ಭಾರ್ತಿ ಏರ್ಟೆಲ್ ಅದರ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ 'ಏರ್ಟೆಲ್ ಬಿಗ್ ಬೈಟ್ ಆಫರ್' ಅಡಿಯಲ್ಲಿ ಬೋನಸ್ ಡೇಟಾವನ್ನು ಪೂರ್ತಿ 1000GB ಯ ಡೇಟಾವನ್ನು ನೀಡುತ್ತಿದೆ. ಕಂಪನಿಯು ಈ ಪ್ರಸ್ತಾಪವನ್ನು ಮೇ 2017 ರಲ್ಲಿ ಪ್ರಾರಂಭಿಸಿತು ಮತ್ತು ಇದರ ಮಾನ್ಯತೆಯು 31ನೇ ಮಾರ್ಚ್ 2018 ವರೆಗಿತ್ತು ಆದರೆ ಮತ್ತೆ ಈಗ ಏರ್ಟೆಲ್ ಈ ಪ್ರಸ್ತಾಪದ ಮಾನ್ಯತೆಯನ್ನು ಅಕ್ಟೋಬರ್ 2018 ವರೆಗೆ ಹೆಚ್ಚಿಸಿದೆ.
ಈ ಪ್ರಸ್ತಾಪವನ್ನು ಪಡೆಯಲು ಬಳಕೆದಾರರು ಅಧಿಕೃತ ಏರ್ಟೆಲ್ ವೆಬ್ಸೈಟ್ಗೆ ಭೇಟಿ ನೀಡಿ ಬ್ರಾಡ್ಬ್ಯಾಂಡ್ ವಿಭಾಗವನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲಿ ಬಳಕೆದಾರರು ಇದರ ಯೋಜನೆ ಮತ್ತು ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯಂತಹ ತಮ್ಮ ಮಾಹಿತಿಯನ್ನು ನಮೂದಿಸಿ ಒಂದು ವೇಳೆ ಹೆಚ್ಚಿನ ಮಾಹಿತಿಗಾಗಿ ಬಳಕೆದಾರರು ಕಸ್ಟಮರ್ ಕೇರಿಗೆ ಕರೆ ಮಾಡಬಹುದು. ಇದನ್ನು ಸಕ್ರಿಯಗೊಳಿಸುವಿಕೆಯ ಬರಬರಿ ಏಳು ದಿನಗಳ ನಂತರ ಬಳಕೆದಾರರು ಈ ಬೋನಸ್ ಡೇಟಾವನ್ನು ಲಾಭ ಪಡೆಯಲು ಸಾಧ್ಯವಾಗುತ್ತದೆ.
ನಿಮ್ಮದೆಯಾದ ಬಜೆಟಿನಲ್ಲಿ ಇಂದಿನ ಬೆಸ್ಟ್ ಡೀಲ್ಗಳ ಸಂಪೂರ್ಣ ಮಾಹಿತಿ ಇಲ್ಲಿಂದ ಪಡೆಯಿರಿ.
ಪ್ರಸ್ತುತ ಕಂಪನಿಯು ದೆಹಲಿಯಲ್ಲಿ 1099 ಮತ್ತು 1299 ರೂಪಾಯಿಗಳ ಬೋನಸ್ ಡೇಟಾವನ್ನು ಒದಗಿಸುತ್ತಿದೆ. ಈ 1099 ಪ್ಲಾನಲ್ಲಿ ಬಳಕೆದಾರರು 250GB ಯ ಬ್ರಾಡ್ಬ್ಯಾಂಡ್ ಡೇಟಾವನ್ನು ಹೊಂದಿರುವ 1000GB ಬೋನಸ್ ಡೇಟಾವನ್ನು ಪಡೆಯುತ್ತಾರೆ. ಇದರರ್ಥ ಬಳಕೆದಾರರು ಒಟ್ಟು 1250GB ಡೇಟಾವನ್ನು ಪಡೆಯುತ್ತಾರೆ. ಅದೇ ರೀತಿಯಲ್ಲಿ 1299 ರೂಪಾಯಿಯ ಪ್ಲಾನಲ್ಲಿ ಬಳಕೆದಾರರು 350GB ಬ್ರಾಡ್ಬ್ಯಾಂಡ್ ಡೇಟಾದೊಂದಿಗೆ ತಿಂಗಳಿಗೆ 1000GB ಯ ಡೇಟಾವನ್ನು ಪಡೆಯುತ್ತಾರೆ.
ಬಳಕೆದಾರರಿಗೆ ಈ ಎರಡೂ ಯೋಜನೆಗಳಲ್ಲಿ ಪೂರ್ತಿ 100Mbps ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಒಂದು ವರ್ಷದ ಬಳಕೆದಾರರಿಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ ಹೆಚ್ಚುವರಿಯಾಗಿದ್ದು ಬಳಕೆದಾರರು ತಮ್ಮ ಬ್ರಾಡ್ಬ್ಯಾಂಡ್ ಖಾತೆಯನ್ನು ತಮ್ಮ ಏರ್ಟೆಲ್ ಪೋಸ್ಟ್ಪೇಯ್ಡ್ ಮತ್ತು ಡಿಜಿಟಲ್ ಟಿವಿ ಸಂಪರ್ಕಕ್ಕೆ ಸಂಪರ್ಕಿಸುವ ಮೂಲಕ ಹೆಚ್ಚುವರಿ ಇನ್ನು 10GB ಯ ಬ್ರಾಡ್ಬ್ಯಾಂಡ್ ಡೇಟಾ ಮತ್ತು 5GB ಯ ಮೊಬೈಲ್ ಡೇಟಾವನ್ನು ಪಡೆಯಬಹುದು.
ಅಂದ್ರೆ ಬಳಕೆದಾರರು ಉಚಿತ ಏರ್ಟೆಲ್ ಟಿವಿ ಚಂದಾದಾರಿಕೆಯನ್ನು ಪಡೆಯುತ್ತಾರೆ ಮತ್ತು ಬಳಕೆದಾರರು ಭಾರತದಾದ್ಯಂತ ಅನಿಯಮಿತ ಉಚಿತ ಕರೆಗಳ ಲಾಭವನ್ನು ಪಡೆದುಕೊಳ್ಳಬಹುದು. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.