ನಿಮ್ಮ ಫೋನ್ ಕಳೆದುಹೋದರು ನಿಮ್ಮ ವಾಟ್ಸಪ್ಪ್ ಮೆಸೇಜ್, ಫೋಟೋ, ವೀಡಿಯೋ ಸೇಫ್.

ನಿಮ್ಮ ಫೋನ್ ಕಳೆದುಹೋದರು ನಿಮ್ಮ ವಾಟ್ಸಪ್ಪ್ ಮೆಸೇಜ್, ಫೋಟೋ, ವೀಡಿಯೋ ಸೇಫ್.
HIGHLIGHTS

ನಿಮ್ಮ ಫೋನ್ ಕಳೆದುಹೋದರೆ ನಿಮ್ಮ ವಾಟ್ಸಪ್ಪ್ ಡೇಟಾ ಸೇಫಾಗಿರುತ್ತಾ ಇಲ್ವಾ?

ಸ್ನೇಹಿತರೇ ಈ ದಿನಗಳಲ್ಲಿ ಫೋಟೋಗಳನ್ನು ಅಥವಾ ಡಾಕ್ಯುಮೆಂಟ್ಗಳನ್ನು ಕಳುಹಿಸಲು WhatsApp ಅನ್ನು ನೀವು ಬಳಸುವ ಅಪ್ಲಿಕೇಶನ್ ಆಗಿದೆ. ಆದರೆ ನಿಮ್ಮ ಮೊಬೈಲ್ ಕಳೆದು ಹೋದರೆ ಅಥವಾ ಎಲ್ಲೋ ಕಳೆದುಕೊಂಡರೆ ಊಹಿಸಿರಿ ಒಂದು ಕ್ಷಣಕ್ಕೆ ನಿಮಗೆಷ್ಟು ದುಃಖವಾಗುತ್ತದೆ. ನಿಮ್ಮ ಮೊಬೈಲ್ ಸಾಧನಗಳನ್ನು ಕಳೆದುಕೊಳ್ಳುವುದು ಕೇವಲ ಸಾಧನ ಮಾತ್ರವಲ್ಲ ಇದರೊಂದಿಗೆ ಅದರಲ್ಲಿರುವ ನಿಮ್ಮ ಪ್ರಮುಖ ಡೇಟಾವನ್ನು ಸಹ ಕಳೆದುಕೊಳ್ಳುವಿರಿ. ಮತ್ತಷ್ಟು ಸಂಪೂರ್ಣ ಮಾಹಿತಿಗಾಗಿ.

ಒಂದು ವೇಳೆ ನೀವು ನಿಮ್ಮ ಫೋನ್ ಎಲ್ಲೋ ಕಳೆದುಕೊಂಡರೆ ಅಥವಾ ಕಳ್ಳ ಕದೀಮರಿಂದ ನಿಮ್ಮ ಫೋನ್ ಕಳೆದುಹೋದರೆ ನಿಮ್ಮ ಡೇಟಾವನ್ನು ಸುರಕ್ಷಿತವಾಗಿರುವುದರಿಂದ ನೀವು ಬಹಳಷ್ಟು ವಿಷಯಗಳನ್ನು ಮಾಡಬೇಕಾಗಿದೆ. ಈ ವಿಷಯವನ್ನು ನಾನು ಗಮನದಲ್ಲಿಟ್ಟುಕೊಂಡು ಇದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೋಸ್ಕರ ನೀಡುತ್ತಿದ್ದೇನೆ

ಮೊದಲಿಗೆ ನೀವು ನಿಮ್ಮ WhatsApp ಖಾತೆಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಮೊದಲಿಗೆ ಅದು ಸಂವಹನ ಸಾಧನವಾಗಿ ಮಾರ್ಪಟ್ಟಿರುತ್ತದೆ. ಮತ್ತು ನೀವು ಇತರರನ್ನು WhatsApp ಬಳಸಿದ ನಂತರ ಫೋನ್ ಕಳೆದುಕೊಳ್ಳುವುದು ನಿಜವಾಗಿಯೂ ಅಪಾಯಕಾರಿಯಾದ ಸಂಗತಿಯಾಗಿದೆ. 

ಹಂತ 1: ಮೊದಲು ನಿಮ್ಮ Sim ಸರ್ವಿಸ್ ಪೂರೈಕೆದಾರ ಕಸ್ಟಮರ್ ಕೇರ್ಗೆ ಕರೆ ಮಾಡಿ ನಿಮ್ಮ Sim ಅನ್ನು ಡಿಆಕ್ಟಿವೇಟ್ ಮಾಡಿಸಿ. 

ಹಂತ 2: ಈಗ ನೀವು ಡುಪ್ಲಿಕೇಟ್  Sim ಪಡೆದು ನಿಮ್ಮ ಹಳೆಯ ಅಕೌಂಟನ್ನು ಡಿಆಕ್ಟಿವೇಟ್ ಮಾಡಿ (ಮತ್ತೊಂಮ್ಮೆ ಅದೇ ನಂಬರ್ ಯೂಸ್ ಮಾಡೋಕೆ).    

ಹಂತ 3: ಈಗ ನೀವು ವಾಟ್ಸಪ್ಪ್ ತಂಡಕ್ಕೆ ನೀವೊಂದು ಮೆಸೇಜ್ / ಇಮೇಲ್ ಮಾಡಬೇಕಾಗುತ್ತದೆ. 

ಹಂತ 4: ನಿಮ್ಮ ವಾಟ್ಸಪ್ಪ್ ನಿಂದ ದುರುಪಯೋಗಪಡಿಸಿಕೊಳ್ಳಬಾರದು ಎಂದು ನೀವು ಖಚಿತಪಡಿಸಿಕೊಳ್ಳಲು ಇದು ಅತಿ ಮುಖ್ಯ. 

ಹಂತ 5: ಇಮೇಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. To: support@whatsapp.com  Sub: Lost/Stolen: Please deactivate my account ASAP.

ಹಂತ 6: ವಾಟ್ಸಪ್ಪ್ ತಂಡದ E-mail ಮತ್ತು ಸಬ್ಜೆಕ್ಟ್ ನಿಮ್ಮ ವಾಟ್ಸಾಪ್ ನಂಬರ್ ಮತ್ತು ಕಾಂಟ್ರೀ ಕೋಡ್ ಮತ್ತು ಇಮೇಲ್ ನೀಡಬೇಕಗುತ್ತದೆ.   

ಹಂತ 7: ಇಮೇಲ್ ಪಡೆದ ವಾಟ್ಸಪ್ಪ್ ತಂಡ ಕೆಲವೇ ಘಂಟೆಗಳಲ್ಲಿ ನಿಮ್ಮ ಅಕೌಂಟನ್ನು ಡಿಆಕ್ಟಿವೇಟ್ ಮಾಡುತ್ತೆ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo