ಇದು ಹೊಚ್ಚ ಹೊಸ Honor 10 ಮತ್ತು OnePlus 6 ಫೋನಿನ ಸಂಪೂರ್ಣವಾದ ವಿನ್ಯಾಸದ ಹೋಲಿಕೆ.

Updated on 05-Jun-2018
HIGHLIGHTS

ಹೊಸ Honor 10 ಕೇವಲ 32,999 ರೂಗಳಲ್ಲಿ ಲಭ್ಯವಾದರೆ OnePlus 6 ಕೇವಲ 34,999 ರೂಗಳಲ್ಲಿ ಲಭ್ಯವಿದೆ.

ಇವತ್ತು ಎರಡು ದೊಡ್ಡ ಸ್ಮಾರ್ಟ್ಫೋನ್ ಕಂಪನಿಗಳಾದ OnePlus ಮತ್ತು Honor ಸ್ಮಾರ್ಟ್ಫೋಗಳ ಬಗ್ಗೆ ಮಾತನಾಡೋಣ ಇವು ಪ್ರತಿವರ್ಷ ಒಂದೇ ಸಮಯದಲ್ಲಿ ಬಿಡುಗಡೆ ಮಾಡುತ್ತವೆ. ಈ ವರ್ಷ OnePlus 6 ಮತ್ತು Honor 10 ಬಿಡುಗಡೆ ಮಾಡಿವೆ ನಾನು ಇವುಗಳ ಹಲವಾರು ರೀತಿಯ ಹೋಲಿಕೆಯನ್ನು ನೀಡಿದ್ದೇನೆ ಇವತ್ತು ಇದರ ಡಿಸೈನ್ ಅಂದ್ರೆ ಇವುಗಳ ವಿನ್ಯಾಸದ ಮೇಲೆ ಯಾವುದು ಬೆಟರ್ ಅನ್ನೋದನ್ನ ಹೋಲಿಕೆ ಮಾಡಿ ನೋಡೋಣ.

ಮೊದಲಿಗೆ OnePlus 6 ಮತ್ತು Honor 10 ಎರಡು ಗ್ಲಾಸ್ ಬ್ಯಾಕ್ ಹೊಂದಿದ್ದು ಕೈಯಲ್ಲಿ ಎರಡು ಡೀಫ್ಫ್ರೆಂಟ್ ಫೀಲ್ ನೀಡುತ್ತವೆ. ಆದರೆ ನಮಗೆ ಇಲ್ಲಿ ಯಾವುದು ಒಳ್ಳೆ ಫೀಲ್ ನೀಡುತ್ತೆ ಅನ್ನೋದು ಮುಖ್ಯವಲ್ಲ. ಈ ಎರಡು ಫೋನ್ಗಳ ಬ್ಯಾಕ್ ಮೆಟಲ್ ಫ್ರೆಮ್ ಮೂಲಕ ಕರ್ವ್ ಆಗಿದೆ ಆದರೆ ಇದರ ಕವೇಚರ್ ಬೇರೆ ಬೇರೆಯಾಗಿದೆ. ನಿಮಗೆ OnePlus 6 ನಲ್ಲಿ ಫ್ರಂಟ್ ಮತ್ತು ಬ್ಯಾಕ್ ಎರಡು ಬದಿಗಳಲ್ಲೂ ಗೊರಿಲ್ಲಾ ಗ್ಲಾಸ್ 5 ನೀಡಿದರೆ Honor 10 ತನ್ನಲ್ಲಿ ಯಾವ ಗ್ಲಾಸ್ ಬಳಸಿದೆಯೆಂದು ಇನ್ನು ಬಹಿರಂಗಪಡಿಸಿಲ್ಲ ಆದರೂ ಕೆಲ ವರದಿಗಳ ಪ್ರಕಾರ ಗೊರಿಲ್ಲಾ ಗ್ಲಾಸ್ ಎಂದು ಸೂಚಿತವಾಗಿದೆ.

ಇದರ ನಂತರ ಇವುಗಳ ಮತ್ತೋಂದು ವಿಶೇಷತೆಯೆಂದರೆ ಇವುಗಳ ಕಲರ್ ಸಂರಚನೆ. OnePlus 6 ಮಾರ್ವೆಲ್ ಅವೆಂಜರ್ಸ್ ಎಡಿಷನ್ ಜೋತೆಯಲ್ಲಿ ಕೇವ್ಲರ್ ಪ್ಯಾಟರ್ನ್ ಕೆಳಗೆ ಮಿರರ್ ಬ್ಲಾಕ್ ಕೂಡಿಸಿ ರಚಿಸಿದರೆ Honor 10 ಫ್ಯಾಂಟಮ್ ಬ್ಲೂ ರಚನೆಯನ್ನು ಹೊಂದಿದೆ. ಈ ವರ್ಷದ ಈ ಹೊಸ Honor 10 ತನ್ನ ಬ್ಯಾಕ್ ಪ್ಯಾನಲ್ ಮೂಲಕ ನಿಮ್ಮ ಕಣ್ಣುಗಳನ್ನು ಹಿಡಿದಿರುತ್ತದೆ. ಏಕೆಂದರೆ ಇದರ ಅರೋರಾ ಗ್ಲಾಸ್ ವಿನ್ಯಾಸ ಹೊಸ ವಿನ್ಯಾಸದೊಂದಿಗೆ ಪ್ರತಿಬಿಂಬಿಸುತ್ತದೆ. ಅಲ್ಲದೆ ಇದೊಂದು ಅದ್ಭುತ ರೀತಿಯಲ್ಲಿ ಬೆಳಕನ್ನು ಪುನರಾವರ್ತಿಸುತ್ತದೆ.

ಇದರ ಬ್ಯಾಕ್ ಬೆಳಕಿನ ಸಮ್ಮೋಹನಗೊಳಿಸುವ ಚೂರುಗಳನ್ನು ಇದು ರಚಿಸುತ್ತದೆ. ಆದರೆ OnePlus 6 ಇಂಥ ಯಾವುದೇ ಪರಿಣಾಮವನ್ನು ಹೊಂದಿಲ್ಲ ಇದು ಒಂದು ಸೊಗಸಾದ ವಿನ್ಯಾಸವನ್ನು ನೀಡುತ್ತದೆ. 
VO4: ಈಗ ಈ ಇವುಗಳ ಡ್ಯೂಯಲ್ ಕ್ಯಾಮರಾ ಮಾಡ್ಯೂಲ್ಗಳನ್ನು ವಿಭಿನ್ನವಾಗಿ ನೀಡಿದ್ದಾರೆ. Honor 10 ಮೇಲಿನ ಎಡ ಭಾಗದ ಮೂಲೆಯಲ್ಲಿ (ಅಂದ್ರೆ Horizontally) ಆಕಾರದಲ್ಲಿ ನೀಡಿದರೆ OnePlus 6 ತನ್ನ ಕ್ಯಾಮೆರಾವನ್ನು ಲಂಬವಾಗಿ (ಅಂದ್ರೆ Vertically) ಆಕಾರದಲ್ಲಿ ಇರಿಸಲಾಗುತ್ತದೆ ಜೋತೆಯಾಗಿ ಇದರ ಬ್ಯಾಕಲ್ಲಿ ರೌಂಡಾಗಿ ಆಯಾತಾಕಾರದಲ್ಲಿ ಫಿಂಗರ್ಪ್ರಿಂಟ್ ಸೆನ್ಸರನ್ನು ನೀಡಿದೆ. ಆದರೆ  Honor 10 ಬ್ಯಾಕಲ್ಲಿ ಯಾವುದೇ ಫಿಂಗರ್ಪ್ರಿಂಟ್  ಸೆನ್ಸರ್ ಇಲ್ಲ.

ಇವುಗಳ ಎತ್ತರ ಮತ್ತು ಅಗಲ ಎರಡರಲ್ಲು ವ್ಯತ್ಸಾಸವಿದೆ ಏಕೆಂದರೆ OnePlus 6 ನಿಮಗೆ 6.28 ಇಂಚಿನ ಡಿಸ್ಪ್ಲೇಯೊಂದಿಗೆ ಬಂದ್ರೆ Honor 10 ಪೂರ್ತಿ 5.84 ಇಂಚುಗಳ ಡಿಸ್ಪ್ಲೇಯನ್ನು ಹೊಂದಿದೆ. ಇವೇರಡು 19: 9 ಆಸ್ಪೆಕ್ಟ್ ರೇಷುವನ್ನು ಅನುಸರಿಸುತ್ತವೆ. OnePlus 6 ಗಮನಾರ್ಹವಾಗಿ ಕಿರಿದಾದ ಹೊಂದಿದೆ. ಹಾನರ್ 10 ಗೆ ಹೋಲಿಸಿದರೆ ಬೆಝೆಲ್ಗಳು ಮತ್ತು ತೆಳ್ಳಗಿನ ಗದ್ದಿಯೂ ಸಹ ಇವೆ, ಆದ್ದರಿಂದ ನೀವು ಎಲ್ಲಾ ಅಂಚಿನ ಉಚಿತ ಫಾರ್ಮ್ ಫ್ಯಾಕ್ಟರನ್ನು OnePlus 6 ನಿಮಗೆ ಹೆಚ್ಚು ಸಲಹೆ ಮಾಡುತ್ತದೆ. Honor 10 ಗಾಜಿನ ಅಡಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸರನ್ನು ಹೊಂದಿದೆ. ಈ ರೀತಿಯ ಫಿಂಗರ್ಪ್ರಿಂಟ್ ಸೆನ್ಸರನ್ನು ಮೊದಲ ಬಾರಿಗೆ ಸ್ಮಾರ್ಟ್ಫೋನ್ಗೆ ಮಾಡಿದೆ.

ಒಟ್ಟಾರೆಯಾಗಿ ಇವೇರಡು ಅತ್ಯತ್ತಮವಾದ ಫೋನ್ಗಳು. ನಿಗೊಂದು ಕಲರ್ಫುಲ್ ಡಿಸೈನ್ ಫೋನ್ ಬೇಕಾದ್ರೆ Honor 10 ಬೆಸ್ಟ್ ಮತ್ತು ಒಂದು ಸೊಗಸಾದ ವಿನ್ಯಾಸದೊಂದಿಗೆ  ಅವೆಂಜರ್ಸ್ ಎಡಿಷನ್ ಬೇಕಾದ್ರೆ OnePlus 6 ಬೆಸ್ಟ್ ಸ್ನೇಹಿತರೆ ಎಂದಿನಂತೆ ನೀವು ಈ ಫೋನ್ಗಳ ಡಿಸೈನ್ ಹೋಲಿಕೆಯ ಮೇಲೆ ಕಾಮೆಂಟ್ ಮತ್ತು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :