ರಿಲಯನ್ಸ್ ಜಿಯೋ ತನ್ನ ನೆಟ್ವರ್ಕ್ನಲ್ಲಿ ಪೂರ್ತಿ ಪ್ರತಿ ಸೆಕೆಂಡಿಗೆ 21.9MB (mbps) ಸಾರ್ವಕಾಲಿಕ ಅಧಿಕ ಸರಾಸರಿ 4G ಡೌನ್ಲೋಡ್ ವೇಗವನ್ನು ದಾಖಲಿಸಿದೆ. ಇದರ ಪ್ರತಿಸ್ಪರ್ಧಿಯಾದ ವೊಡಾಫೋನ್ ಕಡಿಮೆ ವೇಗ ಹೊಂದಿದೆ. ಅಂದರೆ 2.5 ಪಟ್ಟು ವೇಗಕ್ಕಿಂತಲೂ ವೇಗವಾಗಿದೆ ಎಂದು TRAI ಮಾಹಿತಿಯ ನೀಡಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಯ ಮೈಸ್ಪೀಡ್ ಅಪ್ಲಿಕೇಶನ್ನಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವೊಡಾಫೋನಿನ 4G ನೆಟ್ವರ್ಕ್ ತಿಂಗಳಲ್ಲಿ ಸರಾಸರಿ 8.7mbps ಡೌನ್ಲೋಡಿಂಗ್ ವೇಗವನ್ನು ದಾಖಲಿಸಿದರೆ ರಿಲಯನ್ಸ್ ಜಿಯೋ ತನ್ನ 4G ಡೌನ್ಲೋಡ್ ವೇಗವು 19.3mbps ರಿಂದ 21.9mbps ವರೆಗೆ ಹೆಚ್ಚಿಸಿದೆ.
ಐಡಿಯಾ ಸೆಲ್ಯುಲರ್ ಮತ್ತು ಭಾರ್ತಿ ಏರ್ಟೆಲ್ನ 4G ನೆಟ್ವರ್ಕ್ಗಳು ಅನುಕ್ರಮವಾಗಿ 8.6mbps ಮತ್ತು 7.5mbps ಡೌನ್ಲೋಡ್ ವೇಗವನ್ನು ದಾಖಲಿಸಿದೆ. ನೈಜ ಸಮಯದ ಆಧಾರದ ಮೇಲೆ ಅದರ MySpeed ಅಪ್ಲಿಕೇಶನ್ನ ಸಹಾಯದಿಂದ ಈ ಎಲ್ಲಾ ಡೇಟಾ ಡೌನ್ಲೋಡ್ ವೇಗವನ್ನು TRAI ಸಂಗ್ರಹಿಸಿ ಲೆಕ್ಕಾಚಾರ ಹಾಕಿದೆ.
ಇವುಗಳ ಅಪ್ಲೋಡ್ ವೇಗದಲ್ಲಿ ಐಡಿಯಾ ಸೆಲ್ಯುಲಾರ್ 6.4mbps ವೇಗದೊಂದಿಗೆ ಚಾರ್ಟ್ ಮಾಡಿ ಅಗ್ರಸ್ಥಾನದಲ್ಲಿದೆ. ಸೊಷಿಯಲ್ ಮೀಡಿಯಾ ಅಥವಾ E-mail ಅಪ್ಡೇಟ್ ಮಾಡುವ ಮೂಲಕ ಯಾವುದೇ ವೀಡಿಯೊ ಅಥವಾ ಫೋಟೋವನ್ನು ಹಂಚಿಕೊಳ್ಳಲು ಬಯಸಿದಾಗ ಅಪ್ಲೋಡ್ ವೇಗವು ಪ್ರಮುಖ ಪಾತ್ರ ವಹಿಸುತ್ತದೆ.
ಭಾರತದಲ್ಲಿ ಈ 4 ಟೆಲಿಕಾಂ ಆಪರೇಟ್ಗಳ ಅಪ್ಲೋಡ್ ವೇಗದ ಬಗ್ಗೆ ನೀವು ತಿಳಿಯಲೇಬೇಕು.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..