ಶೀಘ್ರದಲ್ಲೇ ವಾಟ್ಸಪ್ಪ್ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ‘ಡಬಲ್ ಸ್ಟಿಕ್ಕರ್’ ವೈಶಿಷ್ಟ್ಯವನ್ನು ನೀಡುವ ನೀರಿಕ್ಷೆಯಿದೆ

Updated on 23-Apr-2018
HIGHLIGHTS

ಈ ವರ್ಷ ವಾಟ್ಸಪ್ಪ್ನಲ್ಲಿ ಶೀಘ್ರವೇ ಮತ್ತೇ ಮೂರು ಹೊಸ ಫೀಚರ್ ಹೊರ ಬರುವ ನಿರೀಕ್ಷೆಯಿದೆ.

ಈಗ WhatsApp ಮುಂದಿನ ದಿನಗಳಲ್ಲಿ ಮೂರು ಹೊಸ ವೈಶಿಷ್ಟ್ಯಗಳನ್ನು ತನ್ನ ವೈಯಕ್ತಿಕ ಮೆಸೇಜ್ ಅಪ್ಲಿಕೇಶನ್ಗೆ ತರಲು ನಿರೀಕ್ಷಿಸಲಾಗಿದೆ. ಈ ಎರಡು ವೈಶಿಷ್ಟ್ಯಗಳೆಂದರೆ ಸ್ಟಿಕ್ಕರ್ಗಳಿಗೆ ಸಂಬಂಧಿಸಿವೆ. ಆದರೆ ಇದರ ಮೂರನೆಯ ಅಪ್ಡೇಟ್ ಗ್ರೂಪ್ ಚಾಟ್ ಫೀಚರವನ್ನು ಕೇಂದ್ರೀಕರಿಸುತ್ತದೆ. ಮತ್ತು ಇತ್ತೀಚೆಗೆ ಇದು ಆಂಡ್ರಾಯ್ಡ್ ಮತ್ತು iOS ಎರಡಕ್ಕೂ ಹೊರತರಲಿದೆ. ಈ ಮೂರು ಫೀಚರ್ಗಳು ಯಾವಾಗ ನಮ್ಮ ವಾಟ್ಸಾಪ್ಗೆ ಬರುತ್ತದೆಂದು ಕಾಯಬೇಕಿದೆ. 
1.Dismiss as Admin
2.Double Sticker
3.Location Sticker 

ಕೆಲ ಬ್ಲಾಗ್ಗಳ ಪ್ರಕಾರ ಈ ಡಬಲ್ ಸ್ಟಿಕ್ಕರ್ ವೈಶಿಷ್ಟ್ಯವು ಈಗಾಗಲೇ ಅಭಿವೃದ್ಧಿಯಲ್ಲಿದೆ ಮತ್ತು ಬಳಕೆದಾರರಿಗೆ ಶೀಘ್ರದಲ್ಲೇ ಲಭಿಸಲು  ಊಹಿಸಲಾಗಿದೆ. ಇದು ಇತ್ತೀಚಿನ ಬೀಟಾ ಅಪ್ಡೇಟ್ಗೆ ಸೇರಿಸಲ್ಪಟ್ಟಿದ್ದು ಈ ಮೂರು ವೈಶಿಷ್ಟ್ಯಗಳ ಬಗ್ಗೆ ನಿಮಗೆ ಸುಳಿವು ನೀಡಲು ಎಲ್ಲಾ ಮೂರು ನವೀಕರಣಗಳ ಸಂಕ್ಷಿಪ್ತ ವಿವರಣೆಯನ್ನು ನಾವು ವಿವರಿಸಿದ್ದೇವೆ. ಬಳಕೆದಾರರು ಎರಡು ಅಥವಾ ಹೆಚ್ಚು ಸ್ಟಿಕ್ಕರ್ಗಳನ್ನು ಒಂದೇ ಬಾರಿಗೆ ಚಾಟ್ನಲ್ಲಿ ಕಳುಹಿಸುವಾಗ ಡಬಲ್ ಸ್ಟಿಕ್ಕರ್ ವೈಶಿಷ್ಟ್ಯವು ಚಾಟ್ ಸ್ಕ್ರೀನಿನ ಮೇಲೆ ಜಾಗವನ್ನು ಉಳಿಸುತ್ತದೆ. 

ಎರಡನೆಯದಾಗಿ ಸ್ಥಳ ಸ್ಟಿಕ್ಕರ್ ವೈಶಿಷ್ಟ್ಯವು ಎರಡು ವಿಷಯಗಳಲ್ಲಿ ಸ್ಟಿಕರ್ ಪ್ಯಾಕ್ ಅಡಿಯಲ್ಲಿ ಬರುತ್ತದೆ. ಫೋಟೋಗಳು ಮತ್ತು GIF ಗಳು ಮುಂತಾದ ಮಾಧ್ಯಮಗಳಲ್ಲಿ ಸ್ಥಳದ ಟ್ಯಾಗನ್ನು ಹಾಕಲು ಇದನ್ನು ಬಳಸಬಹುದು. WhatsApp ನ ಗ್ರೂಪ್ ಚಾಟ್ಗಳಲ್ಲಿ ಖಾಸಗಿ ಪ್ರತ್ಯುತ್ತರದ ವೈಶಿಷ್ಟ್ಯದ ಬಗ್ಗೆ ಇನ್ನು ವದಂತಿಗಳು ನಡೆಯುತ್ತಿವೆ. ಈ ಗ್ರೂಪ್ ಚಾಟ್ನಲ್ಲಿ ಕಳುಹಿಸಿದಂತಹ ಮೆಸೇಜ್ಗೆ ಪ್ರೈವೆಟಾಗಿ ಪ್ರತ್ಯುತ್ತರಿಸಲು ಕಳುಹಿಸುವವರ ಹೆಸರನ್ನು ಗುರಿತ್ತಿಸುವ ಮತ್ತಷ್ಟು ಟ್ಯಾಪ್ಗಳನ್ನು ಮಾಡಲಿದೆ. ಆದರೂ ಸ್ನೇಹಿತರೇ ಈ ಹೊಸ ಅಪ್ಡೇಟ್ಗಳ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತವಾದ ವರದಿಗಳು ಬೆಳಕಿಗೆ ಬಂದಿಲ್ಲ.

ವಾಟ್ಸಪ್ಪ್ ಈ ಹೊಸ ಫೀಚರ್ಗಳ ಬಗ್ಗೆ ನೀವೇನಂತೀರಾ ಅದನ್ನು ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಕಾಮೆಂಟ್ ಮಾಡಿ ಮತ್ತು ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :