ಭಾರತದಲ್ಲಿನ ಅತಿದೊಡ್ಡ ಮೊಬೈಲ್ ಬ್ರಾಡ್ಬ್ಯಾಂಡ್ ಸೇವೆ ಒದಗಿಸುವ ರಿಲಯನ್ಸ್ ಜಿಯೋಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನಡೆಸಿದ 4G ಮೊಬೈಲ್ ಡೇಟಾ ಪರೀಕ್ಷೆಯ ಮೊದಲ ತ್ರೈಮಾಸಿಕದಲ್ಲಿದೆ. ಇದು ಕಳೆದ 11 ತಿಂಗಳ ಉದ್ದಕ್ಕೂ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡು ಬಂದಿದೆ.
ಕಳೆದ ನವೆಂಬರ್ 2017 ರಲ್ಲಿ ಜಿಯೋವಿನ ಮೊಬೈಲ್ ಡೇಟಾ ವೇಗ 25.6mbps ದಾಖಲಾಗಿತ್ತು. 2017 ಕ್ಯಾಲೆಂಡರ್ ವರ್ಷದಲ್ಲಿ ಇದು ಅತಿವೇಗವಾಗಿದೆ ಎಂದು ಟ್ರಾಯ್ ಸೂಚಿಸಿತ್ತು. ಅಂದರೆ ಜಿಯೊ ಹಿಂದಿನ ಡೇಟಾ ವೇಗಕ್ಕೆ ಹೋಲಿಸಿದರೆ ಹೆಚ್ಚಿನ ಬೆಳವಣಿಗೆಯನ್ನು ಹೊಂದಿದೆ.
Reliance Jio:
ಕಳೆದ ಜನವರಿ, ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಕ್ರಮವಾಗಿ 2017 ರ ಹಿಂದಿನ ಡೇಟಾ ವೇಗಗಳ ಪ್ರಕಾರ ಅಂದರೆ ಜಿಯೋ 17.4mbps, 16.5mbps, 18.5mbps, 19.1mbps, 18.8mbps, 18.7mbps, 18.4mbps, 18.4mbps, 21.9mbps ಮತ್ತು 21.8mbps ಹೊಂದಿತ್ತು. ಮತ್ತು ಈ ಹೊಸ ವರ್ಷದಲ್ಲಿ 2018 ರಿಲಯನ್ಸ್ ಜಿಯೋ ತನ್ನ 4G ಡೌನ್ಲೋಡಿಂಗ್ ವೇಗವನ್ನು 19.3mbps ರಿಂದ 21.9mbps ವರೆಗೆ ಹೆಚ್ಚಿಸಿ ತನ್ನ 4G ಅಪ್ಲೋಡ್ ವೇಗವನ್ನು 4.3mbps ವರೆಗೆ ಹೆಚ್ಚಿಸಿದೆ.
Bharti Airtel:
ಜಿಯೊನ ಮುಖ್ಯ ಪ್ರತಿಸ್ಪರ್ಧಿಯಾದ ಭಾರ್ತಿ ಏರ್ಟೆಲ್ 9.8mbps ವೇಗವನ್ನು ದಾಖಲಿಸಿದ್ದು ಜಿಯೋ ಪರಿಚಯಿಸಿದಾಗಿನಿಂದ ಇದು ಏರ್ಟೆಲ್ನ ದಾಖಲೆಯ ಅತ್ಯುತ್ತಮ ಪ್ರದರ್ಶನವಾಗಿದೆ. ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಏರ್ಟೆಲ್ ಡೌನ್ಲೋಡಿಂಗ್ 7.5mbps ಮತ್ತು 9.3mbps ವೇಗವನ್ನು ಕ್ರಮವಾಗಿ ದಾಖಲಿಸಿದೆ. ಮತ್ತು ತನ್ನ 4G ಅಪ್ಲೋಡ್ ವೇಗವನ್ನು 4.0mbps ವರೆಗೆ ಹೆಚ್ಚಿಸಿದೆ.
Vodafone India:
ವೊಡಾಫೋನ್ ಭಾರತವು ಏರ್ಟೆಲ್ ಕಂಪನಿಯನ್ನೂ ಅನುಸರಿಸಿತು. ನವೆಂಬರ್ನಲ್ಲಿ ಅದರ ಕಾರ್ಯಕ್ಷಮತೆ 10mbps ತಲುಪಿತು. ಮೊದಲಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ 8.7mbps ಮತ್ತು 9.9mbps ವೇಗವನ್ನು ದಾಖಲಿಸಲಾಗಿತ್ತು. ಮತ್ತು ತನ್ನ 4G ಅಪ್ಲೋಡ್ ವೇಗವನ್ನು 5.8mbps ವರೆಗೆ ಹೆಚ್ಚಿಸಿದೆ.
ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿ Facebook / Digit Kannada..