Xiaomi ಯಾ ಹೊಸ Xiaomi Mi 6 ಈಗ 4GB ಯಾ RAMನೊಂದಿಗೆ ಇಂದು ಚೀನೀ ಮಾರುಕಟ್ಟೆಯಲ್ಲಿ ಪ್ರಕಟವಾಗಿದೆ.

Updated on 16-Nov-2017
HIGHLIGHTS

ಇದು ಭಾರತದಲ್ಲಿ ಇದೇ ಡಿಸೆಂಬರ್ 28 ರ ವತ್ತಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇಂದು Xiaomi Mi 6 ತನ್ನ ಹೊಸ ರೂಪಾಂತರ ಅನಾವರಣ ಮಾಡಿದೆ. ಅಲ್ಲದೆ ಮುಂದೆ ಇದು ಸಿಂಗಲ್ಸ್ ದಿನಯಲ್ಲಿ ಮಾರಾಟವಾಗಲಿದೆ. ಈ ಹೊಸ 4GB ಯಾ RAM ರೂಪಾಂತರವನ್ನು ಈಗಾಗಲೇ ಚೀನೀ ಮಾರುಕಟ್ಟೆಯಲ್ಲಿ ಪ್ರಕಟಿಸಲಾಗಿದೆ. ಇದನ್ನು CNY 2299 (ಚೀನೀ ಹಣ) ಅಂದಾಜು 22,500 ರೂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮತ್ತು ಇದರ 'ಸಿಂಗಲ್ಸ್ ಡೇ' ಎಂಬ ಪ್ರಸ್ತಾಪದಲ್ಲಿ ಇದು ತನ್ನ ಮೊದಲ ಮಾರಾಟದ ಭಾಗವಾಗಿ ಇದೇ ನವೆಂಬರ್ 11 ರಂದು ನಡೆಸಲಿದೆ. ಮತ್ತು ಈ ಸಿಂಗಲ್ಸ್ ದಿನದ ಮಾರಾಟಕ್ಕೆ ಮುಂಚೆಯೇ ಚೀನಾದ ಆಸಕ್ತ ಖರೀದಿದಾರರಿಗೆ ಕಂಪೆನಿಯು Xiaomi.com ಆನ್ಲೈನ್ ಸ್ಟೋರ್ಗೆ ಮತ್ತು ಪ್ರೀ-ಬುಕಿಂಗ್ ಮಾಡಲು ಅವಕಾಶವನ್ನು ಈಗಾಗಲೇ ಮಾಡಿ ಕೊಟ್ಟಿದೆ. ಇದು ಭಾರತದಲ್ಲಿ ಇದೇ ಡಿಸೆಂಬರ್ 28 ರ ವತ್ತಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಹೊಸ Xiaomi Mi 6 ಅನ್ನು ಮುಖ್ಯವಾಗಿ ಎರಡು ರೂಪಾಂತರಗಳಲ್ಲಿ ಹೊರ ತರಲಿದೆ ಅಂದರೆ ಇದರ ಸ್ಟೋರೇಜಿನಲ್ಲಿ ಬದಲಾವಣೆಯನ್ನು ತೋರುತ್ತದೆ.      

6GB ಯಾ RAM ಮತ್ತು 64GB ಸ್ಟೋರೇಜ್ CNY 2499 (ಅಂದಾಜು 23,990 ರೂಗಳು).  
6GB ಯಾ RAM ಮತ್ತು 128GB ಸ್ಟೋರೇಜ್ CNY 2899 (ಅಂದಾಜು 26,990 ರೂಗಳು).  

ಮತ್ತು ಈ ಹೊಸ Xiaomi ಮಿ 6 ಸ್ಮಾರ್ಟ್ಫೋನ್ ನಿಮಗೆ ಮುಖ್ಯವಾಗಿ ಮೂರು ಬಣ್ಣ ಅಂದರೆ ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ನೀವು ಇದನ್ನು ಆಯ್ಕೆ ಮಾಡಬವುದು. ಮತ್ತು ಇದರ ನೀಲಿ ಬಣ್ಣದ ಸ್ಮಾರ್ಟ್ಫೋನ್ ನಿಮ್ಮ ಕಣ್ಮನ ಸೆಳೆಯುತ್ತದೆ. 
 
ಈ ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 COC ಆಡ್ರಿನೊ 540 ಜಿಪಿಯುನೊಂದಿಗೆ 2.45GHz ನಲ್ಲಿ ದೊರೆಯುತ್ತದೆ. ಇದರ ಡಿಸ್ಪ್ಲೇ 5.15 ಇಂಚು ಕರ್ಣೀಯವಾಗಿ ಮತ್ತು ಕ್ರೀಡಾ ಪೂರ್ಣ ಎಚ್ಡಿ (1080×1920 ಪಿಕ್ಸೆಲ್ಗಳು) ರೆಸಲ್ಯೂಶನ್. ಇದರ ಗರಿಷ್ಠ ಪ್ರಕಾಶಮಾನವು 600 nits ಆಗಿದೆ. Xiaomi Mi 6 ಕ್ಯಾಮೆರಾ ಹಿಂದೆ ಡ್ಯುಯಲ್ ಕ್ಯಾಮರಾ ಸೆಟಪ್ ಒಳಗೊಂಡಿದೆ. ಇದು ಡ್ಯುಯಲ್ 12MP ಯಾ ಬ್ಯಾಕ್ ಕ್ಯಾಮೆರಾ ಅಂದರೆ ಇದು ಐಫೋನ್ನ 7 ಪ್ಲಸ್ನ ಸೆಟಪನ್ನು ನೆನಪಿಸುತ್ತದೆ. ಈ ಸ್ಮಾರ್ಟ್ಫೋನ್ ಫೋನ್ 12MP ವಿಶಾಲ ಕೋನ ಮಸೂರವನ್ನು ಮತ್ತು 2x ನಷ್ಟವಿಲ್ಲದ ಜೂಮ್ಗಾಗಿ 12MP ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಮತ್ತು ಇದು 3350mAh ಬ್ಯಾಟರಿಯನ್ನು ಹೊಂದಿದೆ.  Xiaomi Mi 6 ನಲ್ಲಿ ಮುಂಭಾಗದ ಡ್ಯುಯಲ್ ಸ್ಪೀಕರ್ಗಳು, ಬ್ಲೂಟೂತ್ 5.0, ಡ್ಯೂಯಲ್-ಸಿಮ್ ಬೆಂಬಲ (4G V + 4G / 3G / 2G) 8MP ಯಾ ಫ್ರಂಟ್ ಕ್ಯಾಮರಾವನ್ನು ಹೊಂದಿದೆ.

 

ಇಮೇಜ್ ಸೋರ್ಸ್: 

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :