ಹೊಚ್ಚ ಹೊಸ OnePlus 6 ಮತ್ತು Honor 10 ಫೋನ್ಗಳ ಡಿಸ್ಪ್ಲೇಯ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

Updated on 30-May-2018

ಸ್ನೇಹಿತರೇ ಇವತ್ತು ನಾನು ಸುಮಾರು 40,000 ರೂಗಳೊಳಗಿನ ಬರುವ ಅತ್ಯ್ತುತ್ತಮವಾದ ಎರಡು ಫೋನ್ ಅಂದ್ರೆ OnePlus 6 ಮತ್ತು Honor 10 ಫೋನಿನ ಡಿಸ್ಪ್ಲೇಗಳ ಸಂಪೂಣವಾದ ಹೋಲಿಕೆ ಮತ್ತು ವಿವರಣೆ ನೋಡೋಣ. ಈ ಎರಡು ಫೋನ್ಗಳಲ್ಲಿ ಹಲವಾರು ರೀತಿಯ ವ್ಯತ್ಸಾಸಗಳನ್ನು ನೋಡಬವುದು ಆದರೆ ಇಂದು ನಾವು ಮುಖ್ಯವಾಗಿ ಇವುಗಳ ಡಿಸ್ಪ್ಲೇ ಬಗ್ಗೆ ಮಾತನಾಡೋಣ

ಇವೇರಡು ಫೋನ್ಗಳು 19:9 ಅಸ್ಪಾಟ್ ರೇಷುಗಳೊಂದಿಗೆ ಬರುತ್ತವೆ. ಅದರಲ್ಲೂ OnePlus 6 ಇದು 6.2 ಇಂಚಿನ ಅನ್ ಆಪ್ಟಿಕ್ ಆಮ್ಯುಲೇಟ್ ಪ್ಯಾನಲ್ ಡಿಸ್ಪ್ಲೇಯೊಂದಿಗೆ ಬಂದರೆ Honor 10 ಇದು 5.84 ಇಂಚಿನ FHD+ LCD IPS ಡಿಸ್ಪ್ಲೇಯೊಂದಿಗೆ ಮೂಡಿ ಬರುತ್ತದೆ. ಇದರ ಅನುಕೂಲತೆಗಳೆಂದರೆ ಆಮ್ಯುಲೇಟ್ ಮತ್ತು IPS ಬಗ್ಗೆ ಸಾಮಾನ್ಯವಾಗಿ ತಿಳಿದಿರುವಂತೆ ಆಮ್ಯುಲೇಟ್ ಡಿಸ್ಪ್ಲೇಯ ಬ್ಯಾಟರಿ ಲೈಫಿಗೆ ಬೆಟರ್ ಆದರೆ IPS ಕಲರ್ ಹ್ಯಾಕುರಿಸಿಗೆ ಬೆಟರ್ ಆಗಿದೆ. ಆದರೂ ಒಟ್ಟಾರೆಯಾಗಿ ಮತ್ತೆ ಇದ್ರಲ್ಲೂ ನಿಮ್ಮ ಆಯ್ಕೆ ಯಾವುದು ಬೆಸ್ಟ್ ಅಂತ ಪರಿಗಣಿಸಿ ಕಾಮೆಂಟ್ ಮಾಡಬವುದು.

ಇವೇರಡು ಫೋನ್ಗಳು FHD+ ಅನ್ನು ಸಪೋರ್ಟ್ ಮಾಡುತ್ತೇ ಅಂದ್ರೆ 1080×2280 ಇದು ಇವೇರಡರಲ್ಲೂ ಒಂದೇ ರೀತಿಯ ರೆಸೊಲ್ಯೂಷನನ್ನು ನೀಡುತ್ತವೆ. ಆದರೆ ಇವುಗಳ ಇದರ ಪಿಕ್ಸೆಲ್ ಡೆನ್ಸಿಟಿಯಲ್ಲಿ ಕೊಂಚ ಬದಲಾಣೆಯಿದೆ. OnePlus 6 ನಿಮಗೆ 402ppi ಪಿಕ್ಸೆಲ್ ಡೆನ್ಸಿಟಿ ನೀಡಿದರೆ Honor 10 ನಿಮಗೆ 432ppi ಪಿಕ್ಸೆಲ್ ಡೆನ್ಸಿಟಿಯನ್ನು ನೀಡುತ್ತದೆ.

OnePlus 6 ನಿಮಗೆ ವೈಡ್ DCI-P3 ಕಲರ್ ಪ್ರೊಫೈಲ್ ಸಪೋರ್ಟ್ ಮಾಡುತ್ತದೆ. ಆದರೆ Honor 10 ಕೇವಲ SRGB ಯನ್ನು ಸಪೋರ್ಟ್ ಮಾಡುತ್ತೇ. ಇದನ್ನು ಹೊರೆತುಪಡಿಸಿ ಇವೇರಡು ಫೋನ್ಗಳು HDR ವೀಡಿಯೋವನ್ನು ಬೆಂಬಲಿಸುತ್ತದೆ. ಮತ್ತು OnePlus 6 ಫ್ರಂಟ್ ಮತ್ತು ಬ್ಯಾಕಲ್ಲಿ Corning’s Gorilla Glass 5 ಅನ್ನು ಹೊಂದಿದ್ದು ಸ್ಕ್ರೀನ್ ಪ್ರೊಟೆಕ್ಟರ್ ಜೋತೆ ಬರುತ್ತದೆ. ಆದರೆ Honor 10 ಯಾವುದೇ ಸ್ಕ್ರೀನ್ ಪ್ರೊಟೆಕ್ಟರ್  ಹೊಂದಿಲ್ಲ ಮತ್ತು ಹಾನರ್ ಇನ್ನು ಯಾವ ಗ್ಲಾಸ್ ಬಳಸುತ್ತಿದೆ ಬಹಿರಂಗ ಪಡಿಸಿಲ್ಲ.

Honor 10 ಯಾರ ಕೈ ಸಣ್ಣಗಿದೆಯೋ ಅವರು ಬಳಸಬವುದು ಅಂದ್ರೆ ಇದನ್ನು ನೀವು ಒಂದೇ ಕೈಯಲ್ಲಿ ಆರಾಮಾಗಿ ಬಳಸಬವುದು. ಇದು ಕೇವಲ 2.8 ಇಂಚಿನ ವೆಡ್ತನ್ನು ಹೊಂದಿದೆ. ಆದರೆ OnePlus 6 ನಿಮಗೆ ಪೂರ್ತಿ 3 ಇಂಚಿನ ವೆಡ್ತನ್ನು ಹೊಂದಿಕೊಂಡು ಬರುತ್ತದೆ. ಆಮ್ಯುಲೇಟ್ ಒಂದೇ ಕೈಯಲ್ಲಿ ಕುರಿಸಿಕೊಳ್ಳುವುದು ಕೊಂಚ ಕಷ್ಟವೇ ಸರಿ.

ಈಗ ಇವುಗಳ ಸನ್ ಲೈಟ್ ಬಳಕೆ ಬಗ್ಗೆ ಮಾತನಾಡೋಣ ಇದು ನಿಜಕ್ಕೂ ಹೆಚ್ಚು ಆಶ್ಚರ್ಯಕರವೇ ಸರಿ ಹೊರಗಡೆ ಸೂರ್ಯನ ಬೆಳಕಿನಲ್ಲಿ ಎರಡು ಅತ್ಯುತ್ತಮವಾದ ಕಲರ್ ಬ್ಯಾಲೆನ್ಸ್ ನೀಡಿ ಕುತೂಹಲ ಕೆರಳಿಸಿದೆ. ಇವೇರಡಲ್ಲೂ ನೀವು ಆರಾಮಾಗಿ ಹೆಚ್ಚಿನ ಸೂರ್ಯ ಬೆಳಕಲ್ಲು ಬ್ರೌಸಿಂಗ್ ಮತ್ತು ವೀಡಿಯೋವನ್ನು ಯಾವುದೇ ತೊಂದರೆ ಇಲ್ಲದೆ ನೋಡಬವುದು. ಇವುಗಳ ಬಳಕೆಯ ನಂತರ ಯಾವುದು ಕಳಪೆಯೆಂದು ಹೇಳಲು ಕಷ್ಟವಾಗಬವುದು.

ಇವೇರಡು ಫೋನ್ಗಳು ಗೆಸ್ಟರ್ ನ್ಯಾವಿಗೇಷನ್ಗಳೊಂದಿಗೆ ಬರುತ್ತವೆ.ಇದು ನ್ಯಾಚುರಲಿ ಎರಡಲ್ಲೂ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆಂದು ಇಲ್ಲಿ ನೋಡಬವುದು. ಇದು ನಿಜಕ್ಕೂ ಮತ್ತೋಂದು ಆಶ್ಚರ್ಯ ಎನ್ನಬವುದು ಇವೇರಡು ಫೋನ್ಗಳಲ್ಲಿ ಭಾರಿ ಪ್ರಮಾಣದ ಗೆಸ್ಟರ್ಗಳನ್ನು ಮೃದುವಾಗಿ ನಡೆಸುತ್ತವೆ.          
           
ಒಟ್ಟಾರೆಯಾಗಿ ಇವೇರಡು ಫೋನ್ಗಳ ಡಿಸ್ಪ್ಲೇಗಳು ಅದ್ಭುತವಾಗಿ ತಯಾರಾಗಿಸಲಾಗಿದೆ. Honor 10 LCD IPS ಡಿಸ್ಪ್ಲೇ ನಿಮಗೆ ಹೆಚ್ಚು ಕಲರ್ ಹ್ಯಾಕುರಿಸಿಯೊಂದಿಗೆ SRGB ಅನ್ನು ಬೆಂಬಲಿಸಿ ಯಾವುದೇ ರೀತಿಯ ಬರ್ನ್ ಆಗುವಂತಹ ಅನುಭವ ನೀಡುವುದಿಲ್ಲ. ಮತ್ತೊಂದೆಡೆ OnePlus 6 ಭಾರಿ ಗಾತ್ರ ಡಿಸ್ಪ್ಲೇಯೊಂದಿಗೆ ಇದನ್ನು ಆಪರೇಟ್ ಮಾಡೋಕ್ಕೆ ಎರಡು ಕೈಗಳನ್ನು ಬಳಸಬೇಕಾಗುತ್ತದೆ. ಆದರೂ ಇದು ಗೇಮಿಂಗ್ ಮತ್ತು ವೀಡಿಯೊ ವೀಕ್ಷಕರಿಗೆ ಹೆಚ್ಚು ಮೆಚ್ಚುಗೆಯಾಗುತ್ತದೆ.

ಹಾನರಿನ ಆಮ್ಯುಲೇಟ್ ಪ್ಯಾನಲಲ್ಲಿ DCI-P3 ಕಲರ್ ಪ್ರೊಫೈಲ್ ಅಂದ್ರೆ ಇದರ ನೈಜ ಬಣ್ಣದಿಂದ ಹೆಚ್ಚು ಬಣ್ಣಗಳನ್ನು ತೋರುತ್ತದೆ.  ಇದರ ಡಿಸ್ಪ್ಲೇ ಬಗ್ಗೆ ಹೇಳಬೇಕಾದರೆ ಎರಡು ಸರಿಸಮನಾಗಿವೆ. ಕೊನೆಯದಾಗಿ ಇವೇರಡು ಫೋನ್ಗಳು ಅತ್ಯುತ್ತಮವಾಗಿದ್ದು Honor 10 ಒಂದೇ ಕೈಯಲ್ಲಿ ಬಳಸುವವರಿಗಾದರೆ OnePlus 6 ಇದು ನಿಮ್ಮ ಆಯ್ಕೆಯಾಗಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram  ಮತ್ತು  YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :