ಈಗ ಚೀನೀ ಸ್ಮಾರ್ಟ್ಫೋನ್ ತಯಾರಕ Oppo ಚೀನಾದಲ್ಲಿ Oppo A83 ಅನ್ನು ಬಿಡುಗಡೆ ಮಾಡಿದೆ. ಇದು ಡಿಸೆಂಬರ್ 29 ರಿಂದ ಚೀನಾದಲ್ಲಿ ಲಭ್ಯವಿರುತ್ತದೆ. ಮತ್ತು ಇದರ ಬೆಲೆ CNY 1399 (ಸುಮಾರು ರೂ 13,500) ಆಗಿದೆ. ಈ ಸ್ಮಾರ್ಟ್ಫೋನ್ 5.7 ಇಂಚಿನ 18: 9 ಅನುಪಾತದ ಡಿಸ್ಪ್ಲೇಯೊಂದಿಗೆ HD + ರೆಸಲ್ಯೂಶನ್ 1440 x 720p ಬರುತ್ತದೆ. ಮತ್ತು ಇದು 13MP ಯಾ ಬ್ಯಾಕ್ ಕ್ಯಾಮರಾ ಮತ್ತು 8 MP ಯಾ ಫ್ರಂಟ್ ಕ್ಯಾಮೆರಾ ಹೊಂದಿದೆ.
Oppo ವೆಬ್ಸೈಟ್ನಲ್ಲಿನ ಉತ್ಪನ್ನಗಳ ಪಟ್ಟಿ ಪ್ರಕಾರ Oppo A83 ಸ್ಮಾರ್ಟ್ಫೋನ್ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸಣ್ಣ ಬೆಜಲ್ಗಳೊಂದಿಗೆ ಬರುತ್ತದೆ. ಇದು 150.5 × 73.1 × 7.7mm ಅಳತೆ ಹೊಂದಿರುವ ನಯಗೊಳಿಸಿದ ವಿನ್ಯಾಸವನ್ನು ಹೊಂದಿದೆ.
Oppo A83 ನಲ್ಲಿ 2.5 GHz ಆಕ್ಟಾ-ಕೋರ್ ಪ್ರೊಸೆಸರ್ SoC ಅನ್ನು ಹೊಂದಿದೆ. ಇದು 4GB ಯಾ RAM ಮತ್ತು 32GB ಯಾ ಇಂಟರ್ನಲ್ ಸ್ಟೋರೇಜನ್ನು ಹೊಂದಿದೆ. ಇದು ಆಂಡ್ರಾಯ್ಡ್ 7.1 ನೊಗಟ್ನಲ್ಲಿ ಕಾರ್ಯನಿರ್ವಹಿಸುತ್ತ 3090mAh ಬ್ಯಾಟರಿಯನ್ನು ಹೊಂದಿದೆ.
ಇದರ ಬಳಕೆದಾರರ ಮುಖವನ್ನು 0.18 ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡುವ ಮೂಲಕ ಸಾಧನವನ್ನು ತೆರೆಯುವ ಇತ್ತೀಚೆಗೆ ಪರಿಚಯಿಸಲಾದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನೂ ಇದು ಒಳಗೊಂಡಿದೆ. ಚಾಂಪ್ನೆ ಗೋಲ್ಡ್ ಮತ್ತು ಬ್ಲ್ಯಾಕ್ ಎರಡು ಬಣ್ಣದ ರೂಪಾಂತರಗಳಲ್ಲಿ ಓಪ್ಪ್ಸ್ A83 ಲಭ್ಯವಿರುತ್ತದೆ. ಸ್ಮಾರ್ಟ್ಫೋನ್ಗಾಗಿ ಮೀಸಲಾತಿ ವೆಬ್ಸೈಟ್ನಲ್ಲಿ ತೆರೆದಿರುತ್ತದೆ.