ಪ್ಲಾಸ್ಟಿಕ್ ಆಧಾರ್ ಕಾರ್ಡ್ ಪಡೆಯಲು ಅನಧಿಕೃತ ಏಜೆನ್ಸಿಗಳೊಂದಿಗೆ ತಮ್ಮ ವಿವರಗಳನ್ನು ಹಂಚಿಕೊಳ್ಳಬೇಡಿ.

ಪ್ಲಾಸ್ಟಿಕ್ ಆಧಾರ್ ಕಾರ್ಡ್ ಪಡೆಯಲು ಅನಧಿಕೃತ ಏಜೆನ್ಸಿಗಳೊಂದಿಗೆ ತಮ್ಮ ವಿವರಗಳನ್ನು ಹಂಚಿಕೊಳ್ಳಬೇಡಿ.
HIGHLIGHTS

ಹೀಗೆ ಮಾಡಿದ್ದಲ್ಲಿ ಅನಧಿಕೃತ ಮುದ್ರಣವೆಂದು ಕ್ರಿಮಿನಲ್ ಅಪರಾಧಕ್ಕೆ ತೆಗೆದುಕೊಳ್ಳಲಾಗುತ್ತದೆ.

ಆಧಾರ್ ಕಾರ್ಡ್ ಅಥವಾ ಸಾಮಾನ್ಯ ಕಾಗದದ ಮೇಲೆ ಮುದ್ರಿತವಾಗಿ ಡೌನ್ಲೋಡ್ ಮಾಡಿದ ಆಧಾರ್ ಕಾರ್ಡ್ ಎಲ್ಲಾ ಬಳಕೆಗಳಿಗೆ ಸಂಪೂರ್ಣವಾಗಿ ಸರ್ಕಾರದಿಂದ ಮಾನ್ಯವಾಗಿದೆ. ಅಂದರೆ ಯಾವುದೇ ವ್ಯಕ್ತಿಯು ಕಾಗದದ ಆಧಾರ್ ಕಾರ್ಡ್ ಹೊಂದಿದ್ದರೆ ಅವನ / ಅವಳ ಆಧಾರ್ ಕಾರ್ಡ್ ಲ್ಯಾಮಿನೇಟ್ ಮಾಡುವುದು ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಥವಾ ಸ್ಮಾರ್ಟ್ ಆಧಾರ್ ಕಾರ್ಡ್ ಎಂದು ಕರೆಯುವ ಕಾರ್ಯಗಳನ್ನು ಹಣ ಪಾವತಿಸುವ ಮೂಲಕ ಪಡೆಯುವುದು ಅಗತ್ಯವೆನಿಲ್ಲ.  

ಈ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕಾರಿಗಳು (UIDAI) ತಮ್ಮ ಆಧಾರ್ ಸಂಖ್ಯೆ ಅಥವಾ ವೈಯಕ್ತಿಕ ವಿವರಗಳನ್ನು ಅನಧಿಕೃತ ಏಜೆನ್ಸಿಗಳಿಗೆ ಲ್ಯಾಮಿನೇಟ್ ಮಾಡಲು ಅಥವಾ ಪ್ಲಾಸ್ಟಿಕ್ ಕಾರ್ಡಿನಲ್ಲಿ ಮುದ್ರಿಸುವುದನ್ನು ಹಂಚಿಕೊಳ್ಳಬಾರದೆಂದು ಎಚ್ಚರಿಸಿದ್ದಾರೆ. ಒಂದು ಹೇಳಿಕೆಯಲ್ಲಿ UIDAI ಅಧಿಕಾರಿಗಳು ತಮ್ಮ ಕಾಗದದ ಆಧಾರ್ ಕಾರ್ಡ್ ಹೊಂದಿರುವವರು ಅದರ ಬಳಕೆಗೆ ಸಂಪೂರ್ಣವಾಗಿ ಉತ್ತಮವೆಂದು ಹೇಳಿದರು. "ಸ್ಮಾರ್ಟ್ ಆಧಾರ್ ಕಾರ್ಡ್ನಂತಹ ಯಾವುದೇ ಪರಿಕಲ್ಪನೆ ಇಲ್ಲ" ಎಂದು ಯುಐಡಿಎಐ ಡಾ. ಅಜಯ್ ಭೂಷಣ್ ಪಾಂಡೆ ನಿರ್ದೇಶಕ ಪ್ರಧಾನ ನಿರ್ದೇಶಕ ಹೇಳಿದರು.

ಡೌನ್ಲೋಡ್ ಮಾಡಿದ ಆಧಾರ್ ಮುದ್ರಣವು ಕಪ್ಪು ಮತ್ತು ಬಿಳಿ ರೂಪದಲ್ಲಿ ಸಹ ಯುಐಡಿಎಐ ಕಳುಹಿಸಿದ ಮೂಲ ಆಧಾರ್ ಪತ್ರದಂತೆ ಮಾನ್ಯವಾಗಿದೆ. ಪ್ಲಾಸ್ಟಿಕ್ ಕಾರ್ಡಿನಲ್ಲಿ ಅದನ್ನು ಮುದ್ರಿಸಲು ಅಗತ್ಯವಿಲ್ಲ ಅಥವಾ ಅದನ್ನು ಲ್ಯಾಮಿನೇಟ್ ಪಡೆಯುವುದು ಅಗತ್ಯವೆನಿಲ್ಲ.  

ಒಂದು ವೇಳೆ ನೀವು ಆಥಾರ್ ಕಾರ್ಡ್ ಲ್ಯಾಮಿನೇಟ್ ಅಥವಾ ಪ್ಲಾಸ್ಟಿಕ್ ಕಾರ್ಡಿನಲ್ಲಿ ಮುದ್ರಿಸಬೇಕೆಂದು ಬಯಸಿದರೆ ಇದನ್ನು "ಅಧಿಕೃತ ಕಾಮನ್ ಸರ್ವಿಸ್ ಸೆಂಟರ್ ಅಥವಾ ಆಧಾರ್ ಪರ್ಮನ್ಮೆಂಟ್ ಎನ್ರೊಲ್ಮೆಂಟ್ ಸೆಂಟರ್ಗಳಲ್ಲಿ ಮಾತ್ರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ 30 ರೂ ಮೊತ್ತವನ್ನು ಪಾವತಿಸುವ ಮೂಲಕ ಪಡೆಯಬವುದು.  

ಇ-ಕಾಮೋರ್ಸ್ ಕಂಪೆನಿಗಳಾದ E-bay, Flipkart, Amazon ಮತ್ತು ಇತರರು ತಮ್ಮ ವ್ಯಾಪಾರಿಗಳಿಗೆ ಸಾರ್ವಜನಿಕ ಮಾಹಿತಿಗಳಿಂದ ಆಧಾರ್ ಮಾಹಿತಿಯನ್ನು ಸಂಗ್ರಹಿಸಲು ಅನುಮತಿಸದಿರುವಂತೆ ಮಾಹಿತಿ ನೀಡಲಾಗಿದೆ ಅಥವಾ ಹೀಗೆ ಮಾಡಿದ್ದಲ್ಲಿ ಅನಧಿಕೃತ ಮುದ್ರಣವೆಂದು ಕ್ರಿಮಿನಲ್ ಅಪರಾಧಕ್ಕೆ ತೆಗೆದುಕೊಳ್ಳಲಾಗುತ್ತದೆ. 

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಲೈಕ್ ಮತ್ತು ಫಾಲೋ ಮಾಡಿರಿ Facebook / Digit Kannada..

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo