ನಿಮಗೀಗಾಗಲೇ ತಿಳಿದಿರುವಂತೆ HMD ಗ್ಲೋಬಲ್ ಈಗ ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕ್ಕಾವನ್ನು ಭಾರತೀಯ ಗ್ರಾಹಕರಿಗೆ ಅಮೆಝೋನ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗುವಂತೆ ಮಾಡಿದೆ. ಈ ನೋಕಿಯಾ 7 ಪ್ಲಸ್ ಅಮೆಜಾನ್ ಇಂಡಿಯಾದಿಂದ ತೆಗೆದುಕೊಳ್ಳಬಹುದು ಆದರೆ ಫ್ಲಿಪ್ಕಾರ್ಟ್ ವಿಶೇಷವಾಗಿ ನೋಕಿಯಾ 8 ಸಿರೊಕ್ಕಾವನ್ನು ಇಂದು ಮಾರಾಟ ಮಾಡುತ್ತದೆ. ಅಲ್ಲದೆ HMD ಗ್ಲೋಬಲ್ ತನ್ನ ನೋಕಿಯಾ ಮಳಿಗೆ ಮತ್ತು ದೇಶದಾದ್ಯಂತ ಆಫ್ಲೈನ್ ಅಂಗಡಿಗಳ ಮೂಲಕ ಈ ಎರಡೂ ಫೋನ್ಗಳನ್ನು ಮಾರಾಟ ಮಾಡುತ್ತದೆ.
ಇವೆರಡು ಮಧ್ಯ ಶ್ರೇಣಿಯಲ್ಲಿ ಅಂದ್ರೆ ನೋಕಿಯಾ 7 ಪ್ಲಸ್ ನಿಮಗೆ 25,999 ರೂಗಳಲ್ಲಿ ಲಭ್ಯವಾದರೆ ನೋಕಿಯಾ 8 ಸಿರೊಕೊವು 49,999 ರೂಗಳಲ್ಲಿ ಲಭ್ಯವಾಗುತ್ತದೆ. ಅಲ್ಲದೆ ಟೆಲಿಕಾಂ ಆಪರೇಟರ್ ಏರ್ಟೆಲ್ 36 ತಿಂಗಳಿಗೆ 2000 ಕ್ಯಾಶ್ಬ್ಯಾಕ್ ನೀಡುತ್ತಿದ್ದು ನೀವು ಒಂದು ವೇಳೆ ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳಲ್ಲಿ ಖರೀದಿಸಿದರೆ 10% ಕ್ಯಾಶ್ಬ್ಯಾಕ್ ಸಹ ಬಳಕೆದಾರರಿಗೆ ನೀಡುತ್ತಿದೆ.
ಅಲ್ಲದೆ ನಿಮಗೆ 31ನೇ ಡಿಸೆಂಬರ್ 2018 ರವರೆಗೆ ಫ್ರೀ ಏರ್ಟೆಲ್ ಟಿವಿ ಚಂದಾದಾರಿಕೆಯನ್ನು ಪಡೆಯಬವುದು. ಅಲ್ಲದೆ ಈ ಹೊಸ Nokia 8 Sirocco ಜೊತೆಯಲ್ಲಿ ನಿಮಗೆ ಭಾರ್ತಿ ಏರ್ಟೆಲ್ 120GB ಹೆಚ್ಚುವರಿಯ ಡೇಟಾ ಮತ್ತು ಉಚಿತ ಏರ್ಟೆಲ್ ಟಿವಿ ಚಂದಾದಾರಿಕೆಯನ್ನು ಒದಗಿಸುತ್ತಿದೆ.
Nokia 7 Plus ಅತ್ಯುತ್ತಮವಾದ 6 ಇಂಚಿನ ಪೂರ್ಣ HD + ಮತ್ತು 18: 9 ಡಿಸ್ಪ್ಲೇ ಪ್ರಬಲ ಸ್ನಾಪ್ಡ್ರಾಗನ್ 660 ಸೋಕ್, 4 ಜಿಬಿ ರಾಮ್, 12 ಎಂಪಿ ಪ್ರಾಥಮಿಕ ಸಂವೇದಕ ಮತ್ತು 13MP ಸೆಕೆಂಡರಿ ಸಂವೇದಕದ ದ್ವಿ ಬ್ಯಾಕ್ ಕ್ಯಾಮೆರಾಗಳು 16MP ಯ ಸೆಲ್ಫ್ ಶೂಟರನ್ನು ಹೊಂದಿದೆ. ಮತ್ತು ಇದು ನಿಮಗೆ 3800mAh ಬ್ಯಾಟರಿ ಮತ್ತು ಆಂಡ್ರಾಯ್ಡ್ 8.1 ಓರಿಯೊ ಬಾಕ್ಸ್ನಿಂದ ಹೊರಗೆ ಕಾರ್ಯ ನಿರ್ವಯಿಸುತ್ತದೆ.
Nokia 8 Sirocco ಇದರಲ್ಲಿ ಸ್ಟೋರೇಜ್ ವಿಸ್ತರಣೆಗಾಗಿ ಯಾವುದೇ ಬೆಂಬಲವಿಲ್ಲದೆ ನಿಮಗೆ ಇದರಲ್ಲಿ 6GB ಯ RAM ಮತ್ತು 128GB ಇಂಟರ್ನಲ್ ಸ್ಟೋರೇಜಿನೊಂದಿಗೆ ಬರುತ್ತದೆ. ಅಲ್ಲದೆ ದ್ವಿತೀಯ 13MP ಸೆನ್ಸರಿನೊಂದಿಗೆ ಜೋಡಿಸಲಾದ ಫೋನ್ನಲ್ಲಿ ಪ್ರೈಮರಿ 12MP ಕ್ಯಾಮೆರಾವನ್ನು ಈ ಫೋನ್ ಒದಗಿಸುತ್ತದೆ. ಇದರ ಮುಂಭಾಗದಲ್ಲಿ 5MP ಶೂಟರ್ ಇರುತ್ತದೆ. ಈ ಫೋನ್ 3260mAh ಬ್ಯಾಟರಿ ಹೊಂದಿದೆ.
ಹಾಗಾದ್ರೆ ಸ್ನೇಹಿತರೇ ನೀವು ನೋಕಿಯಾ 7 ಪ್ಲಸ್ ಅಥವಾ ನೋಕಿಯಾ 8 ಸಿರೊಕ್ಸೊ ಇವೇರಡಲ್ಲಿ ನೀವು ಯಾವುದನ್ನು ತೆಗೆದುಕೊಳ್ಳುತ್ತೀರಾ? ಅಥವಾ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಕಾಮೆಂಟ್ ಮಾಡಿ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.