ಇದು ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ2 (2018).

ಇದು ಸೂಪರ್ AMOLED ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ ಹೊಸ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ2 (2018).
HIGHLIGHTS

ಹೊಸ ಸ್ಯಾಮ್ಸಂಗ್ ಗ್ಯಾಲಾಕ್ಸಿ ಜೆ2 ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯ ಬೆಲೆ ಎಷ್ಟು ಗೊತ್ತಾ?

ಈಗ ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಮಾರಾಟಗಾರ ಸ್ಯಾಮ್ಸಂಗ್ ತನ್ನ ಹೊಸ Samsung Galaxy J2 2018 ಸ್ಮಾರ್ಟ್ಫೋನ್ನ ನವೀಕರಿಸಿದೆ. ಇದು 2018 ಆವೃತ್ತಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ಸ್ಮಾರ್ಟ್ಫೋನ್ ಈಗಾಗಲೇ ರಷ್ಯಾದ ಚಿಲ್ಲರೆ ವ್ಯಾಪಾರಿಯ ವೆಬ್ಸೈಟ್ನಲ್ಲಿ ಗುರುತಿಸಲಾಗಿದ್ದು ಸ್ಮಾರ್ಟ್ಫೋನ್ನ ವಿಶೇಷತೆ ಮತ್ತು ಬೆಲೆಗಳನ್ನು ಬಹಿರಂಗಪಡಿಸಿದೆ. ಇದು ಕಪ್ಪು ಮತ್ತು ಗೋಲ್ಡ್ ಬಣ್ಣದ ರೂಪಾಂತರದಲ್ಲಿ ಕಂಡುಬರುತ್ತದೆ. ಅಲ್ಲದೆ ಇದರ ಬೆಲೆ RUB 7,990 ( ಅಂದ್ರೆ 8860/- ರೂಗಳು) ಬೆಲೆಗೆ  ನಿಗದಿಪಡಿಸಲಾಗಿದೆ.

ಈ ಹೊಸ Samsung Galaxy J2 2018 ಇದು 540x960p ರೆಸಲ್ಯೂಶನ್ ಹೊಂದಿರುವ 5 ಇಂಚಿನ QHD ಸೂಪರ್  AMOLED ಡಿಸ್ಪ್ಲೇಯೊಂದಿಗೆ ಸ್ಮಾರ್ಟ್ಫೋನ್ ಪಟ್ಟಿಮಾಡಲಾಗಿದೆ. ಇದರ ವೆಬ್ಸೈಟ್ನಲ್ಲಿನ ವಿಶೇಷಣಗಳ ಪ್ರಕಾರ ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ2 ಕ್ವಾಲ್ಕಾಮ್ನ ಕ್ವಾಡ್ ಕೋರ್ ಸ್ನಾಪ್ಡ್ರಾಗನ್ 425 ಚಿಪ್ಸೆಟ್ 1.4GHz ನಲ್ಲಿ ದೊರೆಯುತ್ತದೆ. ಮತ್ತು 1.5GB ಯಾ RAM ಮತ್ತು 16GB ಯಾ ಇಂಟರ್ನಲ್ ಸ್ಟೋರೇಜಿನೊಂದಿಗೆ ನವೀಕರಿಸಿದೆ. ಇದನ್ನು ನೀವು ಮೈಕ್ರೊ SD ಕಾರ್ಡ್ ಬಳಸಿ 256GB ಯಾ ವರೆಗೆ ವಿಸ್ತರಿಸಬಹುದಾಗಿದೆ.

Samsung Galaxy J2 2018 ಈ ಆವೃತ್ತಿ LED ಫ್ಲ್ಯಾಷ್ ಮತ್ತು 5MP ಯಾ ಫ್ರಂಟ್ ಕ್ಯಾಮೆರಾ ಮತ್ತು 8MP ಯಾ ಬ್ಯಾಕ್ ಕ್ಯಾಮೆರಾ ಸೆಟಪ್ ಹೊಂದಿದ್ದು 2600mAh ಬ್ಯಾಟರಿಯನ್ನು ಹೊಂದಿದೆ. ಮತ್ತು ಇದು Wi-Fi, VoLTE, ಬ್ಲೂಟೂತ್ 4.1, GPS, ಎ-ಜಿಪಿಎಸ್, ಮತ್ತು ಮೈಕ್ರೋ USB ಪೋರ್ಟ್ಗಳಂತಹ ಸಂಪರ್ಕದ ವೈಶಿಷ್ಟ್ಯಗಳನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo