ಕಂಪೆನಿಯು ತನ್ನ ಅಸ್ತಿತ್ವದಲ್ಲಿರುವ ಮತ್ತು ಹೊಸ ಬಳಕೆದಾರರಿಗೆ ಜಿಯೋ ಪ್ರೈಮ್ ಎಂದು ವಾರ್ಷಿಕ ಚಂದಾದಾರಿಕೆ ಸೇವೆಯನ್ನು ಪರಿಚಯಿಸಿತು. ಈ ಸೇವೆ ನೆನ್ನೆ ಅಂದ್ರೆ ಮಾರ್ಚ್ 31 ರಂದು ಮುಕ್ತಾಯಗೊಳ್ಳುತ್ತದೆ. ಇದ್ರ ಕೊನೆಯ ದಿನಾಂಕಕ್ಕೆ ಕೇವಲ ಒಂದು ದಿನ ಮುಂಚಿತವಾಗಿ ಜಿಯೋ ತನ್ನ ಅಸ್ತಿತ್ವದಲ್ಲಿ ಈಗಾಗಲೇ ಇರುವ ಜಿಯೋ ಪ್ರೈಮ್ ಬಳಕೆದಾರರು ಮತ್ತೊಂದು ವರ್ಷಕ್ಕೆ ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸದೆ ತಮ್ಮ ಸೇವೆಗಳನ್ನು ಮುಂದುವರಿಸಬಹುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಘೋಷಿಸಿದ್ದಾರೆ.
ಜಿಯೋ ಪ್ರೈಮ್ ಸದಸ್ಯತ್ವಕ್ಕಾಗಿ ಈಗಾಗಲೇ 99 ರೂ. ಪಾವತಿಸಿದ ಚಂದಾದಾರರು ಈ ವರ್ಷವೂ ಅದೇ ಪ್ರಯೋಜನವನ್ನು ಪಡೆಯಲು ಏನನ್ನೂ ಪಾವತಿಸಬೇಕಾಗಿಲ್ಲ. ಆದರೆ ಕಂಪೆನಿಯ ನೆಟ್ವರ್ಕ್ಗೆ ಸೇರ್ಪಡೆಗೊಳ್ಳುವವರು ಮತ್ತು 1ನೇ ಏಪ್ರಿಲ್ 2018 ರ ನಂತರ ಈ ಪ್ರೈಮ್ ಸದಸ್ಯತ್ವಕ್ಕಾಗಿ ಆಯ್ಕೆ ಮಾಡುವವರು ರೂ 99 ಅನ್ನು ಪಾವತಿಸಬೇಕಾಗುತ್ತದೆ. ಇದರಿಂದ ಮೊದಲಿನಂತೆಯೇ 12 ತಿಂಗಳುಗಳವರೆಗೆ ಅಂದರೆ ಬರುವ ಮಾರ್ಚ್ 2019 ವರೆಗೆ ಪ್ರೈಮ್ ಪ್ರಯೋಜನಗಳನ್ನು ಪಡೆಯಲಾಗುವುದು.
ಅಸ್ತಿತ್ವದಲ್ಲಿ ಈಗಾಗಲೇ ಇರುವ ಜಿಯೋ ಪ್ರೈಮ್ ಬಳಕೆದಾರರು ಒಂದು ವರ್ಷದವರೆಗೆ ಉಚಿತ ಸೇವೆಗಳನ್ನು ಪಡೆಯಲು ಇದನ್ನು ಆಯ್ಕೆ ಮಾಡುವ ಕಾರ್ಯವನ್ನು ಮಾಡಬೇಕಾಗುತ್ತದೆ. ನೀವು ಈಗಾಗಲೇ ಜಿಯೋ ಪ್ರೈಮ್ ಸದಸ್ಯರಾಗಿದ್ದರೆ ನಿಮ್ಮ ಫೋನಲ್ಲಿ ಹೊಸದಾಗಿ 'MyJio' ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ ತೆರೆದು ಮತ್ತು ಮುಂದಿನ 12 ತಿಂಗಳುಗಳಿಗೆ ಸದಸ್ಯತ್ವವನ್ನು ಪಡೆಯುವಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಬವುದು.
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.