ಹೊಸ Samsung Galaxy A6+ ವಿಮರ್ಶೆಯೊಂದಿಗೆ ಇದರ ಬೆಸ್ಟ್ ಮತ್ತು ವರ್ಸ್ಟ್ ಫೀಚರ್ಗಳ ಸಂಪೂರ್ಣವಾದ ಮಾಹಿತಿ

Updated on 16-Jul-2018
HIGHLIGHTS

ಈ ಹೊಚ್ಚ ಹೊಸ Samsung Galaxy A6+ ನಿಮಗೆ ನಿಜವಾಗಿಯು ಸ್ಯಾಮ್ಸಂಗ್ ಅಂದ್ರೆ ಏನು ಅನ್ನೋದನ್ನು ನೆನಪಿಸುತ್ತದೆ.

ಸ್ನೇಹಿತರೇ ಇವತ್ತು ನಾವು ಇಲ್ಲಿ ಸ್ಯಾಮ್ಸಂಗ್ ಕಂಪನಿಯ ಹೊಚ್ಚ ಹೊಸ ಫೋನಾಗಿರುವ Samsung Galaxy A6+ ಬಗ್ಗೆ ಮಾತನಾಡೋಣ. ಇದು ಸದ್ಯಕ್ಕೆ ಅಮೆಜಾನಿನಲ್ಲಿ ಕೇವಲ 23,990 ರೂಗಳಲ್ಲಿ ಲಭ್ಯವಿದೆ. ನಾನು ಇದನ್ನ ಒಂದು ವಾರ ಉಪಯೋಗಿಸಿ ನೋಡಿದ್ದೀನಿ ಈಗ ಇದರ ಸಂಪೂರ್ಣವಾದ ಮಾಹಿತಿ ನೋಡೋಣ. ಈ ಹೊಚ್ಚ ಹೊಸ Samsung Galaxy A6+ ನಿಮಗೆ ನಿಜವಾಗಿಯು ಸ್ಯಾಮ್ಸಂಗ್ ಅಂದ್ರೆ ಏನು ಅನ್ನೋದನ್ನು ನೆನಪಿಸುತ್ತದೆ.

ಯಾಕೆಂದ್ರೆ ಈ ಫೋನ್ ಅಚ್ಚುಕಟ್ಟದ ವಿನ್ಯಾಸ ಮತ್ತು ಬಾಡಿ ಡಿಸೈನ್ ಹೊಂದಿದ್ದು ಇದರ ಕಾರ್ನರ್ಗಳು ನಿಜಕ್ಕೂ ರೌಂಡ್ ಶೇಪಲ್ಲಿ ರಚಿತಗೊಂಡು ಡಿಸ್ಪ್ಲೇ ಹೆಚ್ಚು  ಆಕರ್ಷಣೀಯವಾಗಿ ಸ್ಮೂತ್ ಮತ್ತು ಪ್ರೀಮಿಯಂ ಲುಕ್ ನೀಡುತ್ತದೆ. ಇದರ ಬ್ಯಾಕಲ್ಲಿ ನೀಡಿರುವ ಮೆಟಲ್ ಯೂನಿಬಾಡಿ ಸಾಲಿಡ್ ಡಿಸೈನ್ ಮಾತ್ರವಲ್ಲದೆ ಕೈಯಲ್ಲಿಡಿಯಲು ಹೆಚ್ಚು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ. ಇದರ ಬ್ಯಾಕಲ್ಲಿ ಎರಡು ಕರ್ವ್ ಅಂಟಿನ ಲೈನ್ಗಳು ಫೋನಿನ ಮೇಲೆ ಮತ್ತು ಕೆಳಭಾಗದಲ್ಲಿ ರಚಿತಗೊಂಡು ಒಂದು ಯುನಿಕ್ ಲುಕ್ ನೀಡುತ್ತದೆ.

ಇದರ ಬಾಡಿ ಡಿಸೈನಿನಲ್ಲಿ ಇದರ ಹಿಂಭಾಗದಲ್ಲಿ ನಿಮಗೆ ಎರಡು ಲೆನ್ಸ್ಗಳುಳ್ಳ ಕ್ಯಾಮೆರಾ ಒಂದರ ಕೆಳಗೊಂದು ಸೆಟ್ ಆಗಿದ್ದು ಫಿಂಗರ್ಪ್ರಿಂಟ್ ಸೆನ್ಸರಿನೊಂದಿಗೆ ಸಿಂಗಲ್ LED ಫ್ಲಾಶನ್ನು ಸಹ ಒಳಗೊಂಡಿದೆ. ಇದರ ಫ್ರಂಟ್ ಫೇಸ್ ಬಗ್ಗೆ ಹೇಳಬೇಕೆಂದರೆ ಶಾರ್ಪ್ ಮತ್ತು ಡಿಸೆಂಟ್ ಲುಕ್ ನೀಡುತ್ತದೆ. ಇದರ ಫ್ರಂಟಲ್ಲಿ ನಿಮಗೆ ಹಲವಾರು ರೀತಿಯ ಸೆನ್ಸರ್ಗಳನ್ನು ನೀಡಲಾಗಿದೆ. LED ನೋಟಿಫಿಕೇಶನ್ ಲೈಟ್, ನೋಯಿಸ್ ಕ್ಯಾನ್ಸಲೇಶನ್ ಸೆನ್ಸರ್ ಹೊಂದಿದೆ.

ಇದರ ಲೆಫ್ಟ್ ಸೈಡಲ್ಲಿ ನಿಮಗೆ ಹೆಚ್ಚು ಕಡಿಮೆ ಮಾಡಲು ವಾಲ್ಯೂಮ್ ಬಟನ್ಗಳನ್ನು ನೀಡಿದ್ದು ಎರಡು ಸ್ಲೋಟ್ಗಳನ್ನು ಸಹ ನೀಡಲಾಗಿದೆ. ಇದರಲ್ಲಿ ನಿಮಗೆ ಒಂದು ಮೈಕ್ರೋ SD ಕಾರ್ಡ್ ಬಳಸುವುದಕ್ಕಾಗದ್ರೆ ಮತ್ತೊಂದರಲ್ಲಿ ಎರಡು ಸಿಮ್ಗಳನ್ನು ಬಳಸಬವುದು. ಇದರ ಕೆಳಭಾಗದಲ್ಲಿ ನಿಮಗೆ ಮೈಕ್ರೋಫೋನ್ ಮತ್ತು ಮೈಕ್ರೋ USB ಪೋರ್ಟ್ ಜೋತೆಯಲ್ಲಿ 3.5mm ಆಡಿಯೋ ಜಾಕನ್ನು ಹೊಂದಿದೆ. ಈ ಹೊಸ Samsung Galaxy A6+ ನಿಮಗೆ 6 ಇಂಚಿನ 18:9 ಸೂಪರ್ AMOLED ಡಿಸ್ಪ್ಲೇಯಲ್ಲಿ 1080 X 2220 ರೆಸುಲ್ಯೂಷನ್ ಹೊಂದಿದೆ.

ಅಲ್ಲದೆ ಇದು ಪ್ರತಿ ಇಂಚಿಗೆ 411p ಡೆನ್ಸಿಟಿಯನ್ನು ಹೊಂದಿದೆ. ಇದರ ಡಿಸ್ಪ್ಲೇ ವೈಬ್ರಾಂಟ್ ಸಾಗಾಗುವಷ್ಟು ಬ್ರೈಟ್ನೆಸನ್ನು ಹೊಂದಿದೆ. ಇದರಲ್ಲಿ ನಮಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 450 ಚಿಪ್ಸೆಟಿನೊಂದಿಗೆ 4GB RAM ಮತ್ತು 64GB ಯ ಸ್ಟೋರೇಜ್ ನಿಮಗೆ ನಿಮಗೆ ಅದ್ಭುತವಾದ ಅನುಭವ ನೀಡುತ್ತದೆ. ಇದರಲ್ಲಿ ಲೈಟ್ ಆಕ್ಷನ್ ಗೇಮ್ಗಳು ನಿಜಕ್ಕೂ ಉತ್ತಮವಾಗಿ ಆಡಬವುದು. ಏರ್ಫೋರ್ಸ್ ಸ್ಟಾರ್ಟ್ ಮಾಡುವಾಗ ಯಾವುದೇ ರೀತಿಯ ಅಡಚನಗೆಯಿಲ್ಲದೆ ಸ್ವಾಗತಿಸುತ್ತದೆ. ಈ  ಅನುಭವ ನನಗೆ Asphalt 8 ಗೇಮಲ್ಲು ಸಹ ತೋರಿತ್ತು. ಅಲ್ಲದೆ ಯಾವುದೇ ರೀತಿಯ ಬಿಸಿಯಾಗುವ ಭಾಷಾವಾಗುವುದಿಲ್ಲ.

Samsung Galaxy A6+ ಯ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಇದರ ಬ್ಯಾಕಲ್ಲಿ ನಿಮಗೆ 16+5MP ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರ ಮತ್ತೋಂದು ವಿಶೇಷತೆಯೆಂದರೆ ಇದರ ಫ್ರಂಟ್ ನಿಮಗೆ 24MP ಕ್ಯಾಮೆರಾ LED ಫ್ಲಾಶ್ ಸಹ ಹೊಂದಿದೆ.  ಇದರಲ್ಲಿ ನಿಮಗೆ ಮೂರು ಹೊಸ ರೀತಿಯ ಕ್ಯಾಮೆರಾ ಸೆಟಪನ್ನು ಈ ಫೋನ್ ಒಳಗೊಂಡಿದೆ ಅವೆಂದ್ರೆ ಲೈವ್ ಫೋಕಸ್ ಇದರಲ್ಲಿ ಮುಂದಿರುವ ಯಾವುದೇ ವಸ್ತುವಿನ ಮೇಲೆ ಡೈರೆಕ್ಟ್ ಫೋಕಸ್ ಮಾಡಿ ಸ್ಪೆಷಲ್ ಬೋಕೆ ಎಫೆಕ್ಟ್ ನೀಡುತ್ತದೆ.

 

ಇದರ ಮತ್ತೋಂದು ಮೂಡ್ ಸ್ಟಿಕರ್ ಮೂಡ್ ಇದರಲ್ಲಿ ನೀವು ಫನೀ ಇಮೇಜ್ಗಳನ್ನು ಪಡೆಯಬವುದು. ಅಂದ್ರೆ ನೀವು ಅನಿಮೇಟೆಡ್ ಸ್ಟಿಕರ್ಗಳನ್ನು ನಿಮ್ಮ ನಾರ್ಮಲ್ ಪಿಕ್ಗಳೊಂದಿಗೆ ಪಡೆಯಬವುದು. ಇದರ ಕೊನೆಯ ಮೂಡ್ ಬಿಕ್ಸ್ಬಿವಿಷನ್. ಇದು ನೈಜ ಪ್ರಪಂಚದ ವಸ್ತುಗಳ ಮೇಲೆ ಪಾಯಿಂಟ್ಮ ಮಾಡುತ್ತದೆ ಮತ್ತು ಸ್ಯಾಮ್ಸಂಗ್ನ ವಾಸ್ತವ ಅಸ್ಸಿಸ್ಟಂಟ್ ಸರ್ಚ್ ಆನ್ಲೈನ್ನಲ್ಲಿ ನಿಮಗೆ ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ನೀಡುತ್ತದೆ. ಈ Samsung Galaxy A6+ ಫೋನಲ್ಲಿ ನಿಮಗೆ 3500mAh ಬ್ಯಾಟರಿಯೊಂದಿಗೆ ಬರುತ್ತದೆ. ಅಲ್ಲದೆ ಈ ಹೊಸ Samsung Galaxy A6+ ನಲ್ಲಿ ನಿಮಗೆ ಫಾಸ್ಟ್ ಚಾರ್ಜಿಂಗನ್ನು ನೀಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :