ಭಾರತದಲ್ಲಿ ಫೇಸ್ಬುಕ್ ಹೊಸ ಬಳಕೆದಾರಿಗೆ ತಮ್ಮ ಅಕೌಂಟ್ ರಚಿಸಲು ಆಧಾರ್ ಕಾರ್ಡಿನಲ್ಲಿರುವ ಹೆಸರನ್ನು ನಮೂದಿಸಲು ಕೇಳುತ್ತಿದೆ.!

Updated on 28-Dec-2017

ಈಗ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು, ಅಥವಾ ಬೇರೆ ವಿಷಯಕ್ಕಾಗಿ ಆಧಾರನ್ನು ಭಾರತೀಯರ ಜೀವನದಲ್ಲಿ ಗೊಂದಲ ಮತ್ತು ಗದ್ದಲವನ್ನು ಉಂಟುಮಾಡುವುದಕ್ಕೆ ಸಾಕಾಗಲಿಲ್ಲ. ಈಗ ಫೇಸ್ಬುಕ್ ಆಧಾರ್ ದೃಢೀಕರಣವನ್ನು ಕೇಳುತ್ತಿದೆ ಎಂದು ತೋರುತ್ತಿದೆ?

ಆಧಾರ್ ಕಾರ್ಡ್ನಲ್ಲಿ ನಮೂದಿಸಿದಂತೆ ಫೇಸ್ಬುಕ್ನ ಪರಿಚಯಿಸಿದ ಇತ್ತೀಚಿನ ವೈಶಿಷ್ಟ್ಯವು ಭಾರತೀಯ ಬಳಕೆದಾರರನ್ನು ಅವರ ಹೆಸರನ್ನು ನಮೂದಿಸಲು ಕೇಳುತ್ತದೆ. ಫೇಸ್ಬುಕ್ನ ಹೊಸ ಪ್ರಾಂಪ್ಟ್ ಓದುತ್ತದೆ, "ನಿಮ್ಮ ನೈಜ ಹೆಸರುಗಳನ್ನು ಬಳಸಿಕೊಂಡು ಸ್ನೇಹಿತರು ನಿಮ್ಮನ್ನು ಗುರುತಿಸಲು ಸುಲಭವಾಗುತ್ತದೆ. ಟ್ವಿಟರ್ ಮತ್ತು ರೆಡ್ಡಿಟ್ ಬಳಕೆದಾರರು ಪ್ರಾಂಪ್ಟ್ನ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ.

ಒಂದು ಸಣ್ಣ ಪರೀಕ್ಷೆಯ ಭಾಗವಾಗಿ, ಕಂಪನಿಯು ತಮ್ಮ ಆಧಾರ್ ಹೆಸರಿನೊಂದಿಗೆ ಸೈನ್ ಅಪ್ ಮಾಡಲು ಬಳಕೆದಾರರನ್ನು ಪ್ರೇರೇಪಿಸುತ್ತಿದೆ ಎಂದು ಫೇಸ್ಬುಕ್ ವಕ್ತಾರರು ದೃಢಪಡಿಸಿದ್ದಾರೆ. ಅವರು ಕಡ್ಡಾಯವಾಗಿಲ್ಲ ಮತ್ತು ಬಳಕೆದಾರರು ಕೂಡ ಪ್ರಾಂಪ್ಟನ್ನು ಬಿಟ್ಟುಬಿಡಲು ಆಯ್ಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಒಂದು ಸಣ್ಣ ಪರೀಕ್ಷೆ ಎಂದು ಫೇಸ್ಬುಕ್ ದೃಢಪಡಿಸಿದೆಯಾದರೂ ಈ ಕ್ರಮವು ಸಂಪೂರ್ಣ ಗೊಂದಲದಲ್ಲಿ ಬಳಕೆದಾರರನ್ನು ಬಿಟ್ಟಿದೆ. ಈಗ ಎಲ್ಲರಿಗೂ ಈ ರೀತಿಯ ಕೆಲ ಪ್ರಶ್ನೆಗಳು ಬರುತ್ತಿರಬವುದು. 

ನನ್ನ ಆಧಾರನ್ನು ಫೇಸ್ಬುಕ್ಗೆ ಲಿಂಕ್ ಮಾಡಲೇಬೇಕೇ?

ನನ್ನ ಎಲ್ಲ ವೈಯಕ್ತಿಕ ಮಾಹಿತಿಗೆ ಫೇಸ್ಬುಕ್ಗೆ ಪ್ರವೇಶಿಸುತ್ತದೆಯೇ?

ನನ್ನ ಪ್ರೊಫೈಲಿನಲ್ಲಿ ಪ್ರೀತಿಯ ಹೆಸರಾದ ಏಂಜಲ್, ಪ್ರಿನ್ಸೆಸ್, ರಾಣಿ, ಮುಂತಾದ ಹೆಸರು ಇಡಬವುದೇ?   

ಭಾರತದ ಸುಮಾರು 200 ದಶಲಕ್ಷ ಫೇಸ್ಬುಕ್ ಬಳಕೆದಾರರೊಂದಿಗೆ ಈ ಕ್ರಮವು ತಮ್ಮ ಗೌಪ್ಯತೆಯನ್ನು ಆಕ್ರಮಣ ಮಾಡಿದರೆ ಜನರು ಚಿಂತಿತರಾಗಿದ್ದಾರೆ. ಆದರೂ ನಿಮ್ಮ ಆಧಾರ್ ಕಾರ್ಡ್ನಲ್ಲಿ ಪ್ರಸ್ತಾಪಿಸಿದಂತೆ ನಿಮ್ಮ ಹೆಸರನ್ನು ಪ್ರವೇಶಿಸಲು ಫೇಸ್ಬುಕ್ ನಿಮ್ಮನ್ನು ಕೇಳುತ್ತಿದೆ ಎಂದು ಗಮನಿಸುವುದು ಬಹಳ ಮುಖ್ಯ ವಿಷಯವಾಗಿದೆ. ನಿಮ್ಮ ಆಧಾರ್ ಸಂಖ್ಯೆ ಅಥವಾ ಯಾವುದೇ ವೈಯಕ್ತಿಕ ವಿವರಗಳನ್ನು ಇದು ಕೇಳುತ್ತಿಲ್ಲವಾದರು ಇದು ಕೊಂಚ ಕಿರಿಕಿರಿಯಾಗುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :