ಒಪ್ಪೋ ತನ್ನ RealMe 1 ಎಂಬ ಸ್ಮಾರ್ಟ್ಫೋನನ್ನು ಮೀಡಿಯಾಟೆಕ್ ಹೆಲಿಯೋ P60 ಜೋತೆ ಬಿಡುಗಡೆ ಮಾಡಲಿದೆ.

ಒಪ್ಪೋ ತನ್ನ RealMe 1 ಎಂಬ ಸ್ಮಾರ್ಟ್ಫೋನನ್ನು ಮೀಡಿಯಾಟೆಕ್ ಹೆಲಿಯೋ P60 ಜೋತೆ ಬಿಡುಗಡೆ ಮಾಡಲಿದೆ.

ಒಪ್ಪೋ ಕಂಪನಿಯ ಬ್ರಾಂಡಾದ RealMe 1 ಇದರ ಸಂಪೂರ್ಣವಾದ ವಿಮರ್ಶೆ ನೋಡೋಣ. ಇದರ Unboxing ವೀಡಿಯೋ ಈಗಾಗಲೇ ಡಿಜಿಟ್ ಕನ್ನಡ ಯೌಟ್ಯೂಬ್ ಚಾನಲ್ ಮತ್ತು ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಲಭ್ಯವಿದೆ ನೀವು ನೋಡಬುವುದು. ಈಗ ಯಾವುದೇ ಟೈಮ್ ವೇಸ್ಟ್ ಮಾಡ್ದೆ ಇದರ ರಿವ್ಯೂ ನೋಡೋಣ.

ಮೊದಲಿಗೆ ಇದರ ಡಿಸೈನ್ ಬಗ್ಗೆ ಮಾತನಾಡಬೇಕಾದ್ರೆ ಇದರ ಡಿಸೈನ್ ನಿಜಕ್ಕೂ ಈ ಪ್ರೈಸ್ ರೆಂಜಲ್ಲಿ ಲಭ್ಯವಿರುವ ಫೋನ್ಗಳಿಗಿಂತ ಡಿಫ್ಫ್ರೆಂಟಾಗಿದೆ. ಇದರ ಡೈಮೊಂಡ್ ಪ್ರತಿಬಿಂಬಿಸುವಿಕೆಯ ಬಾಡಿ ನಿಜಕ್ಕೂ ಆಕರ್ಷಣೀಯವಾಗಿದೆ. ಇದರ ಹಿಂಭಾಗ fibre ಗ್ಲಾಸ್ಗಳಿಂದ ತಯಾರಿಸಲ್ಪಟ್ಟಿದ್ದು ಡಿಫ್ಫ್ರೆಂಟ್ ಹ್ಯಾಂಗಲ್ಗಳಿಂದ ರಚಿತವಾಗಿದೆ. ಇದರ ಮೇಲೆ ಯಾವುದೇ ಬೆಳಕು ಬಿದ್ದರೆ ವಜ್ರದಂತೆ ಪ್ರಜ್ವಲಿಸುತ್ತದೆ.

realme 1 pre-launch

ಇದರ ಮುಂಭಾಗದಲ್ಲಿ ದೊಡ್ಡದಾದ ಡಿಸ್ಪ್ಲೇ ನೀಡಲಾಗಿದೆ. ಇದರಲ್ಲಿ ಯಾವುದೇ ನ್ಯಾವಿಗೇಷನ್ ಬಟನ್ಗಳನ್ನು ನೀಡಿಲ್ಲ. ಅಲ್ಲದೆ ಇದರಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಸಹ ನೀಡಿಲ್ಲ. ಇದನ್ನು ಹೆಚ್ಚಾಗಿ Facial Recognition ಗಾಗಿ ಮಾಡಿದೆ. ಫೇಸ್ ಅನ್ಲಾಕ್ ನಿಜಕ್ಕೂ ವೇಗವಾಗಿ ಕೆಲಸ ಮಾಡುತ್ತದೆಯಾದರೂ ಇದು ಒಂದು ರೀತಿಯ ಅಪಾಯಕಾರಿ ಅನ್ಬವುದು. ಏಕೆಂದರೆ ಯಾರು ಬೇಕಾದರೂ ಫೋನನ್ನು ನನ್ನ ಮುಖದತ್ತ ತಂದು ಅನ್ಲಾಕ್ ಮಾಡ್ಬಾವುದು ಇದರಿಂದ ನಿಮ್ಮ ಸೆಕ್ಯೂರಿಟಿ MisUse ಆಗಬಹುದು.

ಇದರ ಬ್ಯಾಕ್ ಡಿಸೈನ್ ಜೋತೆಯಲ್ಲಿ ಇದರ ಡಿಸ್ಪ್ಲೇ ಸುಮಾರು Screen to body ರೇಷು 84% ಹೊಂದಿದೆ. ಇದು ಅದರ 6.14 ಇಂಚಿನ ಫ್ರೇಮಲ್ಲಿ ಫಿಟ್ ಮಾಡುತ್ತದೆ. ಇದರ 6 ಇಂಚಿನ FHD+ ಡಿಸ್ಪ್ಲೇ 18:9 aspect ರೇಷುವಿನೋದಿಗೆ ಅವರೇಜ್ ಲುಕ್ಸ್ ಬಣ್ಣಗಳನ್ನು ತೋಲುತ್ತದೆ.ಇದರಲ್ಲಿ ನಿಮಗೆ ಬ್ಲೂ ಲೈಟ್ ಫಿಲ್ಟರ್ಗಳು ಮತ್ತು ಕಲರ್ ಟೆಂಪರೇಚರ್ ಬದಲಾವಣೆಗೆ ಸಹ ಹಲವಾರು ಫೀಚರ್ಗಳನ್ನು ನೀಡಿದೆ.

ಇದರ ಪರ್ಫಾರ್ಮೆನ್ಸ್ ಬಗ್ಗೆ ಹೇಳಬೇಕೆಂದರೆ ಇದು MediaTek Helio P60 ಪ್ರೊಸೆಸರಿಂದ ನಡೆಯುತ್ತದೆ. ಮತ್ತು ಇದು ನಿಮಗೆ ಮೂರು ವೇರಿಯೆಂಟಲ್ಲಿ ಲಭ್ಯವಿದೆ. 3GB/32GB, 4GB/64GB ಮತ್ತು 6GB/128GB ಅಲ್ಲದೆ ಇದರ 3GB/32GB ಮುಂದಿನ ವಾರದಲ್ಲಿ ಲಭ್ಯವಾಗಲಿದೆ.  4GB/64GB ನಿಮಗೆ ಜೂನ್ ತಿಂಗಳಲ್ಲಿ ಲಭಿಸಲಿದೆ.

ಇದರಲ್ಲಿನ ಚಿಪ್ಸೆಟ್ನ ಕಾರ್ಯಕ್ಷಮತೆಯನ್ನು ನಾವು ಪರೀಕ್ಷಿಸಿದಾಗ ಕೆಲವು ಅಸಂಗತತೆಗಳನ್ನು ಗಮನಿಸಿದ್ದೇವೆ. ಇದರ CPU ವಿನ ಕಾರ್ಯಕ್ಷಮತೆಯನ್ನು ಅಳೆಯಲು ಒತ್ತಡವನ್ನುಂಟು ಮಾಡುವ ಅನೇಕ ಸಣ್ಣ ಕಾರ್ಯಗಳನ್ನು ಒಳಗೊಂಡಿರುತ್ತದೆ. ಇದರ CPU ನಲ್ಲಿ ಲೋಡ್ ಕನಿಷ್ಠ 2.0GHz ನಲ್ಲಿ ಚಾಲನೆ ಮಾಡುತ್ತದೆ. ಇದರ ಸಿಂಥೆಟಿಕ್ ಬೆಂಚ್ಮಾರ್ಕ್ ಪರೀಕ್ಷೆಗಳು ಮತ್ತು ನೈಜ ಪ್ರಪಂಚದ ಸನ್ನಿವೇಶಗಳಲ್ಲಿ CPU ಲೋಡ್ಗೆ ಪ್ರತಿಕ್ರಿಯೆ ನೀಡುವಲ್ಲಿ ಹೆಚ್ಚು ಸ್ಥಿರವಾದ ರೆಡ್ಮಿ ನೋಟ್ 5 ಪ್ರೊ ಕುರಿತು ನಾವು ಇದೇ ರೀತಿಯ ವಿಶ್ಲೇಷಣೆ ಮಾಡಿದ್ದೇವೆ.

ಇದು ಒಪ್ಪೋವಿನ ಕಲರ್ OS5 ಬಣ್ಣದ ಆಂಡ್ರಾಯ್ಡ್ ಓರಿಯೊ 8.1 ಲೇಯರನ್ನು ಅವಲಂಬಿಸಿದೆ. ಆದರೆ ಇದರಲ್ಲಿನ MIUI ನಿರ್ದಿಷ್ಟವಾಗಿ ಆಕರ್ಷಿಸುವುದಿಲ್ಲ ಮತ್ತು ಸ್ಟಾಕ್ ಆಂಡ್ರಾಯ್ಡ್ ಇಲ್ಲದಿರುವುದು ಕೊರತೆ ಎನ್ನಬವುದು. ಇದರ ಐಕಾನ್ ಬಳಕೆಯು ಸಹ ಅಷ್ಟಾಗೇನು ಸಂತೋಷಪಡಿಸಿಲ್ಲ. ಇದು ನಿಮಗೆ ಗೇಮ್ ಮೂಡಿನೊಂದಿಗೆ ಪ್ರೈವೇಟ್ ಸ್ಪೇಸ್ ಒಳಗೊಂಡು ಹಲವಾರು ಸಾಮಾನ್ಯವಾದ ಬೆಲ್ಗಳೊಂದಿಗೆ ಬರುತ್ತದೆ.

ಇದರ ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡಬೇಕಾದ್ರೆ ಇದರಲ್ಲಿದೆ 13MP ಪ್ರೈಮರಿ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮರಾ ಹೊಂದಿದೆ.  ಇದರಲ್ಲಿ ಒಪ್ಪೋವಿನ AI ಅಲ್ಗಾರಿದಮ್ ಚಿತ್ರಗಳನ್ನು ಉತ್ತಮವಾಗಿ ಪಡೆಯಲು ಸಹಾಯ ಮಾಡುತ್ತದೆ. ಆದರೆ ಅಂತಿಮ ಫಲಿತಾಂಶ ಮೃದುಗೊಳಿಸುವಿಕೆಯ ಫೋಟೋವಾಗಿದ್ದು ಎಲ್ಲಾ ಸ್ಥಳಗಳು ಮತ್ತು ಕಲೆಗಳನ್ನು ಮರೆಮಾಡುತ್ತದೆ. ಹಗಲು ಹೊತ್ತಿನ ಫೋಟೋಗಳಿಗೆ ಸಾಕಷ್ಟು ಕ್ಲಿಪ್ಪಿಂಗ್ ಇದೆ. ಬೆಳಕಿನ ಫೋಟೋದಲ್ಲಿ ಅಷ್ಟಾಗಿ ಯಾವುದೇ ವಿವರಗಳಿಲ್ಲ. ಇದಲ್ಲದೆ ಕ್ಯಾಮೆರಾವು ವಾಸ್ತವದಲ್ಲಿರುವುದಕ್ಕಿಂತ ಹೆಚ್ಚಿನ ಬಣ್ಣಗಳನ್ನು ಸ್ಯಾಚುರೇಟ್ ಮಾಡಿ ತೋರುತ್ತದೆ.

ಇದರಲ್ಲಿ ಒಳಗೆ ತೆಗೆದ ಶಾಟ್ಗಳು ಸ್ವಲ್ಪ ಹೆಚ್ಚು ಪಾಲಿಶ್ ಆಗಿದ್ದು ನಿಯಂತ್ರಿತ ಬೆಳಕು ಕ್ಯಾಮೆರಾದ ಉತ್ತಮ ಭಾಗವನ್ನು ತೆರೆದುಕೊಳ್ಳುತ್ತದೆ. ಇದರಲ್ಲಿ ವಸ್ತುಗಳು ನೈಜವಾಗಿರುವುದಕ್ಕಿಂತ ಹೆಚ್ಚು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಸ್ವಲ್ಪ warmer white balance ಉತ್ತಮ ಶಾರ್ಪ್ ಚಿತ್ರಗಳನ್ನು ನೀಡುತ್ತದೆ. ಇದರ ಬೆಳಕಿನ ಮೂಲದಿಂದ ಸ್ವಲ್ಪ ಗ್ಲೇರ್ ಆಗುತ್ತದೆ.

ಇದರಲ್ಲಿನ ಪ್ರೋಟ್ರೇಟ್ ಫ್ರಂಟ್ ಮತ್ತು ಬ್ಯಾಕ್ ಎರಡರಲ್ಲು ನೀಡಲಾಗಿದ್ದು ಉತ್ತಮವಾದ ಪ್ರೋಟ್ರೇಟ್ ಎಫೆಕ್ಟ್ ನೀಡುತ್ತದೆ. ಆದರೆ ಇದಕ್ಕೆ ಸರಿಸಮನಾದ Xiaomi Redmi Note 5 Pro ಸೈಡ್ ಹೊಡೆಯಲು ಸಾಧ್ಯವಿಲ್ಲ ಆದರೂ ಇದು ಒಂದು ಉತ್ತಮವಾದ ಇಮೇಜ್ ನೀಡುತ್ತದೆ.

ಕೊನೆಯದಾಗಿ ಇದರ ಬ್ಯಾಟರಿ ಬಗ್ಗೆ ಮಾತನಾಡಬೇಕಾದ್ರೆ ಇದರಲ್ಲಿದೆ 3410mAh ಬ್ಯಾಟರಿ ಮತ್ತು PCMark Battery 2.0 ಟೆಸ್ಟ್ ಪ್ರಕಾರ ಇದು 6 ಘಂಟೆಗಳ ಕಾಲ ಮ್ಯಾನೇಜ್ ಆಗುತ್ತದೆ. ಇದು ದಿನದ ಸಮಯವನ್ನು ಆರಾಮಾಗಿ ಕಳೆಯುತ್ತದೆ. ಇದರ ರಿವ್ಯೂಗಾಗಿ ಇಂಟರ್ನೆಟನ್ನು ಬ್ರೌಸಿಂಗ್ ಮಾಡಿ, ಹಲವಾರು ಗೇಮ್ ಆಡಿ ಮತ್ತು ಹಲವಾರು ಫೋಟೋಗಳನ್ನು ಸಹ ತೆಗೆದರು ಪೂರ್ತಿ ದಿನ ಕಳೆಯಬವುದು. ಇದರ ಕೆಲ ಫೀಚರ್ಗಳನ್ನು ಬಳಸಿ ಯಾವ ಆಪ್ಗಳು ಎಷ್ಟು ಸ್ಪೆಸ್ ಪಡೆದಿದೆ ಎಂದು ನೋಡಬವುದು.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram, ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo