ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗಲಿರುವ ಬಣ್ಣ ಬಣ್ಣದ ನೋಕಿಯಾ 3310 3G ರೂಪಾಂತರವು ಹೆಚ್ಚಿನ ಸ್ಟೋರೇಜ್ ಮತ್ತು ಕಸ್ಟಮೈಸ್ ಅನ್ನು ಒದಗಿಸುತ್ತದೆ.
ನೋಕಿಯಾ ತನ್ನ ಹೊಸ ರೂಪಾಂತರದ 3310 3Gಯೂ ಹೊಸ UI ಜೊತೆಗಿನ 3G ಸಂಪರ್ಕವನ್ನು ನೀಡುತ್ತದೆ. ಇದರ ಬಳಕೆದಾರರು ಇದೀಗ ಇದನ್ನು ವಿಭಿನ್ನ ಬಣ್ಣದ ಥೀಮ್ಗಳಲ್ಲಿ ಆಯ್ಕೆ ಮಾಡಬಹುದು. ಮತ್ತು 3G ರೂಪಾಂತರವು ಅದರ 2G ಆವೃತ್ತಿಗಿಂತ 13.29 ರಷ್ಟು ದೊಡ್ಡದಾಗಿರುತ್ತದೆ ಎಂದು ಕಂಪನಿಯು ಹೇಳಿಕೆ ನೀಡಿದೆ.
ನೋಕಿಯಾ 3310 ಫೀಚರ್ ಫೋನ್ನ 3G ರೂಪಾಂತರವನ್ನು ಅದರ HMD ಗ್ಲೋಬಲ್ ಈಗ ಪ್ರಾರಂಭಿಸಿದೆ. ಈ ಮೊಬೈಲ್ ಫೋನನ್ನು ಭಾರತದಲ್ಲಿ ಬರುವ ಮೇ ತಿಂಗಳಲ್ಲಿ 3,310/- ರೂ ಗಳಿಗೆ ಬಿಡುಗಡೆ ಮಾಡಲಾಯಿತು. ಮತ್ತು ಇದು ಸದ್ಯಕ್ಕೆ 2G ಯಾ ಸಂಪರ್ಕವನ್ನು ಮಾತ್ರ ಬೆಂಬಲಿಸಿತು. HMD ಗ್ಲೋಬಲ್ನ ಇದು ಮುಖ್ಯವಾಗಿದೆ ಎಂದು ಉತ್ಪನ್ನ ಅಧಿಕಾರಿ "ಜುಹೋ ಸರ್ವಿಕಾಸ್ ಟ್ವಿಟರ್ನಲ್ಲಿ ಹೊಸ ಫೋನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ MWC ಬಾರ್ಸಿಲೋನಾದಲ್ಲಿ ಮರುಕಳಿಸುವ ಫೋನನ್ನು HMD ಗ್ಲೋಬಲ್ ಬಿಡುಗಡೆಗೊಳಿಸಲಿದೆ. ನೋಕಿಯಾ 3310 3G ಇದರ ರೂಪಾಂತರವು ಸದ್ಯಕ್ಕೆ 69 ಯುರೋಗಳಷ್ಟು (5,322 ರೂ.ಅಂದಾಜು) ಇದರ ಬೆಲೆಯಾಗಬವುದು. ಕೆಲ ಸುದ್ದಿಗಳ ಪ್ರಕಾರ ಇದು ಇದೆ ಅಕ್ಟೋಬರ್ ಮಧ್ಯಭಾಗದಿಂದ ಹೊರಬರಲಿದೆ ಎಂದು ಕೇಳಿಬರುತ್ತಿದೆ. ಆದರೂ ಸದ್ಯಕ್ಕೆ ಇನ್ನೂ ಭಾರತಕ್ಕೆ ಬಿಡುಗಡೆಯಾ ಮತ್ತು ಲಭ್ಯತೆಯಾ ವಿವರಗಳ ಬಗ್ಗೆ ಯಾವುದೇ ಮಾತುಗಳಿಲ್ಲ.
ಹೊಸ ನೋಕಿಯಾ 3310ಯೂ ಸದ್ಯಕ್ಕೆ ಹೊಸದಾಗಿ ಅಜುರೆ ಮತ್ತು ಚಾರ್ಕೋಲ್ ಎಂಬ ಎರಡು ಹೊಸ ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಈಗಾಗಲೇ ಲಭ್ಯವಿರುವ ವಾರ್ಮ್ ರೆಡ್, ಹಳದಿ, ಗಾಢ ನೀಲಿ ಮತ್ತು ಗ್ರೇ ಬಣ್ಣದ ರೂಪಾಂತರಗಳು ಹೊರತುಪಡಿಸಿ. 3G ಯಾ ರೂಪಾಂತರವು ಕೀಪ್ಯಾಡ್ ಗುಂಡಿಗಳು ಮತ್ತು UI ನಡುವೆ ಹೆಚ್ಚು ಅಂತರವನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ಹೊಸ ವಿಷಯಗಳನ್ನು ಮತ್ತು ಒಳ್ಳೆ ಸ್ಥಾನದ ಐಕಾನ್ಗಳನ್ನು ಬಯಸುವಂತೆ ಆಯ್ಕೆ ಮಾಡಲು ಅನುಮತಿಸುತ್ತದೆ.
ಹೊಸ ನೋಕಿಯಾ 3310 ಇದು 2.4 ಇಂಚಿನ QVGA ಯಾ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಇಂಟರ್ನಲ್ ಸ್ಟೋರೇಜ್ 32MB ಯಿಂದ 64MB ವರೆಗೆ ಹೆಚ್ಚಿಸಬಹುದು. ಅಲ್ಲದೆ ಮೈಕ್ರೊ SD ಕಾರ್ಡ್ ಬಳಸಿ 32GB ವರೆಗೆ ವಿಸ್ತರಿಸಬಹುದು. ನೋಕಿಯಾ 3310 ಇದರ 1200mAh ಬ್ಯಾಟರಿಯಿಂದ ಚಾಲಿತವಾಗಿದ್ದು HMD ಸುಮಾರು 25 ದಿನಗಳ ಸ್ಟಾಂಡ್ ಬೈ ಸಮಯವನ್ನು ಮತ್ತು 22 ಗಂಟೆಗಳ ಟಾಕ್ ಟೈಮನ್ನು ಒದಗಿಸಬಹುದು. ಇದು 115.6 x 51.0 x 12.8mm ಮತ್ತು ಬ್ಯಾಟರಿಯೊಂದಿಗೆ 80 ಗ್ರಾಂ ತೂಕದಲ್ಲಿರುತ್ತದೆ. ನೋಕಿಯಾ 3310 LED ಫ್ಲ್ಯಾಷ್ನೊಂದಿಗೆ 2MP ಬ್ಯಾಕ್ ಕ್ಯಾಮರಾವನ್ನು ಹೊಂದಿದೆ. ಇದು LED ಟಾರ್ಚ್ಲೈಟ್ನಂತೆ ದುಪ್ಪಟ್ಟಾಗುತ್ತದೆ. ಇದು 49 ಗಂಟೆಗಳ MP3 ಪ್ಲೇಬ್ಯಾಕ್ ಜೊತೆ ಜೊತೆಗೆ FM ರೇಡಿಯೊ ಪ್ಲೇಬ್ಯಾಕ್ನೊಂದಿಗೆ 39 ಗಂಟೆಗಳವರೆಗೆ ನಿಮಗೆ ಒಳ್ಳೆಯ ಅನುಭವವನ್ನು ಪ್ರತಿದಿನ ನೀಡುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile