ಹೊಸ Nokia 6.1 ಅನ್ನು HMD ಮತ್ತು Google ಎರಡು ಸೇರಿ ಇದರ OS ಅನ್ನು ನಡೆಸುತ್ತಿವೆ. ಇಲ್ಲಿದೆ ಇದರ ಸಂಪೂರ್ಣವಾದ ವಿಮರ್ಶೆ.

ಹೊಸ Nokia  6.1 ಅನ್ನು HMD ಮತ್ತು Google ಎರಡು ಸೇರಿ ಇದರ OS ಅನ್ನು ನಡೆಸುತ್ತಿವೆ. ಇಲ್ಲಿದೆ ಇದರ ಸಂಪೂರ್ಣವಾದ ವಿಮರ್ಶೆ.
HIGHLIGHTS

ನೋಕಿಯಾ 6.1 ಪಡೆದುಕೊಳ್ಳಲು ಬಯಸುತ್ತಿದ್ದರೆ ಅದಕ್ಕೂ ಮುಂಚೆ ಆ ಫೋನಿನ ನಮ್ಮ ಈ ವಿಮರ್ಶೆಯನ್ನು ಮೊದಲು ನೋಡಿ.

ಸ್ನೇಹಿತರೇ ನೀವು ನೋಕಿಯಾ ಕಂಪನಿಯ 17,000 ರೂಪಾಯಿಗಳೊಳಗೆ ಲಭ್ಯವಿರುವ ಹೊಸ ನೋಕಿಯಾ 6.1 ಫೋನನ್ನು ಪಡೆದುಕೊಳ್ಳಲು ಬಯಸುತ್ತಿದ್ದರೆ ಅದಕ್ಕೂ ಮುಂಚೆ ಆ ಫೋನಿನ ನಮ್ಮ ಈ ವಿಮರ್ಶೆಯನ್ನು ಮೊದಲು ನೋಡಿ. ಮೊದಲಿಗೆ ಇದರ ಡಿಸೈನ್ ಬಗ್ಗೆ ಹೇಳಬೇಕಂದರೆ ಅತ್ಯುತ್ತಮವಾಗಿ ರಚಿಸಿದೆ ಅಲ್ಲದೆ ಈ ಫೋನನ್ನು ಹಿಡಿದುಕೊಳ್ಳಲ್ಲು ಹೆಚ್ಚು ಅನುಕೂಲತೆಯನ್ನು ನೀಡುತ್ತದೆ. ಇದು  ಅಲ್ಯೂಮಿನಿಯಂನ ಒಂದು ಬ್ಲಾಕ್ನಿಂದ ನಿರ್ಮಿಸಲಾಗಿದ್ದು ಮ್ಯಾಟ್ ಫಿನಿಶ್ ಕ್ಯಾಮರಾದ ಸುತ್ತಲೂ ಅಂಚುಗಳ ಸುತ್ತಲೂ ತೆಳುವಾದ ಹೊಳೆಯುವ ತಾಮ್ರದ ಉಚ್ಚಾರಣಾಗಳೊಂದಿಗೆ ಕ್ಯಾಮೆರಾ ಯೂನಿಟ್ ಮತ್ತು ಬ್ಯಾಕ್ ಫಿಂಗರ್ಪ್ರಿಂಟ್ ಸೆನ್ಸರನ್ನು ನೀಡಿದೆ.

ಇದರ ಅಂಚುಗಳು ತೀರಾ ತೀಕ್ಷ್ಣವಾಗಿದ್ದು ಸುದೀರ್ಘ ಬಳಕೆಯ ನಂತರ ಫೋನ್ ಅಂಗೈಗಳಲ್ಲಿರಲು  ಕೂರಲು ಪ್ರಯತ್ನಿಸುತ್ತದೆ. ಅಲ್ಲದೆ ಇದರ ಡಿಸ್ಪ್ಲೇಯು 2.5D ಪ್ರೊಟೆಕ್ಟಿವ್ ಗ್ಲಾಸ್ ಇದರ ಮೇಲೆ ಬರುತ್ತದೆ ಮತ್ತು ಅದು ಸ್ಕರಚಸ್ಗಳಿಂದ ಉಳಿಸುತ್ತದೆ. ಈ ಹೊಸ ನೋಕಿಯಾ 6.1 ನಿಮಗೆ 5.5 ಇಂಚಿನ ಫುಲ್ HD IPS LCD ಡಿಸ್ಪ್ಲೇ ಇದು ಕಳೆದ ವರ್ಷದ ನೋಕಿಯಾ 6 ಡಿಸ್ಪ್ಲೇಯಂತೆ ಡಿಸೆಂಟ್ ಲುಕ್ ನೀಡುವುದಲ್ಲದೆ ಇದು ನಿಮಗೆ 1080X1920 ರೆಸೊಲ್ಯೂಷನ್ ಇದರ ಡಿಸ್ಪ್ಲೇ ಪೂರ್ಣವಾಗಿ ಪ್ರತಿ ಬಣ್ಣದ ಪ್ರಾಮುಖ್ಯತೆಯನ್ನು ತೋರುತ್ತದೆ.

https://icdn4.digitaltrends.com/image/nokia-6-1-us-version-1000x678.jpg

ಒಟ್ಟಾರೆಯಾಗಿ ಈ ಬೆಲೆಯ ರೇಂಜಲ್ಲಿ ಬರುವ ಫೋನ್ಗಳಲ್ಲಿ ಇದೊಂದು ಅತ್ಯುತ್ತಮವಾದ ಬ್ರೈಟ್ ಪ್ಯಾನಲ್ ಹೊಂದಿರುವ ಫೋನಾಗಿದೆ. ಇದರ ಡಿಸ್ಪ್ಲೇ ನಿಜಕ್ಕೂ ಗ್ಲೋಸಿ ಮತ್ತು ರೆಫ್ಲೆಕ್ಟಿವ್ ಬಣ್ಣಗಳೊಂದಿಗಿನ ಹೆಚ್ಚು ಮತ್ತು ಕಡಿಮೆ  ಬೆಳಕಿನಲ್ಲಿ ಬಳಸಲು ಅತ್ಯುತ್ತಮವಾದ ಫೋನಾಗಿದೆ. ಇದರಲ್ಲಿ ನೀವು ಮೂವೀಸ್ ಮತ್ತು ವೀಡಿಯೋಗಳನ್ನು ಹೆಚ್ಚು ಕುತೂಹಲದಿಂದ ನೋಡುವಿರಿ. ಏಕೆಂದರೆ ಇದು ಅವುಗಳ ಶಾರ್ಪ್ ಮತ್ತು ಕ್ಲಾರಿಟಿ ನಿಮ್ಮನ್ನು ಹೆಚ್ಚು ಸಂತೋಷಪಡಿಸುತ್ತದೆ. ಇದರ ಕಲರ್ ಟೋನ್ ಒಂದು ರೀತಿಯಲ್ಲಿ OLED ಪ್ಯಾನಲ್ನಂತೆ ಹೈಯರ್ ಕಾಂಟ್ರಾಸ್ಟ್ ಮತ್ತು ಡೀಪರ್ ಕಲರ್ಗಳೊಂದಿಗೆ ಕಾಣುತ್ತದೆ. 
   
HMD ಗ್ಲೋಬಲ್ ಈ ವರ್ಷದ ನೋಕಿಯಾ 6.1 ನಲ್ಲಿ ಸ್ನ್ಯಾಪ್ಡ್ರಾಗನ್ 630 ಚಿಪ್ಸೆಟ್ ನನ್ನ ಬಳಿ ಇರುವ ಈ ಫೋನ್ 3GB ಯ RAM ಮತ್ತು 32GB ಸ್ಟೋರೇಜ್ ಇದರೊಂದಿಗೆ ನಿಮಗೆ ಮತ್ತೊಂದು ರೂಪಾಂತರವಿದೆ ಅದು 4GB ಯ RAM ಮತ್ತು 64GB ಸ್ಟೋರೇಜ್. ಇದರ ಬೇಂಚ್ಮಾರ್ಕ್ ನೋಡಬೇಕೆಂದ್ರೆ ಈ ವರ್ಷದ ನೋಕಿಯಾ 6.1ಬೇರೆ ಫೋನ್ಗಳ ಸ್ಪರ್ಧೆಗಿಂತ ಕಡಿಮೆಯಿದೆ. ಅಂದ್ರೆ AnTuTu 7 ಪ್ರಕಾರ 90146 ಸ್ಕೋರ್ ಮಾಡಿದರೆ Geekbench Single ಮತ್ತು Multi core ನಲ್ಲಿ 873 ಮತ್ತು 4154 ಸ್ಕೋರ್ಗಳನ್ನು ಹೊಂದಿದೆ. ಆದರೆ ಇದರ ಬಳಕೆ ಮೇಲೆ ನೋಡಿದರೆ ಈ ಸ್ಕೋರ್ಗಳು ಅಷ್ಟಾಗಿ ಹೊಂದಿಕೆಯಾಗುವುದಿಲ್ಲ.

ಈ ಫೋನ್ ಆಂಡ್ರಾಯ್ಡ್ 1 ಸರ್ಟಿಫೈಡ್ ಆಗಿರುವುದರಿಂದ HMD ಮತ್ತು Google ಎರಡು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಇದರ OS ಅನ್ನು ನಡೆಸುತ್ತಿವೆ. ಇದೋಂದು ಸ್ಟಾಕ್ ಆಂಡ್ರಾಯ್ಡ್ ಹೆಚ್ಚು ಅನುಕೂಲವನ್ನು ನೀಡುವುದರೊಂದಿಗೆ ಹೆಚ್ಚು ಗಮನಾರ್ಹವಾಗಿದೆ. ಇದರಲ್ಲಿ ನಿಮಗೆ ಯಾವುದೇ ಡುಪ್ಲಿಕೇಟ್ ಅಪ್ಲಿಕೇಶನ್ಗಳಿಲ್ಲ. ಇದರಲ್ಲಿ ನಿಮಗೆ ಸಮಯಕ್ಕೆ ತಕ್ಕಂತೆ ಸರಿಯಾದ ಅಪ್ಡೇಟ್ಗಳು ಸಹ ಸಿಗುತ್ತಿರುತ್ತವೆ.
ಇದರ ಕ್ಯಾಮೆರಾದ ಬಗ್ಗೆ ಮಾತನಾಡಬೇಕೆಂದ್ರೆ ಇದರ ಬ್ಯಾಕಲ್ಲಿದೆ 16MP F2.0 ಅಪೇಚಾರೊಂದಿಗೆ ಬರುತ್ತದೆ.

ಇದರಲ್ಲಿನ ಚೇಂಜ್ ಅಂದ್ರೆ ಇದರಲ್ಲಿನ ಹೆಚ್ಚುವರಿಯ Zeiss ಆಪ್ಟಿಕಲ್ ಲೆನ್ಸ್ ಮತ್ತು ನೋಕಿಯಾ ಪ್ರೋ ಕ್ಯಾಮೆರಾ ಆಪ್. ಇದರಿಂದ ಈ ವರ್ಷದ ಕ್ಯಾಮೆರಾ ಹೆಚ್ಚು ಸುಧಾರಣೆಯನ್ನು ಹೊಂದಿದೆ. ಇದರಲ್ಲಿ ಹಗಲಿನ ಹೊತ್ತು ತೆಗೆದ ಇಮೇಜ್ಗಳು ಉತ್ತಮವಾಗಿವೆ. ಇದರಲ್ಲಿನ ಬಣ್ಣಗಳು ನೈಜವಾಗಿದ್ದು ನ್ಯಾಚುರಲ್ ಲುಕ್ ನೀಡುತ್ತದೆ. ಇದರಲ್ಲಿ ತೆಗೆದ ಶಾಟ್ಗಳಲ್ಲಿ ಹೆಚ್ಚು ಕ್ಲಾರಿಟಿಯನ್ನು ಹೊಂದಿದ್ದು ಇದರ ಲೇನ್ಗಳು ಮೆಚ್ಚುಗೆ ವ್ಯಕ್ತಪಡಿಸುತ್ತದೆ.

ಇದು ಹೊಸ Zenfone Max Pro M1 ನಷ್ಟು ಡೀಪ್ ಇಲ್ಲವಾದರೂ ಇದರ ಡೈನಾಮಿಕ್ ರೇಂಜ್ ಶಾಟ್ ನಿಜಕ್ಕೂ ಉತ್ತಮವಾಗಿದೆ. ಈ ನೋಕಿಯಾ 6.1 ನಲ್ಲಿ ಯಾವುದೇ ಡೆಥ್ ಮೂಡ್ ನೀಡಿಲ್ಲ ಆದರೆ ಇದರ ಬ್ಯಾಕಲ್ಲಿರುವ F2.0 ನೀವು ತೆಗೆಯುವ ಕ್ಲೋಸ್ ಶಾಟ್ಗಳಿಗೆ ಸಹಾಯ ಮಾಡುತ್ತದೆ. ಇದರ ಕೊರತೆಗಳು ಕಡಿಮೆ ಬೆಳಕಲ್ಲಿ ತೆರೆದುಕೊಳ್ಳುತ್ತದೆ. ಇದರ ಲೊ ಲೈಟ್ ಪರ್ಫಾರ್ಮೆನ್ಸ್ ಇನ್ನು ಹೊಸ Redmi Note 5 ಕ್ಕೆ ಸರಿಸಾಟಿಯಾಗಿಲ್ಲ. ಇದರಲ್ಲಿನ ನೋಕಿಯಾ ಕ್ಯಾಮೆರ ಪ್ರೊ ಆಪ್ ನಿಮಗೆ ಶಟರ್ ಸ್ಪೀಡ್ ಮತ್ತು ISO ಬದಲಾಯಿಸಲು ಸಹಾಯ ಮಾಡುತ್ತದೆ.

ಇದರಲ್ಲಿ ಯಾವುದೇ Stabilisation ಹೊಂದಿಲ್ಲ. ಕಳೆದ ವರ್ಷ ನೋಕಿಯಾ 8 ರಲ್ಲಿ ನೀಡದ ಬೋತಿ ಫೀಚರನ್ನು ಈ ಹೊಸ ನೋಕಿಯಾ 6.1 ಕ್ಕೆ ನೀಡಿದೆ. ಇದರ ಫ್ರಂಟ್ ಕ್ಯಾಮೆರಾ ಡಿಸೆಂಟಾಗಿ 8MP ಸೆಲ್ಫಿ ಶೊಟರ್ F2.2 ಅಪೇಚಾರ್ನೊಂದಿಗೆ ಬರುತ್ತದೆ. ಇದರಲ್ಲಿ ನಿಮ್ಮ ಫೆಸಿಯಾಲ್ ಡೀಟೇಲ್ ಉತ್ತಮವಾಗಿದ್ದು ಬ್ಯಾಕ್ಗ್ರೌಂಡ್ ಕ್ಲಿಯರಾಗಿ ಸೆರೆ ಹಿಡಿಯುತ್ತದೆ. ಕೊನೆಯದಾಗಿ ಇದರಲ್ಲಿದೆ 3000mAh ಬ್ಯಾಟರಿ ಕೇವಲ ಒಂದು ದಿನದಲ್ಲಿ ಕೊನೆಯಾಗುವುದಿಲ್ಲ ಇದು ಕ್ವಾಲ್ಕಾಮ್ ಫಾಸ್ಟ್ ಚಾರ್ಜಿಂಗನ್ನು ಸಪೋರ್ಟ್ ಮಾಡುತ್ತಾ ಕೇವಲ 90 ನಿಮಿಷಗಳಲ್ಲಿ ನಿಮ್ಮ ಬ್ಯಾಟರಿಯನ್ನು ಪೂರ್ಣಗೊಳಿಸುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo