ಈಗ ಸ್ಯಾಮ್ಸಂಗ್ ಫೋನ್ಗಳು ನಿಮ್ಮದೆಯಾದ ಬಜೆಟಿನಲ್ಲಿ ದೊರೆಯುತ್ತಿದೆ.
ಈಗ ವೊಡಾಫೋನ್ ಗುರುವಾರ ಸ್ಯಾಮ್ಸಂಗ್ ಜೊತೆ ಪಾಲುದಾರಿಕೆಯನ್ನು ಘೋಷಿಸಿ ಸ್ಯಾಮ್ಸಂಗ್ನ ಸ್ಮಾರ್ಟ್ಫೋನ್ಗಳಲ್ಲಿ ವೊಡಾಫೋನ್ನಿಂದ ಆಕರ್ಷಕ ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ಪ್ರಾರಂಭಿಸಲಾಗಿದೆ. ಈ ಪ್ರಸ್ತಾಪದ ಅಡಿಯಲ್ಲಿ ವೊಡಾಫೋನ್ ಖರೀದಿಸುವ ಗ್ರಾಹಕರಿಗೆ 1500 ರೂಗಳ ಕ್ಯಾಶ್ಬ್ಯಾಕನ್ನು ನೀಡುತ್ತಿದೆ. ಯಾವ ಯಾವ ಫೋನ್ಗಳ ಮೇಲಿದೆ ಕ್ಯಾಶ್ ಬ್ಯಾಕ್ ಇಲ್ಲಿದೆ ಮಾಹಿತಿ.
ಮೊಬೈಲ್ ಕ್ಯಾಶ್ ಬ್ಯಾಕ್ ನಂತರದ ಬೆಲೆ
Samsung Galaxy J2 Pro 8490 ರೂ 6,990 ರೂಗಳು
Samsung Galaxy J7 NXT 10,490 ರೂ 8,990 ರೂಗಳು
Samsung Galaxy J7 MAX 16,900 ರೂ 15,400 ರೂಗಳು
ಈ ಯೋಜನೆಯನ್ನು ಲಾಭ ಪಡೆಯಲು ವೊಡಾಫೋನ್ ಪ್ರಿಪೇಡ್ ಗ್ರಾಹಕರಿಗೆ 24 ತಿಂಗಳಿಗೆ 182 ರೂವಿನ ಮರುಚಾರ್ಜ್ ಮಾಡಲು ಕಡ್ಡಾಯವಾಗಿದೆ. ಗ್ರಾಹಕರು ಈ ಪ್ಯಾಕ್ನಲ್ಲಿ ಪ್ರತಿದಿನ ಅನಿಯಮಿತ ಕರೆಗಳು ಮತ್ತು 1GB ಯಾ ಡೇಟಾವನ್ನು ಪಡೆಯುತ್ತಾರೆ. ಈ ಪ್ರಸ್ತಾಪಕ್ಕಾಗಿ ಪೋಸ್ಟ್ಪೇಡ್ ಗ್ರಾಹಕರು ಯಾವುದೇ ವೊಡಾಫೋನ್ ರೆಡ್ ಯೋಜನೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇದರಂತೆ ಮೊದಲ 12 ತಿಂಗಳುಗಳ ನಂತರ 600 ರೂಗಳ ನಗದನ್ನು ನೀಡಲಾಗುವುದು. ಮತ್ತು 24 ತಿಂಗಳ ನಂತರ ರೂ 900 ರ ಕ್ಯಾಶ್ಬ್ಯಾಕ್ ನೀಡಲಾಗುವುದು. ಈ ರೀತಿ ಗ್ರಾಹಕರು 1500 ರೂಪಾಯಿ ನಗದು ಹಣವನ್ನು ಪಡೆಯುತ್ತಾರೆ. ಈ ಕ್ಯಾಶ್ಬ್ಯಾಕ್ ಗ್ರಾಹಕರನ್ನು ವೊಡಾಫೋನ್ ಎಮ್ ಮನಿ ವಾಲೆಟ್ನಲ್ಲಿ ಕ್ರೆಡಿಟ್ ಮಾಡಲಾಗುವುದು ಎಂದು ವೊಡಾಫೋನ್ ಹೇಳಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile