ಇದೀಗ ಶೀಘ್ರವೇ PayTm ತರಲಿದೆ WhatsAap ನಂತ ಮೆಸೇಜಿಂಗ್ ಅಪ್ಲಿಕೇಶನ್ ಮೂಡಲಿದೆ ಇನ್ನು ಕುತೂಹಲವನ್ನು ಕೆರಳಿಸಿದೆ.
ಈಗ ಭಾರತದಲ್ಲಿ ಮುಂಚೂಣಿಯಲ್ಲಿರುವ 'ಡಿಜಿಟಲ್ ಪೇಮೆಂಟ್' ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆಯನ್ನು ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಬ್ರೇಕ್ ಹಾಕಲು ಸಿದ್ಧತೆಯನ್ನು ನಡೆಸಿದೆ. ಅಲ್ಲದೆ ಇದು ಸಾಫ್ಟ್ ಬ್ಯಾಂಕ್ ಹಾಗೂ ಆಲೀಬಾಬಗಳಂತಹ ಸಂಸ್ಥೆಗಳು ಈಗಾಗಲೇ ನಡೆಸುತ್ತಿರುವ Paytm ಮೆಸೇಜಿಂಗ್ ಆಪ್ ಪರಿಚಯಿಸುವ ಮೂಲಕ ಭಾರತದ ಜನತೆಯನ್ನು ಆಕರ್ಷಿಸಲು ಸಿದ್ಧತೆ ನಡೆಸಿದ್ದು ತಿಂಗಳಾಂತ್ಯಕ್ಕೆ ಹೊಸ ಮೆಸೇಜಿಂಗ್ ಅಪ್ಲಿಕೇಶನನ್ನು ಬಿಡುಗಡೆ ಮಾಡಲಿದೆ.
ಈಗಾಗಲೇ ಭಾರತದಲ್ಲಿ Paytm 225 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ನಿಮಗೆ ಈಗಾಗಲೇ ತಿಳಿದಿರುವಂತೆ ಈ ವರ್ಷದ ಪ್ರಾರಂಭದಲ್ಲಿಯೇ Hike ಮೆಸೇಜಿಂಗ್ ಆಪ್ ಡಿಜಿಟಲ್ ಪಾವತಿ ಸೇವೆಗಳನ್ನು ಒದಗಿಸುವ ಅಪ್ಲಿಕೇಶನನ್ನು ಬಿಡುಗಡೆ ಮಾಡಿತ್ತು. ಹಾಗಾಗಿ ಈಗ ಇದೇ ರೀತಿಯಲ್ಲಿ Paytm ಸಹ ಮೆಸೇಜಿಂಗ್ ಆಪ್ ಹೊರ ತರಲು ಮುಂದಾಗುತ್ತಿದೆ. ಕೆಲ ವರದಿಗಳ ಪ್ರಕಾರ WhatsAap ಅಪ್ಲಿಕೇಶನ್ ಸಹ ಇದೇ ರೀತಿಯ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಚಿಂತನೆ ನಡೆಸುತ್ತಿದೆ.