು ಇಷ್ಟಪಡಬವುದು. 

ಒಟ್ಟಾರೆಯಾಗಿ ಈ ವರ್ಷ ಅಸೂಸಿನ ಈ  ಫೋನ್ ಅಸ್ತವ್ಯಸ್ತವಾದ ಕ್ಯಾಮೆರಾ ಹೊಂದಿದೆ. ಏಕೆಂದರೆ ಇದರ ಕ್ಯಾಮೆರಾ ಆಪ್ ಉದಾಹರಣೆಗೆ ಕ್ಲಿಕ್ ಮಾಡುವಾಗ ಇದ್ರಲ್ಲಿನ ಪ್ರೊ ಮೂಡ್ ಬಳಸುವುದು ಕಷ್ಟಕರ. ಇದರ ಒಟ್ಟು ಮೊತ್ತದ ಮೆನು ಸಿಂಗಲ್ ಲೈನಲ್ಲಿ ನೀಡಿದ್ದಾರೆ.  Xiaomi Redmi Note 5 Pro ಬಗ್ಗೆ ಹೇಳಬೇಕಾದ್ರೆ ಇದರ ಕ್ಯಾಮೆರಾ ಆಪ್ ಪ್ರತಿಯೊಂದು ಐಕಾನ್ ನಂತರ ಸಾಕಾಗುವಷ್ಟು ಸ್ಪೈಸ್ ಹೊಂದಿದ್ದು ಇದರ ಎಲ್ಲ ಮೂಡ್ಗಳು ಸರಳ ಮತ್ತು ಸುಲಭವಾಗಿ ಬಳಸಬಹುದು.

ಈಗ ಇವುಗಳ ಒಟ್ಟು ಮೊತ್ತದ ರಿಸಲ್ಟ್ ನೋಡಬೇಕಾದರೆ  Xiaomi Redmi Note 5 Pro  ನಲ್ಲಿ ಸೆರೆಯಿಡಿದಿರುವ ಫೋಟೋಗಳು Asus Zenfone Max Pro M1 ಹೋಲಿಸಿದರೆ ನಿಜಕ್ಕೂ ಅದ್ಭುತವಾಗಿವೆ. ಇದರಲ್ಲಿನ ವೈಬ್ರೇನ್ಸ್ ಮತ್ತು ಓವರ್ ಆಲ್ ಇಮೇಜ್ ಕ್ವಾಲಿಟಿ ಮತ್ತು ಇದರಲ್ಲಿನ ಬೋಕೆ ಇಮೇಜಸ್ Max Pro M1 ಹೋಲಿಸಿದರೆ Note 5 Pro ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸುತ್ತದೆ.        

Asus Zenfone Max Pro M1 ನಲ್ಲಿ ತೆಗೆದ ಬೋಕೆ ಇಮೇಜ್ ಸ್ವಲ್ಪ ಆರ್ಟಿಫೀಷಿಯಲ್ ಲುಕ್ ನೀಡುತ್ತದೆ. ಇವೇರಡರಲ್ಲಿ ತೆಗೆದ ಡೇಟೈಮ್ ಶಾಟ್ಗಳಿಯಲ್ಲಿಯು ಸಹ Note 5 Pro ಹೆಚ್ಚು ಡೈನಾಮಿಕ್ ಕಾಂಟ್ರಾಸ್ಟ್ ನೀಡುತ್ತದೆ. ಅದೇ Max Pro M1 ಹೇಳಬೇಕಾದ್ರೆ ಇದರಲ್ಲಿ ತೆಗೆದ ಫೋಟೋಗಳು ಅಷ್ಟು ಆಕರ್ಷಿತವಾಗಿಲ್ಲ ಅಲ್ಲದೆ ಡೈನಾಮಿಕ್ ರೇಜ್ ಸಹ ಅಷ್ಟಾಗಿ ಕವರ್ ಮಾಡೋಲ್ಲ.

ಈಗ ಇಂಡೋರ್ ಬಗ್ಗೆ ಮಾತನಾಡಬೇಕಾದ್ರೆ ಇಲ್ಲಿಯೂ ಸಹ Max Pro M1 ಯು Note 5 Pro ಮುಂದೆ ಹೋಗಲು ದಾರಿ ಮಾಡಿಕೊಡುತ್ತದೆ. ಈ Max Pro M1 ಬೆಳಕಿನ ಮೂಲದಿಂದ ಕಳಪೆ ಇಮೇಜ್ ಪ್ರಜ್ವಲಿಸುವಿಕೆಯನ್ನು ಪಡೆಯುವಿರಿ ಆದರೆ ನಿಕಟವಾದ ಶಾಟ್ಗಳು ತೀಕ್ಷ್ಣತೆ ಹೊಂದಿರುವುದಿಲ್ಲ. ಮತ್ತು ಈ ಫೋಟೋಗಳಲ್ಲಿನ ವೈಟ್ ಬ್ಯಾಲೆನ್ಸ್ Note 5 Pro ಹೆಚ್ಚು ಗಣನೀಯವಾಗಿದೆ.

ಈಗ ನಾವು ಇವುಗಳ ಫ್ರಂಟ್ ಕ್ಯಾಮೆರಾದ ಬಗ್ಗೆ ಹೇಳಬೇಕಾದ್ರೆ Note 5 Pro ಅದ್ದೂರಿಯಾಗಿದೆ. Note 5 Pro ನ 20MP ಕ್ಯಾಮೆರದಿಂದ ಗ್ರೂಪ್ ಬೋಕೆ ಇಮೇಜ್ಗಳನ್ನು ಪಡೆಯಬವುದು. ಆದ್ರೆ ಇದು Max Pro M1 ರಲ್ಲಿ ಲಭ್ಯವಿಲ್ಲ. Xiaomi ತನ್ನ ಸಾಫ್ಟ್ವೇರ್ ಬಳಸಿಕೊಂಡು ತನ್ನ ಬೋಕೆ ಪ್ರೋಟ್ರೆಟ್ ಮೂಡನ್ನು ನೀಡುತ್ತದೆ. ಇದರಿಂದ ಸೆಲ್ಫಿಗಳು ಬ್ಲರ್ ಆಗದೆ ಬೆಸ್ಟ್ ಸೆಲ್ಫಿ ನೀಡುತ್ತದೆ. 

ಈಗ ಲೊ ಲೈಟ್ ಬಗ್ಗೆ ಮಾತನಾಡಬೇಕಾದ್ರೆ ಎರಡು ಸರಸರಿಯಾಗಿದೆ. ಆದರೂ Note 5 Pro ಕೊಂಚ ಮುಂದೆಯಿದೆ. ಅಂದ್ರೆ ಈ ಲೊ ಲೈಟಲ್ಲು ಸಹ Note 5 Pro ನಿಮಗೆ ಅತ್ಯುತ್ತಮವಾದ ಕ್ವೀರಿಟಿ ನೀಡುತ್ತದೆ.

 

ಇಮೇಜ್ ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo