ಭಾರತದಲ್ಲಿ Xiaomi Redmi 6 ಎರಡನೇಯ ಸೇಲ್ ಇಂದು ಮಧ್ಯಾಹ್ನ 12:00 ಕ್ಕೆ ಇದರ ಆಫರ್ ಡಿಸ್ಕೌಂಟ್ಗಳ ಬಗ್ಗೆ ಇಲ್ಲಿಂದ ತಿಳಿಯಿರಿ.

Updated on 17-Sep-2018
HIGHLIGHTS

ಈ ಫೋನ್ ಡ್ಯುಯಲ್ ರೇರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ 4G ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ

 

ಭಾರತದಲ್ಲಿ Xiaomi ಕಂಪನಿಯು ಈ ತಿಂಗಳಲ್ಲಿ ರೆಡ್ಮಿ ಸರಣಿಯೊಂದಿಗೆ ಮೂರು ಹೊಸ ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ Redmi 6, Redmi 6A ಮತ್ತು Redmi 6 Pro ಸ್ಮಾರ್ಟ್ಫೋನ್ಗಳು. ಇವು ಕಳೆದ ವಾರ ಫ್ಲ್ಯಾಶ್ ಸೇಲಲ್ಲಿ ಮೊದಲ ಬಾರಿಗೆ ಈ ಚೀನೀ ಕಂಪನಿಯು Redmi 6 ಸ್ಮಾರ್ಟ್ಫೋನನ್ನು ನೀಡಿತ್ತು. ಇಂದು ಸೋಮವಾರ Redmi 6 ಸ್ಮಾರ್ಟ್ಫೋನಿನ ಎರಡನೇ ಸೆಲ್ ನಡೆಯಲಿದೆ. ಇದು ಫ್ಲಿಪ್ಕಾರ್ಟ್ ಮತ್ತು mi.com ಗಳಲ್ಲಿ ಈ ಸ್ಮಾರ್ಟ್ಫೋನ್ ಲಭ್ಯವಿರುತ್ತದೆ. Xiaomi ಯ ಈ ಫೋನ್ ಡ್ಯುಯಲ್ ರೇರ್ ಕ್ಯಾಮೆರಾ, ಫಿಂಗರ್ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ 4G ಸಿಮ್ ಕಾರ್ಡ್ ಸ್ಲಾಟ್ನಂತಹ ಅನೇಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಈ ಹೊಸ ಫೋನ್ 3GB RAM ಮತ್ತು 32GB ಯ ಇಂಟರ್ನಲ್ ಸ್ಟೋರೇಜ್ ರೂಪಾಂತರ ಸದ್ಯಕ್ಕೆ ಮಾರಾಟವಾಗಲಿದೆ. ಈ ರೂಪಾಂತರ ಫೋನಿನ ಬೆಲೆ ಕೇವಲ 7,999 ರೂಗಳಾಗಿದ್ದು ನೀವು ಈ ಫೋನನ ಬೇರೆ ರೂಪಾಂತರವಾದ 64GB ಯ ಇಂಟರ್ನಲ್ ಸ್ಟೋರೇಜ್ ಖರೀದಿಸಲು ಬಯಸಿದರೆ ಅದು ನಿಮಗೆ 9,499 ರೂಗಳಾಗುತ್ತದೆ. ಇಂದು ಫ್ಲಿಪ್ಕಾರ್ಟ್ನಿಂದ Redmi 6 ಖರೀದಿಯು ನೋ ಕಾಸ್ಟ್ ಇಎಂಐ (ಬಜಾಜ್ ಫಿನ್ಸೆರ್ ಕಾರ್ಡ್ನಲ್ಲಿ) ನಲ್ಲಿ ಲಭ್ಯವಿದೆ. ಇದಲ್ಲದೆ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ನಿಂದ 5% ಹೆಚ್ಚುವರಿ ರಿಯಾಯಿತಿ ಲಭ್ಯವಿರುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :