digit zero1 awards

ಹೊಚ್ಚ ಹೊಸ Asus Zenfone 5Z ವಿಮರ್ಶೆಯೊಂದಿಗೆ ಇದರ ಬೆಸ್ಟ್ ಮತ್ತು ವರ್ಸ್ಟ್ ಫೀಚರ್ಗಳ ಸಂಪೂರ್ಣವಾದ ಮಾಹಿತಿ

ಹೊಚ್ಚ ಹೊಸ Asus Zenfone 5Z ವಿಮರ್ಶೆಯೊಂದಿಗೆ ಇದರ ಬೆಸ್ಟ್ ಮತ್ತು ವರ್ಸ್ಟ್ ಫೀಚರ್ಗಳ ಸಂಪೂರ್ಣವಾದ ಮಾಹಿತಿ
HIGHLIGHTS

ಆಗದ್ರೆ ಸ್ನೇಹಿತರೇ ಇವತ್ತು ಈ ಫೋನಿನ ಸಂಪೂರ್ಣವಾದ ವಿಮರ್ಶೆಯನ್ನು ನೋಡೋಣ.

ಇವತ್ತು ನಾವು ಅಸೂಸಿನ ಹೊಚ್ಚ ಹೊಸ Asus Zenfone 5Z ಬಗ್ಗೆ ಮಾತನಾಡೋಣ. ಇದು ಬಿಡುಗಡೆಯಾದಾಗ ಸ್ಮಾರ್ಟ್ಫೋನ್ ವಲಯ ಸ್ವಲ್ಪ ಶಾಕ್ ಆಗಿತ್ತು, ಯಾಕಪ್ಪ ಅಂದ್ರೆ ಇದು 85 ರಿಂದ 90 ಸಾವಿರದೊಳಗಿರುವ iPhone 10 ಮೂಡಿ ಬಂದಿದೆ. ಮತ್ತು ಇದರ ಬೆಲೆನು ಆಪಲ್ ಫೋನ್ಗಷ್ಟು ಆಗ್ಬವುದ ಅನ್ನೋವ ಮಾತು ಹೆಚ್ಚು ಕೇಳಿ ಬರುತ್ತಿತ್ತು. ಆಗದ್ರೆ ಸ್ನೇಹಿತರೇ ಇವತ್ತು ಈ ಫೋನಿನ ಸಂಪೂರ್ಣವಾದ ವಿಮರ್ಶೆಯನ್ನು ನೋಡೋಣ. 

ಮೊದಲಿಗೆ ಈ ವರ್ಷ ಅಸೂಸ್ ತನ್ನ ಹಲವಾರು ಫೋನ್ಗಳನ್ನು ಬಿಡುಗಡೆ ಮಾಡಿದೆ ಆದರೆ ಈ Asus Zenfone 5Z ಫೋನಿನ ಲುಕ್ ನಿಜಕ್ಕೂ iPhone 10 ನಂತೆಯೇ ರಚಿತಗೊಂಡಿದೆ. ಇದರಲ್ಲಿನ ನಾಚ್ ಮತ್ತು ಲಂಭಕಾರದ ಡ್ಯೂಯಲ್ ಕ್ಯಾಮೆರಾ ಫೋನಿನ ಬಲಭಾಗದಲ್ಲಿದ್ದು ಗ್ಲಾಸ್ ಬಾಡಿ ಮತ್ತು ಹೊಸ ಡಿಸ್ಪ್ಲೇ ನೀಡಿದ್ದು ಈ ವರ್ಷದ ಈ ಫೋನಲ್ಲಿ ಕೆಲವು ಹೊಸ ವಿಷಯಗಳನ್ನು ಗಮನಿಸಬವುದು. ಇದರ ಬಾಡಿ ಡಿಸೈನ್ ನೋಡಿದರೆ ಇದು ನಿಜಕ್ಕೂ ನಿಮ್ಮನ್ನು ಸೆಳೆಯುತ್ತದೆ.

https://static.digit.in/default/40597bf07e605d0e1c19ca1d86c78e2659fa88b9.jpeg

ಅಲ್ಲದೆ ಇದರ ಈ ಬ್ಯಾಕ್ ಲುಕ್ ಮ್ಯಾಗ್ನಟಿಕ್ ಫಿಂಗರ್ಪ್ರಿಂಟ್ ಸೆನ್ಸರೊಂದಿಗೆ ಇದನ್ನು ನೀವು ಮೋವ್ ಮಾಡಿದರೆ ಇದರ ಮೇಲೆ ಸಿಲ್ವರ್ ಬಣ್ಣದ ರೇಖೆಗಳು ಎದ್ದು ಕಾಣುತ್ತವೆ. ಅಲ್ಲದೆ ಈ ಫೋನ್ ಸಹ ಬೇರೆ ಫೋನ್ಗಳಂತೆ ಇದರ ಬ್ಯಾಕ್ ಹಿಡಿತ ಅಷ್ಟಾಗಿ ಉತ್ತಮವಾಗಿಲ್ಲ ಕೈಯಿಂದ ಜಾರುವ ಭಯ ನಿಜಕ್ಕೂ ನಿಮ್ಮನ್ನು ಕಾಡುತ್ತಿರುತ್ತದೆ. ಮತ್ತು ಕಡಿಮೆ ಮಾತ್ರದ ಮೆಟಲ್ ಯೂನಿಬೋಡಿ ಫೋನ್ ಇದಾಗಿದೆ.
ಇದರ ಫ್ರಂಟ್ ಒಟ್ಟು ಮೊತ್ತವಾಗಿ ಗ್ಲಾಸ್ ಆಗಿದ್ದು 6.2 ಇಂಚಿನ IPS LCD ಡಿಸ್ಪ್ಲೇಯೊಂದಿಗೆ 18:9 ಆಸ್ಪೆಕ್ಟ ರೇಷುವಿನೊಂದಿಗೆ ಲೆಸ್ ಬೆಝಲ್ಗಳನ್ನು ಸೈಡ್ ಮತ್ತು ಕೆಳ ಭಾಗದಲ್ಲಿ ಹೊಂದಿದೆ.

ಇದರ ಡಿಸ್ಪ್ಲೇ ನಿಜಕ್ಕೂ ಹೆಚ್ಚು ವೈಬ್ರೆಂಟ್ ಹಾಗು ಸಾಕಾಗುವಷ್ಟು ಬ್ರೈಟ್ನೆಸನ್ನು ಹೊಂದಿದ್ದು 95% DCI P3 ಕಲರ್ ಗ್ಯಾಮೇಟನ್ನು ಸಪೋರ್ಟ್ ಮಾಡುತ್ತದೆ. Asus Zenfone 5Z ಬೇಟರ್ ವೀವಿಂಗ್ ಆಂಗಲ್ ಮತ್ತು ನಿರ್ದಿಷ್ಟವಾದ ದೃಶ್ಯ ನಿಷ್ಠೆಯನ್ನು ಸಹ ಹೊಂದಿದೆ. ಅಲ್ಲದೆ ಸೂರ್ಯನ ಬೆಳಕಲ್ಲು ಸಹ ಇದು HDಯಲ್ಲಿರುವ ವೀಡಿಯೊ ಮತ್ತು ಮೂವಿಗಳನ್ನು ನೋಡಬವುದು. ನಾನು ಇದರಲ್ಲಿ The Secret Life of Pets ಮೂವಿಯ ಟ್ರೈಲರ್ ನೋಡಿದೆ ನಿಜಕ್ಕೂ ನನಗಂತೂ ಹೆಚ್ಚು ಇಷ್ಟವಾಯಿತು.

https://static.digit.in/default/5a903c0d8dd028b4e191623eaf0d744cd3920390.jpeg

ಇದರಲ್ಲಿನ ಕಲರ್ ಮತ್ತು ವೈಟ್ ಬ್ಯಾಲೆನ್ಸ್ ಅದ್ಭುತವಾಗಿ ಮೂಡಿವೆ. ಹೆಚ್ಚುವರಿ LCD ಪ್ಯಾನಲ್ಗಳಂತೆ ಇದರಲ್ಲೂ ವೈಟ್ ಬ್ಯಾಲೆನ್ಸ್ ಕೊಂಚ ಕಡಿಮೆಯಾದರೂ ಸಾಕಾಗುವಷ್ಟು ನೀಡುತ್ತದೆ. ಇದರಲ್ಲಿ ಮುಖ್ಯವಾಗಿರುವ ಫೀಚರ್ ಅಂದ್ರೆ ಇದರಲ್ಲಿನ AI ಫೀಚರ್ಗಳು ಇದರಲ್ಲಿ AI ಚಾರ್ಜಿಂಗ್, AI ರಿಂಗ್ಟೋನ್, AI ಕ್ಯಾಮೆರಾ, AI ಆಪ್ ರೇಕೆಂಮೇಡೇಷನ್ ಇನ್ನು ಹೆಚ್ಚಿನ ಫೀಚರ್ಗಳನ್ನು ಹೊಂದಿದೆ. ಇದರಲ್ಲಿನ ಈ ಫೀಚರ್ಗಳನ್ನು ನೋಡ್ತಾಯಿದ್ರೆ ಈಗ ನಮ್ಮನ್ನು ರೋಬೋರ್ಟ್ಗಳ ಕೈಯಲ್ಲಿಡುವ ಟೈಮ್ ಬಂದೆ ಬಿಡ್ತು ಅನ್ಸುತ್ತೆ. ನಾನು ಹೇಳಕ್ಕಿಂತ ಹೆಚ್ಚಾಗಿ ಒಮ್ಮೆ ನೀವು ಬಳಸಿದರೆ ಇದರ ಬಗ್ಗೆ ಇನ್ನು ಹೆಚ್ಚಾಗಿ ತಿಳಿಯಬವುದು.

ಈ ಹೊಸ Asus Zenfone 5Z ನಲ್ಲಿ ನಿಮಗೆ ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ 845 ಚಿಪ್ಸೆಟ್ ಒಳಗೊಂಡಿದ್ದು ಇದು ಈ ಫೋನಿನ ಪೆರ್ಫಾಮೆನ್ಸ್ ನಿಮ್ಮನ್ನು ನಿಜಕ್ಕೂ ಖುಷಿ ನೀಡುತ್ತದೆ ಏಕೆಂದರೆ ಇದರಲ್ಲಿ ನೀವು ಹ್ಯಾಂಗ್ ಆಗುವ ಅನುಭವ ತುಂಬ ಕಡಿಮೆ ಮಟ್ಟದಲ್ಲಿ ನೋಡಬವುದು. ಈ ಹೊಸ Asus Zenfone 5Z ನಿಮಗೆ 6-8GB RAM ಮತ್ತು 64 – 128 – 256 ಯಂತಹ 3 ಸ್ಟೋರೇಜ್ ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಅಲ್ಲದೆ ಇದರಲ್ಲಿ ನಾನಾಡಿದ PubG ಗೇಮ್ ನಿಜಕ್ಕೂ ಸಾಫ್ಟಗಿ ಆಡಲು ಅನುವು ಮಾಡಿಕೊಡುತ್ತದೆ ಯಾವುದೇ ಅಡೆತಡೆಗಳಿಲ್ಲ.

ಇದರ ಸಿಂಥೆಟಿಕ್ ಬೆಂಚ್ ಮಾರ್ಕ್ ಬಗ್ಗೆ ಹೇಳಬೇಕೆಂದರೆ ಅಂತುತು 7.0 ಪ್ರಕಾರ ಈ ಫೋನ್ OnePlus 6 ಅನ್ನು 268993 ಸ್ಕ್ರೋರ್ಗಳೊಂದಿಗೆ ಹಿಂದೆ ಹಾಕಿದೆ. ಅಲ್ಲದೆ ಗೀಕ್ ಬೆಂಚ್ ಸಿಂಗಲ್ ಕೋರಲ್ಲಿ 2434 ಆದರೆ ಗೀಕ್ ಬೆಂಚ್ ಮಲ್ಟಿ ಕೊರಲ್ಲಿ 7388 ಸ್ಕೂರ್ ಮಾಡಿದೆ. OnePlus 6 ಕೇವಲ ಇದರ ಎರಡನೇ ಟೆಸ್ಟಲ್ಲಿ ಮಾತ್ರ ಉತ್ತಮವಾಗಿದೆ. ಅಲ್ಲದೆ ಇದರ ಗ್ರಾಫಿಕ್ ಟೆಸ್ಟ್ ಬಗ್ಗೆ ಹೇಳಬೇಕೆಂದರೆ 3D ಮಾರ್ಟ್ ಸ್ಲೀಗ್ ಶೋಟಲ್ಲಿ 6317 ಪಾಯಿಂಟ್ಗಳೊಂದಿಗೆ ಬಂದರೆ OnePlus 6 ಕೇವಲ 5702 ಪಾಯಿಂಟ್ಗಳನ್ನು ಗಳಿಸಿತ್ತು. 
   https://static.digit.in/default/27a514de39c6372e250a1ef9395fd001cdb1ba7f.jpeg     
ಈ ಹೊಸ Asus Zenfone 5Z ಸ್ಮಾರ್ಟ್ಫೋನಲ್ಲಿ ಡ್ಯೂಯಲ್ ಸ್ಪೀಕರ್ಗಳಿವೆ. ಅಲ್ಲದೆ ಇವು NXP ಆಂಪ್ಲಿಫೈಯರೊಂದಿಗೆ ಹೆಚ್ಚು ವಾಲ್ಯೂಮ್ ನೀಡುತ್ತದೆ. ಆದರೆ ಇದರ ಸ್ಟಿರಿಯೋವನ್ನು ಬೇರೆ ಮಾಡಲಾಗುವುದಿಲ್ಲ. ಅಲ್ಲದೆ ಈ ಫೋನ್ ನಿಮಗೆ Hi-Res ಆಡಿಯೋವನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಫೋನ್ ಹೈ-ರೆಸ್ ಇಯರ್ಫೋನ್ಗಳ ಜೊತೆಗೂಡಿಸಲ್ಪಡುತ್ತದೆ ಇದು ಉತ್ತಮವಾಗಿದೆ ಆದರೆ ಸ್ಯಾಮ್ಸಂಗ್ ಗ್ಯಾಲಕ್ಸಿ S9 ನೊಂದಿಗೆ ಸಿಗುವ AKG IEM ಗಳಂತಿಲ್ಲ.

ಈಗ ಇದರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ Asus Zenfone 5Z ಯಲ್ಲಿ ನನಗೆ ಒಟ್ಟಾರೆಯಾಗಿ ಒಂದು ಮಿಕ್ಸ್ ಅನುಭವವಾಗಿದೆ. ಇದರಲ್ಲಿ ಟಾಪ್ ನಾಚ್ ಕ್ಯಾಮೆರಾ ಹಾರ್ಡ್ವೇರ್ ವಿಥ್ AI ಫೀಚರ್ ಇದು ನಿಮಗೆ ಒಂದು ಅತ್ಯುತ್ತಮವಾದ ಫೋಟೋ ನೀಡುತ್ತದೆ ಅಥವಾ ಅದೇ ಫೋಟೋವನ್ನು ನೀವು ಕಳಪೆಯಾಗಿ ಮಾಡಲು ಸಹ ನಿಮ್ಮ ಸಾತ್ ನೀಡುತ್ತದೆ. ಕೆಲ ಒಮ್ಮೆ ಇದು ಅದ್ದೂರಿಯಾಗಿ ಆಶ್ಚರ್ಯವನ್ನುಂಟು ಮಾಡುತ್ತದೆ. ಇದರ ಬ್ಯಾಕಲ್ಲಿ ನಿಮಗೆ 12+8MP ಡ್ಯೂಯಲ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಇದರಲ್ಲಿ Sony IMS 3637 ಸೆನ್ಸರಿನೊಂದಿಗೆ F1.8 ಅಪೆರ್ಚರೊಂದಿಗೆ ಬರುತ್ತದೆ. ಎರಡನೆಯ ಕ್ಯಾಮೆರಾ 8MP ಅಲ್ಟ್ರಾ ವೈಡ್ ಏಂಗಲ್ ಲೆನ್ಸ್ F.2.0 ಅಪೆರ್ಚರ್ ಹೊಂದಿದೆ.

https://static.digit.in/default/d3a8800ca3d8cab26798148d0e682ba69035fe8c.jpeg

ಕೊನೆಯದಾಗಿ ಈ ಹೊಸ Asus Zenfone 5Z ಯಲ್ಲಿ ನಿಮಗೆ 3300mAh ಧೀರ್ಘಕಾಲದ ಬ್ಯಾಟರಿಯನ್ನು ಹೊಂದಿರುತ್ತದೆ. ಇದು OnePlus 6 ಫೋನಂತೆಯೇ ಇದೆ. ಅಲ್ಲದೆ ನಮ್ಮ ಈ PC ಮಾರ್ಕ್ ಟೆಸ್ಟ್ ಪ್ರಕಾರ ಒಮ್ಮೆ ಮಾಡಿದ ಫುಲ್ ಚಾರ್ಜ್ ನಿಮಗೆ ಸುಮಾರು 8 ಘಂಟೆ 40 ನಿಮಿಷಗಳ ಲೈಫನ್ನು ನೀಡಿದೆ. ಈ ಫೋನ್ ಕ್ವಿಕ್ ಚಾರ್ಜಿಂಗನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ ಇದು ನಿಮಗೆ 18W ಚಾರ್ಜಿಂಜಿನೊಂದಿಗೆ ಬರುತ್ತದೆ ಇದು ಒಂದು ಘಂಟೆಯಲ್ಲಿ ನಿಮ್ಮ ಫೋನನ್ನು ಪೂರ್ತಿ ಮಾಡುತ್ತದೆ.       
ಇದರ ಬೆಲೆ  29,999 ರೂಗಳು.
 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo